ಓಣಂ ಹಬ್ಬಾಚರಣೆ ಮಧ್ಯೆ ಪಾಳು ಬಾವಿಗೆ ಬಿದ್ದ ಬಾಲಕ : ಬಾಲಕನ ಸ್ಥಿತಿ ಗಂಭೀರ 

ಕಾಸರಗೋಡು:  ಓಣಂ ಆಚರಣೆ ಕಾರ್ಯಕ್ರಮಕ್ಕೆ ತೆರಳಿದ್ದ 15ರ ಹರೆಯದ ಬಾಲಕ ಪಾಳುಬಾವಿಗೆ ಬಿದ್ದ ಘಟನೆ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತಲುಪಿದ ಚೀಮೇನಿ ಅಗ್ನಿಶಾಮದಳ  ಬಾಲಕನನ್ನು ಮೇಲೆತ್ತಿ ಆಸ್ಪತ್ರೆಗೆ ತಲುಪಿಸಿದೆ. ಪುಲ್ಲಾಂಞಿಪ್ಪಾರ ನಿವಾಸಿಯಾದ ಸನೂಪ್ (15)  ಅಪಾಯಕ್ಕೆಡೆ ಯಾದ ಬಾಲಕ. ನಿನ್ನೆ ರಾತ್ರಿ 8.45ರ ವೇಳೆ ಚೀಮೇನಿ ಚೆಂಬ್ರಕಾನದಲ್ಲಿ ಜರಗಿದ ಓಣಂ ಹಬ್ಬಾಚರಣೆ ಕಾರ್ಯ ಕ್ರಮಕ್ಕೆ ಸನೂಪ್ ಹಾಗೂ ಗೆಳೆಯರು  ತಲುಪಿದ್ದರು. ಕಾರ್ಯ ಕ್ರಮ ನಡೆಯುತ್ತಿದ್ದ ಮಧ್ಯೆ ಗೆಳೆ ಯರೊಂದಿಗೆ  ಮೂತ್ರಶಂಕೆಗೆಂದು ಹೋದಾಗ  ಆವರಣವಿಲ್ಲದ ಬಾವಿಗೆ ಬಿದ್ದಿದ್ದಾನೆ.  …

ಬ್ರಹ್ಮಶ್ರೀ ನಾರಾಯಣಗುರು ಜಯಂತಿಗೆ ಚಾಲನೆ

ಕಾಸರಗೋಡು: ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಂಗ ವಾಗಿ ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಿಧ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ಧ್ವಜಾರೋ ಹಣ, ಗುರುಪೂಜೆ ಜರಗಿತು. ಸಂಘದ ಅಧ್ಯಕ್ಷ ಎನ್. ಸತೀಶ್ ಧ್ವಜಾರೋಹಣ ಗೈದರು. ಮುಕುಂದನ್ ಗುರುಸಂದೇಶ ನೀಡಿದರು. ಅರ್ಚಕ ಅನೀಶ್, ಉಪಾಧ್ಯಕ್ಷ ಗಣೇಶ್ ಪಾರೆಕಟ್ಟೆ,  ಕೋಶಾಧಿಕಾರಿ ಉಮೇಶ್, ಸದಸ್ಯರಾದ ಆರ್.ಪಿ. ರಮೇಶ್ ಬಾಬು, ನಿರ್ಮಲಾ ಉಪೇಂದ್ರನ್, ನಿರ್ಮಲಾ ಅಚ್ಯುತನ್, ಸುಮಿತ್ರ, ಆಚರಣೆ ಸಮಿತಿ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಅರವಿಂದನ್, ಸುನಿಲ್, ಬಿಜೇಶ್, ಶರತ್, ರಮೇಶ್ ಭಾಗವಹಿಸಿದರು. …

ರೈಲಿನಲ್ಲಿ ಕಳವು: ತಾಸುಗಳೊಳಗೆ ಆರೋಪಿ ಸೆರೆ

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಕನ ಐಪ್ಯಾಡ್, ಮೊಬೈಲ್ ಫೋನ್ ಇತ್ಯಾದಿ ಸಾಮಗ್ರಿಗಳನ್ನು ಕಳವುಗೈದ ಆರೋಪಿಯನ್ನು ಘಟನೆ ನಡೆದ 24 ತಾಸುಗಳೊಳಗಾಗಿ ಬಂಧಿಸುವಲ್ಲಿ ಕಾಸರಗೋಡು ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ ನಿವಾಸಿ ಬರೇದ್ರ ರಾವುತ್ತರ್ (37) ಬಂಧಿತ ಆರೋಪಿ. ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಎಸ್.ಐ. ಸನಿಲ್ ಕುಮಾರ್‌ರ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ. ಮಂಗಳೂರಿನಿಂದ ಕಾಸರ ಗೋಡಿನತ್ತ ಬರುತ್ತಿದ್ದ ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ ರೈಲು ಗಾಡಿಯಲ್ಲಿ ರಾತ್ರಿ ವೇಳೆ ಈ ಕಳವು ನಡೆದಿದೆ. ಇದರಲ್ಲಿ ಪ್ರಯಾಣಿಸುತ್ತಿದ್ದ ಮಲಪ್ಪುರಂ …

