ಜೀಪು ಚಾಲಕ ನಿಧನ

ಪೆರ್ಲ: ಹಿರಿಯ ಜೀಪು ಚಾಲಕ ರವೀಂದ್ರ ಶೆಟ್ಟಿ (58)ನಿಧನ ಹೊಂದಿದರು. ಮೂಲತಃ ಕರ್ನಾಟಕದ ವರಾಗಿದ್ದ ಇವರು ಎಣ್ಮಕಜೆಯ ಸೇರಾಜೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಕಿದೂರಿನ ತನ್ನ ಪುತ್ರಿಯ ಮನೆಯಿಂದ ಹೊರಡುತ್ತಿದ್ದ ಮಧ್ಯೆ ಕುಸಿದು ಬಿದ್ದರೆನ್ನಲಾಗಿದೆ. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ಮೃತರು ಪತ್ನಿ ಲತ ರೈ, ಮಕ್ಕಳಾದ ಸಿಂಚನ, ಸಂಜನ್, ಅಳಿಯ ಕಿಶೋರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪೊಸೋಟು ಹೆದ್ದಾರಿಯಲ್ಲಿ ಕರ್ನಾಟಕ ಸಾರಿಗೆ ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ: ಹಲವರಿಗೆ ಗಾಯ

ಮಂಜೇಶ್ವರ: ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಚಾಲಕ ಸಹಿತ ಹಲವು ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾದ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ಕಾಸರಗೋಡಿನಿಂದ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ಬಸ್ ರಾಷ್ಟಿಯ ಹೆದ್ದಾರಿ ಪೊಸೋಟು ಜಂಕ್ಷನ್‌ನಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಲ್ಲಿಂದ ಇನ್ನೊಂದು ಭಾಗದ ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಈ ಅಪಘಾತದಲ್ಲಿ ಚಾಲಕ ಹಾಗೂ ಮಹಿಳೆಯರು ಸೇರಿದಂತೆ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗೊಂ ಡಿದ್ದು, …

ಪಳ್ಳತ್ತಡ್ಕ ಶಾಲೆ ಶಿಕ್ಷಕ ಗುರುಪ್ರಸಾದ್‌ರನ್ನು ಸೇವೆಯಿಂದ ಅಮಾನತುಗೊಳಿಸಿದ ಕ್ರಮ ಖಂಡನೀಯ ಶಿಕ್ಷಕ ನಡೆಸುವ ಹೋರಾಟಕ್ಕೆ ಪೂರ್ಣ ಬೆಂಬಲ-ಕೆ.ಸುರೇಂದ್ರನ್

ಕಾಸರಗೋಡು: ಫ್ರೀಡಂ ಕ್ವಿಜ್ ಹೆಸರಿನಲ್ಲಿ ಪಳ್ಳತ್ತಡ್ಕ ಎಯುಪಿ ಶಾಲೆಯ ಶಿಕ್ಷಕ ಗುರುಪ್ರಸಾದ್‌ರನ್ನು ಸೇವೆಯಿಂದ ಅಮಾನತುಗೊಳಿಸಿದ ಕ್ರಮ ಅತ್ಯಂತ ಖಂಡನೀಯವಾಗಿ ದೆಯೆಂದು ಬಿಜೆಪಿ ನೇತಾರ ಕೆ.ಸುರೇಂದ್ರನ್ ತಿಳಿಸಿದ್ದಾರೆ.  ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂ ಧಿಸಿ ಸುಧೀರ್ಘಕಾಲ ಜೈಲುಶಿಕ್ಷೆ ಅನುಭ ವಿಸಿದ್ದು, ವಿ.ಡಿ. ಸಾವರ್ಕರ್ ಅವರಾಗಿದ್ದಾ ರೆಂಬುವುದು  ಐತಿಹಾಸಿಕ ಸತ್ಯವಾಗಿದೆ. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲವೆಂದು ಇದುವರೆಗೆ ಯಾರೂ ಹೇಳಿಲ್ಲ. ಅವರು ಸುಧೀರ್ಘ ಕಾಲ ಜೈಲಿನಲ್ಲಿದ್ದರೆಂಬ ವಿಷಯವನ್ನೂ ಯಾರೂ ನಿರಾಕರಿಸುವು ದಿಲ್ಲ. ಅವರ   ವಿರುದ್ಧ ಕಾಂಗ್ರೆಸ್ ಮತ್ತು ಎಡ-ಜಿಹಾದಿ ಪಡೆಗಳು ಹೊರಿಸಿದ …