ಪೆರ್ಲ: ಮಣಿಯಂಪಾರೆ ಸಮೀಪದ ಶೇಣಿ ನಿವಾಸಿ ಯಶೋಧ (51) ನಿನ್ನೆ ಸಂಜೆ ಕುಸಿದು ಬಿದ್ದು ನಿಧನ ಹೊಂದಿದರು. ದಿ| ಶೇಣಿ ರಾಮಕೃಷ್ಣ ಬೋರ್ಕರ್- ದಿ| ಶಾರದಾ ದಂಪತಿ ಪುತ್ರಿಯಾದ ಇವರ ಪತಿ ಮುಕುಂದ ವಾಗ್ಲೆ ಕುರಿಯತ್ತಡ್ಕ ಈ ಹಿಂದೆಯೇ ನಿಧನ ಹೊಂದಿದ್ದಾರೆ.ಮೃತರು ಮಕ್ಕಳಾದ ರಮ್ಯ, ರಾಘವೇಂದ್ರ (ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲಾ ಉದ್ಯೋಗಿ), ಅಳಿಯ ಅವಿನಾಶ್, ಸಹೋದರ ರಘುರಾಮ ಬೋರ್ಕರ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.