ಪೊಲೀಸ್ ಠಾಣೆಗೆ ತಲುಪಿದ ಮಹಿಳೆಯರೊಂದಿಗೆ ಅನುಚಿತ ವರ್ತನೆ: ಕಾಸರಗೋಡು ನಗರ ಠಾಣೆ ಎಸ್‌ಐ ಅಮಾನತು

ಕಾಸರಗೋಡು:  ಪೊಲೀಸ್ ಠಾಣೆಯಲ್ಲಿ ಆರೋಪಿಗಳನ್ನು  ಭೇಟಿಯಾಗಲು ತಲುಪಿದ ಸಂಬಂಧಿಕರೊಂದಿಗೆ ಅನುಚಿತವಾಗಿ ವರ್ತಿಸಿ, ಅವರ ಮೊಬೈಲ್ ಫೋನ್ ವಶಪಡಿಸಿ ನಾಶಗೊಳಿಸಿದ ಘಟನೆಗೆ ಸಂಬಂಧಿಸಿ ಕಾಸರಗೋಡು ನಗರ ಪೊಲೀಸ್ ಠಾಣೆಯ ಎಸ್.ಐ ಸೈಫುದ್ದೀನ್‌ರನ್ನು ತನಿಖಾ ವಿಧೇಯವಾಗಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕಣ್ಣೂರು ಡಿಐಜಿ ಕೆ. ಕಾರ್ತಿಕ್ ಈ ಕ್ರಮ ಕೈಗೊಂಡಿದ್ದಾರೆ. ಎಸ್‌ಐಯ ವರ್ತನೆಯಿಂದ ಸಾರ್ವಜನಿಕರು ಸಮಸ್ಯೆಗೊಳ ಗಾಗಿದ್ದು, ಅಲ್ಲದೆ ಪೊಲೀಸ್ ಸೇನೆಗೆ ಕಳಂಕ ಸೃಷ್ಟಿಸಿರುವುದಾಗಿ ಆರೋಪಿಸಿ ಎಸ್ ಐ ವಿರುದ್ಧ  ವರದಿ ಸಲ್ಲಿಸಲಾಗಿದೆ. ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಎಸ್‌ಐ ವಿರುದ್ಧ …

ತೋಟಕ್ಕೆ ತೆರಳಿ ನಾಪತ್ತೆಯಾಗಿದ್ದ ಗೃಹಿಣಿಯ ಮೃತದೇಹ ತೋಡಿನಲ್ಲಿ ಪತ್ತೆ

ಅಡೂರು: ಅಡಿಕೆ ಹೆಕ್ಕಲು ತೋಟಕ್ಕೆ ಹೋಗಿ ಬಳಿಕ ನಾಪತ್ತೆಯಾಗಿದ್ದ ಗೃಹಿಣಿ ಸಮೀಪದ ತೋಡಿನಲ್ಲಿ  ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮಲ್ಲಂಪಾರೆ ತಿಮ್ಮನಗುಂಡಿಯ ದಿ| ಚೋಮಣ್ಣ ನಾಯ್ಕರ ಪತ್ನಿ ಗುಲಾಬಿ ಭಾ (68) ಅವರ ಮೃತದೇಹ  ನಿನ್ನೆ ಅಗ್ನಿಶಾಮಕದಳ ಹಾಗೂ ನಾಗರಿಕರು ನಡೆಸಿದ ಶೋಧ ವೇಳೆ ಪತ್ತೆಯಾಗಿದೆ. ಮೊನ್ನೆ ಸಂಜೆ ಗುಲಾಬಿ ಭಾ ತೋಟಕ್ಕೆ  ತೆರಳಿದ್ದರು. ಬಳಿಕ  ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಶೋಧ ನಡೆಸಿದಾಗ ತೋಟದ ಬಳಿಯ ತೋಡಿನ ಬದಿ ಚಪ್ಪಲಿ ಕಂಡುಬಂದಿತ್ತು. ಇದರಿಂದ ಅಗ್ನಿಶಾಮಕದಳ ಹಾಗೂ ನಾಗರಿಕರು …

