ಟಿಪ್ಪರ್ ಲಾರಿ ಮನೆ ಮೇಲೆ ಬಿದ್ದು ಚಾಲಕ ದಾರುಣ ಮೃತ್ಯು

ಹೊಸದುರ್ಗ: ಮಡಿಕೈ ಕಾಞಿರಪೊಯಿಲ್ ಕುಳಂ ಙಾಟ್‌ನಲ್ಲಿ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಘಟನೆ ನಡೆದಿದ್ದು, ಈ ದುರಂತದಲ್ಲಿ ಚಾಲಕ ಮೃv ಪಟ್ಟಿದ್ದಾರೆ. ಚಾಯೋಂ ನಿವಾಸಿ ಸಾದಿಕ್ (40) ಮೃತಪಟ್ಟ ಚಾಲಕನಾಗಿದ್ದಾರೆ. ಇಂದು ಬೆಳಿಗ್ಗೆ 7.30ರ ವೇಳೆ ಕಾಞಿರಪೊಯಿಲ್ ಕುಳಂಙಾಟ್‌ನಲ್ಲಿ ಅಪಘಾತ ಸಂಭವಿಸಿದೆ. ಕೆಂಪುಕಲ್ಲು ಇಳಿಸಿದ ಬಳಿಕ ಲಾರಿಯನ್ನು ಹಿಂದಕ್ಕೆ ತೆಗೆಯುತ್ತಿದ್ದ ಮಧ್ಯೆ ನಿಯಂತ್ರಣ ತಪ್ಪಿದೆ. ಈ ವೇಳೆ ಸಮೀಪದ ಪಿ. ಗೋಪಾಲನ್ ಎಂಬವರ ಮನೆಗೆ ಲಾರಿ ಮಗುಚಿದೆ. ಇದರಿಂದ ಅಡುಗೆ ಕೊಠಡಿ ಭಾಗ …

ಮುಖ್ಯಮಂತ್ರಿಯ ಕಾರು ತಡೆದು ನಿಲ್ಲಿಸಿದ ಕಾಂಗ್ರೆಸ್ ನೇತಾರನ ಬಂಧನ

ತಿರುವನಂತಪುರ: ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಕಾರನ್ನು ತಡೆದು ನಿಲ್ಲಿಸಿ ಅವರೊಂದಿಗೆ ಅನುಚಿತ ರೀತಿ ಯಲ್ಲಿ  ವರ್ತಿಸಿದ ಕಾಂಗ್ರೆಸ್ ನೇತಾರ ನನ್ನು ತಿರುವನಂತಪುರ ಶ್ರೀಕಾರ್ಯಂ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್‌ನ ತಿರುವನಂತಪುರ ಜಿಲ್ಲಾ ಸಮಿತಿ ಸದಸ್ಯ ಚೆಂದಿ ಅನಿಲ್  ಬಂಧಿತ ವ್ಯಕ್ತಿ. ಮುಖ್ಯಮಂತ್ರಿಯ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸುವಿಕೆ, ಅವರ ವಾಹನ ತಡೆದು ನಿಲ್ಲಿಸುವಿಕೆ, ಅವರೊಂದಿಗೆ ಅನುಚಿತ ರೀತಿಯಲ್ಲಿ ವರ್ತಿಸುವಿಕೆ ಮತ್ತು ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸುವಿಕೆ ಎಂಬೀ ಸೆಕ್ಷನ್‌ಗಳ ಪ್ರಕಾರ ಚೆಂದಿ ಅನಿಲ್‌ನ ವಿರುದ್ಧ ಪೊಲೀಸರು  ಪ್ರಕರಣ ದಾಖಲಿಸಿಕೊಂ …

ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು

ಕಾಸರಗೋಡು: ಸ್ನೇಹಿತರ ಜತೆಗೆ ಕೆರೆಯಲ್ಲಿ ಸ್ನಾನಕ್ಕಿಳಿದ ವಲಸೆಕಾರ್ಮಿಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮೊಗ್ರಾಲ್ ಪುತ್ತೂರು ಬಳಿ ನಿನ್ನೆ ನಡೆದಿದೆ. ರಾಜಸ್ಥಾನ ಜೈಪುರ ಈದ್ರ ದಿಲ್ಲಿ ರಸ್ತೆ ಬಳಿಯ ಫರೀದ್ ಖಾನ್-ಝಹೀನಾ ದಂಪತಿ ಪುತ್ರ ಅಲ್ ರೆhದ್ ಫರ್ದೀನ್ ಖಾನ್ (23) ಸಾವನ್ನಪ್ಪಿದ ದುರ್ದೈವಿ.  ವಲಸೆ ಕಾರ್ಮಿಕನಾಗಿರುವ ಈ ಯುವಕ ಮೊಗ್ರಾಲ್ ಪುತ್ತೂರಿಗೆ ಸಮೀಪದ ಉಜ್ರೆಕೆರೆ ಬಳಿಯ ಫ್ಲಾಟ್ ಒಂದರಲ್ಲಿ ಇತರ ವಲಸೆ ಕಾರ್ಮಿಕರೊಂದಿಗೆ ವಾಸಿಸುತ್ತಿದ್ದು, ನಿನ್ನೆ ಸಂಜೆ ಅಲ್ಲೇ ಪಕ್ಕದ ಕೆರೆಗೆ ಸ್ನಾನಕ್ಕೆಂದು ಸ್ನೇಹಿತರ ಜತೆ …

ಕ್ಲಿನಿಕ್‌ನಲ್ಲಿ ಕುಸಿದು ಬಿದ್ದು ಕಟ್ಟಡ ನಿರ್ಮಾಣ ಕಾರ್ಮಿಕ ಮೃತ್ಯು

ಅಡೂರು: ಎದೆನೋವು ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಖಾಸಗಿ ಕ್ಲಿನಿಕ್‌ಗೆ ತಲುಪಿದ ವ್ಯಕ್ತಿ ಕುಸಿದು ಬಿದ್ದ ಘಟನೆ ಅಡೂರಿನಲ್ಲಿ ಸಂಭವಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮುಳ್ಳೇರಿಯದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಅಡೂರು ಮಂಡೆಬೆಟ್ಟು ನಿವಾಸಿ, ಕಟ್ಟಡ ನಿರ್ಮಾಣ ಕಾರ್ಮಿಕ ಬಾಲಕೃಷ್ಣನ್ (48) ಕುಸಿದು ಬಿದ್ದು ನಿಧನ ಹೊಂದಿದವರು. ನಿನ್ನೆ ಮಧ್ಯಾಹ್ನ ಇವರು ಚಿಕಿತ್ಸೆಗಾಗಿ ಅಡೂರಿನ ಖಾಸಗಿ ಕ್ಲಿನಿಕ್‌ಗೆ ತಲುಪಿದ್ದರು. ಅಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಮುಳ್ಳೇರಿಯ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಇವರು ದಿ| ಗೋಪಾಲನ್- ಮಾಧವಿ ದಂಪತಿ ಪುತ್ರನಾಗಿದ್ದು, …

ಯುವಕನನ್ನು ಅಪಹರಿಸಿ ಹಣ ಎಗರಿಸಿದ ಓರ್ವ ಆರೋಪಿ ಸೆರೆ

ಕಾಸರಗೋಡು: ಯುವಕನನ್ನು ಕಾರಿನಲ್ಲಿ ಅಪಹರಿಸಿ ಬೆದರಿಸಿ ಹಣ ಎಗರಿಸಿದ ಪ್ರಕರಣದ ಆರೋಪಿಗಳ ಲ್ಲೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಚೆಟ್ಟುಂಗುಳಿ ಎಸ್‌ಪಿ ನಗರದ ಸೈನುಲ್ ಆಬೀದ್ (34) ಬಂಧಿತ ಆರೋಪಿ. ಈತನನ್ನು ನ್ಯಾಯಾಲ ಯದ  ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿದೆ. ಆರೋಪಿಯನ್ನು ಸೆರೆಹಿಡಿಯಲೆಂದು ಮೇಲ್ಪರಂಬ ಪೊಲೀಸರು ಆತನ ಮನೆಗೆ  ಹೋದಾಗ ಆತ ಅಲ್ಲಿಂದ ತಪ್ಪಿಸಿ ಕಾರಿನಲ್ಲಿ ಪಲಾಯನಗೈಯ್ಯಲೆತ್ನಿಸಿದ್ದಾನೆ. ಅದನ್ನು ಕಂಡ ಪೊಲೀಸರು ತಕ್ಷಣ ತಮ್ಮ ಜೀಪಿನಲ್ಲಿ ಆ ಕಾರನ್ನು ಹಿಂಬಾಲಿಸಿ ಆತನನ್ನು ಸೆರೆಹಿಡಿಯುವಲ್ಲಿ ಸಫಲರಾದರು. ಅಗೋಸ್ತ್ 24ರಂದು ರಾತ್ರಿ …

