ಪ್ಲಸ್‌ಟು ವಿದ್ಯಾರ್ಥಿನಿ, ತಂದೆಯ ಆತ್ಮಹತ್ಯೆ: ಮುಂದುವರಿದ ನಿಗೂಢತೆ
ಕಾಸರಗೋಡು: ತಂದೆ ಹಾಗೂ ಪ್ಲಸ್‌ಟು ವಿದ್ಯಾರ್ಥಿನಿಯಾದ ಪುತ್ರಿ ಬಾಡಿಗೆ ಮನೆಯಲ್ಲಿ ನೇಣುಬಿಗಿದು ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ ಮುಂದುವರಿದಿದೆ. ತಂದೆ ಹಾಗೂ ಮಗಳು ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿಲ್ಲ. ಈ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಕರ್ನಾಟಕ ನಿವಾಸಿಯೂ ಕಾಸರಗೋಡು ಮೀಪುಗುರಿಯಲ್ಲಿ ವಾಸಿಸುತ್ತಿದ್ದ ಗಣೇಶ (55) ಹಾಗೂ ಪರವನಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿನಿಯಾದ ಪುತ್ರಿ ವೈಷ್ಣವಿ (17) ಎಂಬಿವರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೊನ್ನೆ ರಾತ್ರಿ ಪತ್ತೆಯಾಗಿದ್ದಾರೆ. ಚೆಮ್ನಾಡ್ ಕೋಳಿಯಡ್ಕ ಶಿವಪುರಂ ಕ್ಷೇತ್ರ ಸಮೀಪದ ಎರಡಂತಸ್ತಿನ …
Read more “ಪ್ಲಸ್‌ಟು ವಿದ್ಯಾರ್ಥಿನಿ, ತಂದೆಯ ಆತ್ಮಹತ್ಯೆ: ಮುಂದುವರಿದ ನಿಗೂಢತೆ”