ನಿಲ್ಲಿಸಿದ್ದ ಲಾರಿ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ನಿಲ್ಲಿಸಿದ್ದ ಲಾರಿ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ನೀಲೇಶ್ವರ ಚಿರಪುರಂ ಆಲಿನ್ ಕೀಳಿಲ್‌ನಲ್ಲಿ  ನಿಲ್ಲಿಸಿದ್ದ ಚಿರಪುರಂ ಮಣ್ಣಾರತ್ ಹೌಸ್‌ನ ಜೋಷಿ ಥೋಮಸ್ ಎಂಬವರ  ಲಾರಿ ನಿನ್ನೆ ಮುಂಜಾನೆ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಲಾರಿಯ ಕ್ಯಾಬಿನ್, ಇಂಜಿನ್ ಸೇರಿದಂತೆ  ಹೆಚ್ಚಿನ ಭಾಗಗಳು ಪೂರ್ಣವಾಗಿ ಸುಟ್ಟುಹೋಗಿದೆ. ಆ ಲಾರಿಯ ಸಮೀಪ ಇತರ ಲಾರಿಗಳನ್ನು ನಿಲ್ಲಿಸಲಾಗಿತ್ತಾದರೂ ಅವುಗಳಿಗೆ ಯಾವುದೇ ರೀತಿಯ ಹಾನಿಯಾ ಗಿಲ್ಲ. ವಿಷಯ ತಿಳಿದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ.  ಲಾರಿ ಬೆಂಕಿಗಾಹುತಿಯಾದ ಬಗ್ಗೆ ಮಾಲಕ …

ಕಾಸರಗೋಡು ಎಲ್‌ಐಸಿ ಶಾಖೆಯಿಂದ  ಸಂಭ್ರಮದ ಓಣಂ ಆಚರಣೆ

ಕಾಸರಗೋಡು: ಕಾಸರಗೋಡು ಎಲ್ಐಸಿ ಶಾಖೆಯಲ್ಲಿ ಓಣಂ ಹಬ್ಬದಂಗವಾಗಿ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೇರಳ, ತಮಿಳುನಾಡು, ಪುದುಚ್ಚೇರಿ ಎಂಬಿವು ಒಳಗೊಂಡ ಎಲ್ಐಸಿ ದಕ್ಷಿಣ ವಲಯದ ಅಧಿಕಾರಿಗಳು, ನೌಕರರು, ಏಜೆಂಟರು ಭಾಗವಹಿಸಿದರು. ದಕ್ಷಿಣ ವಲಯ ಮೆನೇಜರ್ ಮುರಳೀಧರ ಮುಖ್ಯ ಅತಿಥಿಯಾಗಿದ್ದರು. ಆರ್.ಎಂ.(ಮಾರ್ಕೆಟಿಂಗ್) ಬಿಜುಮೋನ್, ಕಲ್ಲಿಕೋಟೆ ಡಿವಿಶನ್ ಮಾರ್ಕೆಟಿಂಗ್ ಮೆನೇಜರ್ ಜಯನ್, ಮೆನೇಜರ್ ಗೋವಿಂದ್ ಶುಭ ಕೋರಿದರು. ಕಾಸರಗೋಡು ಸೀನಿಯರ್ ಬ್ರಾಂಚ್ ಮೆನೇಜರ್ ಎಂ.ಪಿ. ಶ್ರೀಜಿತ್, ಎಡಿಎಂ ಪ್ರೀತಾ ಪ್ರೇಮನ್ ಮಾತನಾಡಿದರು. ಶೋಭಾ ಯಾತ್ರೆ, ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳು, …

ಕೊಯಿಪಾಡಿ ಕಡಲ ತೀರದಲ್ಲಿ ಸಮುದ್ರಪೂಜೆ

ಕುಂಬಳೆ: ಇಲ್ಲಿನ ಶ್ರೀ ವೀರವಿಠಲ ದೇವಸ್ಥಾನದ ವತಿಯಿಂದ ನಿಜಶ್ರಾವಣ ಮಾಸದ ಚತುರ್ದಶಿ ದಿನವಾದ ನಿನ್ನೆ ಕುಂಬಳೆ ಕೊಯಿಪಾಡಿ ಕಡಪ್ಪುರ ಕಡಲ ತೀರದಲ್ಲಿ ಸಮುದ್ರ ಪೂಜೆ ನಡೆಸಲಾ ಯಿತು. ಪ್ರಧಾನ ಅರ್ಚಕ ವೇದಮೂರ್ತಿ ಕೆ. ಪುಂಡಲೀಕ ಭಟ್ ನೇತೃತ್ವದಲ್ಲಿ ಶ್ರೀ ವಿಷ್ಣು ದೇವರ ಪ್ರೀತಿಗಾಗಿ ಹಾಗೂ ನಾಡಿನ ನಾಗರಿಕರಿಗೆ ಮಂಗಲ, ಆರೋಗ್ಯ ಲಭಿಸಲಿ ಎಂದು ಪ್ರಾರ್ಥಿಸಿ ಸಮುದ್ರರಾಜನಿಗೆ ಹಾಲು, ಅರಶಿಣಕುಂಕುಮ, ತೆಂಗಿನಕಾಯಿ, ನಾಣ್ಯ, ಸೀಯಾಳ ಸಹಿತ ಸುವಸ್ತುಗಳನ್ನು ಸಮರ್ಪಿಸಲಾಯಿತು. ದೇವಳದ ಆಡಳಿತ ಮೊಕ್ತೇಸರ ಕೆ. ನಾರಾಯಣ ಪ್ರಭು, ಆಡಳಿತ …