ಓಣಂ ಆಚರಣೆ ವೇಳೆ ಪಾಳು ಬಾವಿಗೆ ಬಿದ್ದು ಗಾಯಗೊಂಡ ವಿದ್ಯಾರ್ಥಿ ಚಿಕಿತ್ಸೆ ಮಧ್ಯೆ ಮೃತ್ಯು

ಕಾಸರಗೋಡು: ಪಾಳು ಬಾವಿಗೆ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಾಲಕ ಮೃತಪಟ್ಟನು. ಕೊಡಕ್ಕಾಡ್ ಆನಿಕ್ಕಾಡಿ ನಿವಾಸಿ ಸನೂಪ್ (14) ಮೃತಪಟ್ಟ ದುರ್ದೈವಿ. ಗುರುವಾರ ರಾತ್ರಿ ಚೆಂಬ್ರಕಾನದಲ್ಲಿ ನಡೆದ ಓಣಂ ಕಾರ್ಯಕ್ರಮದಲ್ಲಿ ಸನೂಪ್ ಹಾಗೂ ಸ್ನೇಹಿತ ಭಾಗವಹಿಸಿದ್ದರು. ಈ ಮಧ್ಯೆ ಸ್ನೇಹಿತರೊಂದಿಗೆ ಮೂತ್ರಶಂಕೆ ಗೆಂದು ಹೋದಾಗ ಸನೂಪ್ ಆವರಣ ಗೋಡೆಯಿಲ್ಲದ ಪಾಳು ಬಾವಿಗೆ ಬಿದ್ದಿ ದ್ದನು. ಕೂಡಲೇ ನಾಗರಿಕರು ರಕ್ಷಿಸಲು ಯತ್ನಿಸಿದರೂ ಬಾಲನನ್ನು ಮೇಲ ಕ್ಕೆತ್ತಲು ಸಾಧ್ಯವಾಗಿರಲಿಲ್ಲ. ಕೊನೆಗೆ ಚೀಮೇನಿಯಿಂದ ಅಗ್ನಿಶಾಮಕದಳ ತಲುಪಿ ಬಾಲಕನನ್ನು ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ …

ಶಾರ್ಜಾದಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟ ಮೊಗ್ರಾಲ್ ನಿವಾಸಿ ಬಾಲಕಿಯ ಅಂತ್ಯಸಂಸ್ಕಾರ

ಕಾಸರಗೋಡು: ಶಾರ್ಜಾದ ಅಲ್ನಬ್ಬ ಎಂಬಲ್ಲಿನ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟ ಮೊಗ್ರಾಲ್ ನಿವಾಸಿ ಬಾಲಕಿಯ  ಮೃತದೇಹದ ಅಂತ್ಯಸಂಸ್ಕಾರ ನಿನ್ನೆ  ಮೊಗ್ರಾಲ್ ಚಳಿಯಂಗೋಡು ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.  ಮೊಗ್ರಾಲ್ ಕಾಡಿಯಂಕುಳಂ ಸಫ ಮಂಜಿಲ್‌ನ ಮುಬಾರಕ್ ಅಲಿ-ಮುರ್ಶಿದಾ ದಂಪತಿಯ ಏಕೈಕ ಪುತ್ರಿ ಸಫ (7) ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಈಕೆ ಶಾರ್ಜಾದ ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಕಳೆದ ಸೋಮವಾರ ದುರ್ಘಟನೆ ಸಂಭವಿಸಿದೆ. ಅಂದು ಬೆಳಿಗ್ಗೆ ತಾಯಿ ಮುರ್ಶಿದ ಶಾರ್ಜಾದ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಕೆಲಸಕ್ಕಾಗಿ  ತೆರಳಿದ್ದರು.  …

