ಕುಂಬಳೆ: ಶಿಕ್ಷಣ ಸಚಿವ ಭಾಗವಹಿಸಿದ ಕಾರ್ಯಕ್ರಮಕ್ಕೆ ಬಿಜೆಪಿಯ ಪ್ರತಿಭಟನಾ ಮೆರವಣಿಗೆ: ಇದರ ವಿರುದ್ಧ ವಿರುದ್ಧ ಲೀಗ್‌ನಿಂದಲೂ ಪ್ರತಿಭಟನೆ ; ಸ್ಥಳದಲ್ಲಿ ಸಂಘರ್ಷಾವಸ್ಥೆ
ಕುಂಬಳೆ: ಕುಂಬಳೆ ಜಿಎಸ್‌ಬಿಎಸ್ ಶಾಲೆಯ ಬಹು ಅಂತಸ್ತಿನ ಕಟ್ಟಡವನ್ನು ರಾಜ್ಯ ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಇಂದು ಬೆಳಿಗ್ಗೆ ಉದ್ಘಾಟಿಸಿದರು. ಇದೇ ವೇಳೆ ವಿ.ಡಿ. ಸಾವರ್ಕರ್‌ರನ್ನು ಸಚಿವರು ಅವಮಾನಿಸಿದ್ದಾರೆಂದೂ ಆದ್ದರಿಂದ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಸಚಿವರು ಭಾಗವಹಿಸಿದ ಕಾರ್ಯಕ್ರಮಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿತು. ಇದೇ ವೇಳೆ ಬಿಜೆಪಿ ವಿರುದ್ಧ ಯೂತ್ ಲೀಗ್ ಕಾರ್ಯಕರ್ತರು ರಂಗಕ್ಕಿಳಿದಿದ್ದು ಇದರಿಂದ ಸ್ಥಳದಲ್ಲಿ ಸಂಘರ್ಷಾವಸ್ಥೆ ಸೃಷ್ಟಿಯಾಗಿದೆ. ಸಚಿವರು ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದಂತೆಯೇ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ …