ಕಾರು ಢಿಕ್ಕಿ ಹೊಡೆದು ಚಿಕಿತ್ಸೆಯಲ್ಲಿದ್ದ ವೃದ್ಧ ಮೃತ್ಯು

ಕಾಸರಗೋಡು: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಪಾಣತ್ತೂರಿನ ಚೆಂಬಕಶ್ಶೇರಿ ಅಪ್ಪುಕುಟ್ಟನ್ (79) ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು. ಈ ತಿಂಗಳ 22 ರಂದು ಬೆಳಿಗ್ಗೆ ಪಾಣತ್ತೂರಿನ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಅವರ ದವಡೆ, ಪಕ್ಕೆಲುಬುಗಳು ಮತ್ತು ಆಂತರಿಕ ಅಂಗಗಳಿಗೆ ಗಾಯಗಳಾಗಿವೆ. ಮರಣೋತ್ತರ ಪರೀಕ್ಷೆಯ ನಂತರ ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಸಂಬAಧಿಕರು ತಿಳಿಸಿದ್ದಾರೆ. ಮೃತರು ಪತ್ನಿ ಎನ್.ಕೆ. ಪ್ರಸನ್ನ, ಮಕ್ಕಳಾದ ಸಿಂಧು, ಸಂಧ್ಯಾ, ಸಂದೀಪ್ …

ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಮಹಾನ್ ಸಮಾಜ ಸುಧಾರಕ ಶ್ರೀ ನಾರಾಯಣಗುರು- ಸತೀಶ್ಚಂದ್ರ ಭಂಡಾರಿ

ಕುಂಬಳೆ: ಸಮಾಜದಲ್ಲಿನ ಮೂಢನಂಬಿಕೆಗಳು ಮತ್ತು ಅನೈತಿಕತೆಗಳ ವಿರುದ್ಧ ಹೋರಾಡಿದ ಮಹಾನ್ ಸಮಾಜ ಸುಧಾರಕರಾಗಿದ್ದರು ಶ್ರೀ ನಾರಾಯಣಗುರು ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ ನುಡಿದರು. ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಆಯೋಜಿಸಿದ್ದ ಶ್ರೀ ನಾರಾಯಣಗುರು ಜಯಂತಿ ಆಚರಣೆ ಉದ್ಘಾಟನೆ ಸಂದರ್ಭ ಅವರು ಮಾತನಾಡುತ್ತಿದ್ದರು. ಕೇರಳದ ಶಿಲ್ಪಿ, ಶಿಕ್ಷಣ ಮತ್ತು ಸಂಘಟನೆಯ ಮೂಲಕ ಕೆಳವರ್ಗದವರನ್ನು ಸಬಲೀಕರಣಗೊಳಿಸಿ ಸಹೋದರತ್ವದ ಭಾವನೆಯನ್ನು ತುಂಬಲು ಅವರು ಪ್ರಯತ್ನಿಸಿರುವುದಾಗಿ ಅವರು ನುಡಿದರು. ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಅಧ್ಯಕ್ಷತೆ …