ಕಾಸರಗೋಡು: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಪಾಣತ್ತೂರಿನ ಚೆಂಬಕಶ್ಶೇರಿ ಅಪ್ಪುಕುಟ್ಟನ್ (79) ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು. ಈ ತಿಂಗಳ 22 ರಂದು ಬೆಳಿಗ್ಗೆ ಪಾಣತ್ತೂರಿನ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಅವರ ದವಡೆ, ಪಕ್ಕೆಲುಬುಗಳು ಮತ್ತು ಆಂತರಿಕ ಅಂಗಗಳಿಗೆ ಗಾಯಗಳಾಗಿವೆ. ಮರಣೋತ್ತರ ಪರೀಕ್ಷೆಯ ನಂತರ ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಸಂಬAಧಿಕರು ತಿಳಿಸಿದ್ದಾರೆ. ಮೃತರು ಪತ್ನಿ ಎನ್.ಕೆ. ಪ್ರಸನ್ನ, ಮಕ್ಕಳಾದ ಸಿಂಧು, ಸಂಧ್ಯಾ, ಸಂದೀಪ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.





