ಗುರುವಪ್ಪ ಎಚ್.ಎ ನಿಧನ

ಕುಂಬಳೆ: ಕಿದೂರು ಕುಂಟಂಗೇರಡ್ಕದ ಗುರುವಪ್ಪ ಎಚ್.ಎ. (63) ಇಂದು ಮುಂಜಾನೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ನಿನ್ನೆ ಉಸಿರಾಟ ಸಮಸ್ಯೆ ಕಂಡು ಬಂದ ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ರವಿರಾಜ್ (ಕುಂಬಳೆ ಪಂ. ಮಾಜಿ ಸದಸ್ಯ), ಮನುರಾಜ್, ಸೊಸೆಯಂದಿ ರಾದ ಚಂದ್ರಾವತಿ, ಕೃಪಾ, ಸಹೋ ದರರಾದ ಬಾಲಚಂದ್ರ, ರವಿಶಂಕರ, ಪ್ರಕಾಶ್, ಹರಿಪ್ರಸಾದ್, ಸಹೋದರಿ ಯಮುನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಗುರುವಪ್ಪರ ಇನ್ನೋರ್ವೆ ಪತ್ನಿ ಪ್ರಭಾವತಿ ಈ ಹಿಂದೆ ನಿಧನ ಹೊಂದಿದ್ದಾರೆ.

ಮಹಿಳೆ ಕುಸಿದು ಬಿದ್ದು ನಿಧನ

ಪೆರ್ಲ: ಮಣಿಯಂಪಾರೆ ಸಮೀಪದ ಶೇಣಿ ನಿವಾಸಿ ಯಶೋಧ (51) ನಿನ್ನೆ ಸಂಜೆ ಕುಸಿದು ಬಿದ್ದು ನಿಧನ ಹೊಂದಿದರು. ದಿ| ಶೇಣಿ ರಾಮಕೃಷ್ಣ ಬೋರ್ಕರ್- ದಿ| ಶಾರದಾ ದಂಪತಿ ಪುತ್ರಿಯಾದ ಇವರ ಪತಿ ಮುಕುಂದ ವಾಗ್ಲೆ ಕುರಿಯತ್ತಡ್ಕ ಈ ಹಿಂದೆಯೇ ನಿಧನ ಹೊಂದಿದ್ದಾರೆ.ಮೃತರು ಮಕ್ಕಳಾದ ರಮ್ಯ, ರಾಘವೇಂದ್ರ (ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲಾ ಉದ್ಯೋಗಿ), ಅಳಿಯ ಅವಿನಾಶ್, ಸಹೋದರ ರಘುರಾಮ ಬೋರ್ಕರ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.