ಜೀಪು ಚಾಲಕ ನಿಧನ

ಪೆರ್ಲ: ಹಿರಿಯ ಜೀಪು ಚಾಲಕ ರವೀಂದ್ರ ಶೆಟ್ಟಿ (58)ನಿಧನ ಹೊಂದಿದರು. ಮೂಲತಃ ಕರ್ನಾಟಕದ ವರಾಗಿದ್ದ ಇವರು ಎಣ್ಮಕಜೆಯ ಸೇರಾಜೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಕಿದೂರಿನ ತನ್ನ ಪುತ್ರಿಯ ಮನೆಯಿಂದ ಹೊರಡುತ್ತಿದ್ದ ಮಧ್ಯೆ ಕುಸಿದು ಬಿದ್ದರೆನ್ನಲಾಗಿದೆ. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ಮೃತರು ಪತ್ನಿ ಲತ ರೈ, ಮಕ್ಕಳಾದ ಸಿಂಚನ, ಸಂಜನ್, ಅಳಿಯ ಕಿಶೋರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page