ನೂರಾರು ಮಂದಿ ಆಶ್ರಯಿಸುವ ರಸ್ತೆ ಕೆಸರುಗದ್ದೆಯಾಗಿ ಮಾರ್ಪಾಡು: ನಾಗರಿಕರಿಗೆ ಸಂಚಾರ ಸಮಸ್ಯೆ

ಸೀತಾಂಗೋಳಿ: ದಿನಂಪ್ರತಿ ನೂರಾರು ಮಂದಿ ಆಶ್ರಯಿಸುವ ರಸ್ತೆಯೊಂದು ಇನ್ನೂ ಡಾಮರು ಕಾಣದೆ ಇದೀಗ ಕೆಸರುಗದ್ದೆಯಾಗಿ ಮಾರ್ಪಾಡುಗೊಂಡಿದೆ. ಬೇಳ ಗ್ರಾಮದ ದರ್ಬೆತ್ತಡ್ಕ-ನಾನಿಲಪಳ್ಳ-ಮುಖಾರಿಕಂಡವನ್ನು ಸಂಪರ್ಕಿಸುವ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಸುಮಾರು ಒಂದೂವರೆ ಕಿಲೋ ಮೀಟರ್ ಉದ್ದದ ಈ ರಸ್ತೆಯ ಇಕ್ಕಡೆಗಳಲ್ಲಿ ಹಲವು ಮನೆಗಳಿವೆ. ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಹಿತ ವಿವಿಧ ಅಗತ್ಯಗಳಿಗಾಗಿ ಈ ಭಾಗದ ಜನತೆ ಇದೇ ರಸ್ತೆಯಲ್ಲಿ ತೆರಳಬೇ ಕಾಗಿದೆ. ಇದೀಗ ಸುರಿಯುತ್ತಿರುವ ಮಳೆಯ ನೀರು ರಸ್ತೆಯಲ್ಲಿ ತುಂಬಿ ಕೊಂಡಿದ್ದು ಕೆಸರುಗದ್ದೆಯಂತಾಗಿದೆ. ಇದರಿಂದಾಗಿ ಜನರಿಗೆ ನಡೆದು ಹೋಗಲು ಕೂಡಾ …

ಅಕ್ರಮ ಮರಳುಗಾರಿಕೆ: 2 ಲಾರಿ ವಶ

ಕುಂಬಳೆ: ಹೊಳೆಯಿಂದ ಅಕ್ರಮವಾಗಿ ಹೊಯ್ಗೆ ಹೇರಿಕೊಂಡು ಸಾಗುತ್ತಿದ್ದ ಎರಡು ಲಾರಿಗಳನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಚ್ಲಂಗೋಡ್ ಬಿ ಸಿ ರೋಡ್ ಎಂಬಲ್ಲಿಂದ ಶಿರಿಯ ಹೊಳೆಯ ಪಾಚಾನಿಕಡವ್‌ನಿಂದ ಅನಧಿಕೃತ ಹೊಯ್ಗೆ ಹೇರಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡು ಇದಕ್ಕೆ ಸಂಬಂಧಿಸಿ ಲಾರಿ ಚಾಲಕ ಸೇರಿದಂತೆ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಹೊಳೆಯಿಂದ  ಅಕ್ರಮವಾಗಿ ಹೊಯ್ಗೆ ಸಾಗಿಸುತ್ತಿದ್ದ ಇನ್ನೊಂದು ಲಾರಿಯನ್ನು ಸುಬ್ಬಯ್ಯಕಟ್ಟೆಯಿಂದ  ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಕ್ಕೆ …

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಸೇವಾ ಸಮಿತಿ ಮತ್ತು ಮಾತೃ ಸಮಿತಿಯ ಸಹಯೋಗದೊಂದಿಗೆ ಶ್ರೀ ವರಮಹಾಲಕ್ಷ್ಮಿ ವೃತಾಚರಣೆ ವೇದಮೂರ್ತಿ ಶಿವರಾಮ್ ಭಟ್‌ರ ಪೌರೋಹಿತ್ಯದಲ್ಲಿ ನೆರವೇರಿತು.ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಭಟ್ ಚಂಬಲ್ತಿಮಾರು, ಮೊಕ್ತೇಸರ ಜಗನ್ನಾಥ ರೈ ಪೆರಡಾಲ ಗುತ್ತು, ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಚಂದ್ರಹಾಸ ರೈ ಪೆರಡಾಲ ಗುತ್ತು, ಸೇವಾ ಸಮಿತಿ ಕೋಶಾಧಿಕಾರಿ ವೆಂಕಟಗಿರೀಶ್ ಪಟ್ಟಾಜೆ, ಸೂರ್ಯನಾರಾಯಣ ಬಿ, ಜಯಪ್ರಕಾಶ ಶೆಟ್ಟಿ ಕಡಾರು ಬೀಡು, …