ಅಧ್ಯಾಪಕನ ಮನೆಯಲ್ಲಿ ಸಿದ್ಧಗೊಳ್ಳುತ್ತಿದೆ 60 ಗಣಪತಿ ವಿಗ್ರಹಗಳು

ಉಪ್ಪಳ: ಅಕ್ಷರ ಕಲಿಸುವ ಗುರುವಿನ ಮನೆಯಲ್ಲಿ ಜ್ಞಾನದ ಅಧಿಪತಿಯಾದ ಗಣಪತಿಯ ವಿಗ್ರಹಗಳು ತುಂಬಿ ಕೊಂಡಿವೆ. ಚೌತಿ ಹಬ್ಬ ಸಮೀಪಿಸುತ್ತಿದ್ದಂತೆ ಮಂಜೇಶ್ವರ ಶ್ರೀಮತ್ ಅನಂತೇಶ್ವರ ಕ್ಷೇತ್ರ ಪರಿಸರ ನಿವಾಸಿಯಾದ ಅಧ್ಯಾಪಕನ ಮನೆಯಲ್ಲಿ ಗಣಪತಿ ವಿಗ್ರಹ ಸಿದ್ದಗೊಳ್ಳುತ್ತಿದೆ. ಮಂಜೇಶ್ವರ ಎಸ್.ಎ.ಟಿ ಶಾಲೆಯ ಅಧ್ಯಾಪಕ ಲಕ್ಷ್ಮೀದಾಸ್ ಪ್ರಭು ಹಾಗೂ ಸಹೋದರ ದೇವದಾಸ್ ಪ್ರಭು ಗಣಪತಿ ವಿಗ್ರಹ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಗಳಲ್ಲಿ ಪೂಜಿಸುವ ವಿಗ್ರಹ ಗಳನ್ನೇ ಹೆಚ್ಚಾಗಿ ಇವರು ನಿರ್ಮಿಸುತ್ತಿದ್ದಾರೆ. ಈ ಬಾರಿ 60 ವಿಗ್ರಹಗಳು ಸಿದ್ದಗೊಳ್ಳುತ್ತಿದೆ. ಮಂಜೇಶ್ವರ, ಕುಂಬಳೆ, ಕಾಸರಗೋಡು, ಕಾಂಞಗಾಡ್, …

ಎಸ್‌ಸಿ ವಿಭಾಗಗಳನ್ನು ವಂಚಿಸುವುದರಲ್ಲಿ ವಿ.ಡಿ. ಸತೀಶನ್ ಪಿಣರಾಯಿ ವಿಜಯನ್‌ರ ಹಾದಿಯಲ್ಲಿ- ವಿ.ಸಿ. ಬಿನೀಶ್

ಕಾಸರಗೋಡು: ಎಸ್‌ಸಿ ವಿಭಾಗಗಳ ಸೌಲಭ್ಯಗಳನ್ನು ನಿಷೇಧಿಸುವುದರಲ್ಲಿ, ವಿಳಂಬಗೊಳಿಸುವುದರಲ್ಲಿ ವಿ.ಡಿ. ಸತೀಶನ್‌ರ ನೇತೃತ್ವದ ರಾಜ್ಯ ಸರಕಾರ ಪಿಣರಾಯಿ ವಿಜಯನ್‌ರ ಹಾದಿಯಲ್ಲೇ ಸಂಚರಿಸುತ್ತಿದೆ ಎಂದು ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸಿ. ಬಿನೀಶ್ ಮಾಸ್ತರ್ ನುಡಿದರು. ಸ್ಕಾಲರ್‌ಶಿಪ್, ಸ್ಟೈಫಂಡ್ ಸಹಿತದ 37.7 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವುದು ಇದಕ್ಕೆ ಪುರಾವೆ ಎಂದು ಅವರು ನುಡಿದರು. ಎಸ್‌ಸಿ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಬಿಜೆಪಿ ಜಿಲ್ಲಾ ಕೇಂದ್ರವಾದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ಆಯೋಜಿಸಿದ ಮಹಾತ್ಮಾ …