ಯಶೋಧ ನಿಧನ

ಉಪ್ಪಳ: ಪ್ರತಾಪನಗರ ಪುಳಿಕುತ್ತಿ ನಿವಾಸಿ ದಿ.ಅಚ್ಚುತ್ತರ ಪತ್ನಿ ಯಶೋಧ [85] ಶುಕ್ರವಾರ ನಿಧನ ಹೊಂದಿದರು. ಮೃತರ ಮಕ್ಕಳಾದ ರಮೇಶ ಕಾಸರಗೋಡು, ಪ್ರಭಾಕರ ಮುಂಬೈ, ಸೊಸೆಯಂದಿರಾದ ವೃಂದ, ಲತಾ, ಅಳಿಯ ಭಾಸ್ಕರ ಕಾಸರಗೋಡು, ಸಹೋದರ ಶ್ರೀನಿವಾಸ ಪ್ರತಾಪನಗರ, ಸಹೋದರಿ ಸುಲೋಚನ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪುತ್ರಿ ಕಾರ್ತಾ್ಯಯಿನಿ, ಸಹೋದರರಾದ ದಾಮೋದರ ವೈದ್ಯರ್,ಕುಂಞರಾಮ ವೈದ್ಯರ್, ನಾರಾಯಣ ಈ ಹಿಂದೆ ನಿಧನರಾಗಿದ್ದಾರೆ. ನಿಧನಕ್ಕೆ ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರದ ಆಡಳಿತ ಸಮಿತಿ, ಉತ್ಸವ ಸಮಿತಿ, ಭಜನಾ …

ಸಿಪಿಐಯಿಂದ ದೆಹಲಿ ಚಲೋ::ಪೈವಳಿಕೆಯಲ್ಲಿ ಕಾಲ್ನಡೆ ಪ್ರಚಾರ ಜಾಥಾ

ಪೈವಳಿಕೆ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹಾಗೂ ದೇಶದ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಫೆಡರಲಿಸಂನ ಮೌಲ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಸೆಪ್ಟೆಂಬರ್ ೧ರಂದು ನಡೆಸಲಿರುವ ‘ದೆಹಲಿ ಚಲೋ’ ಕಾರ್ಯಕ್ರಮದ ಅಂಗವಾಗಿ ಕಾಲ್ನಡೆಗೆ ಪ್ರಚಾರ ಜಾಥಾ ನಡೆಯಿತು. ಸಿಪಿಐ ಪೈವಳಿಕೆ ಲೋಕಲ್ ಸಮಿತಿ ನೇತೃತ್ವದಲ್ಲಿ ನಿನ್ನೆ ಬಾಯಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.ಶಾಸಕ ಗೋವಿಂದನ್ ಪಳ್ಳಿಕ್ಕಾಪ್ಪಿಲ್ ಉದ್ಘಾಟಿಸಿದರು. ಸಿಪಿಐ ಮಂಡಲ ಸಮಿತಿ ಸದಸ್ಯ ಚಣಿಯಾ ಕೊಮ್ಮಂಗಳ ಅಧ್ಯಕ್ಷತೆ ವಹಿಸಿದ್ದರು. …