ಸಾರ್ವಜನಿಕ ಚರಂಡಿಗೆ ಕಟ್ಟಡದ ತ್ಯಾಜ್ಯ ನೀರು: ನಗರದ ಹೊಸ ಬಸ್ ನಿಲ್ದಾಣ ಬಳಿ ದುರ್ನಾತ

 ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಸಮೀಪದಲ್ಲಿರುವ ಕಟ್ಟಡವೊಂದರಿಂದ ತ್ಯಾಜ್ಯನೀರನ್ನು ಸಾರ್ವಜನಿಕ ರಸ್ತೆಯ ಚರಂಡಿಗೆ ಹರಿದುಬಿಡುತ್ತಿರುವುದು ವ್ಯಾಪಕ ಸಮಸ್ಯೆಗೆ ಕಾರಣವಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.  ಕಳೆದ ನಾಲ್ಕೈದು ತಿಂಗಳುಗಳಿಂದ ಕಟ್ಟಡದ ತ್ಯಾಜ್ಯ ನೀರನ್ನು ಚರಂಡಿಗೆ ಹರಿದುಬಿಡಲಾಗುತ್ತಿದೆ.  ಈ ಬಗ್ಗೆ  ಸ್ಥಳೀಯರು ನೀಡಿದ ದೂರಿನಂತೆ ನಗರಸಭೆಯ ಆರೋಗ್ಯ ವಿಭಾಗ ಅಧಿಕಾರಿಗಳು ಹಲವು ಬಾರಿ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಆದರೆ ತ್ಯಾಜ್ಯ ನೀರನ್ನು ಹರಿದುಬಿಡುವುದನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿಲ್ಲ. ಕಟ್ಟಡದ ಶೌಚಾಲಯದ ತ್ಯಾಜ್ಯ ವನ್ನು ಕೂಡಾ ಚರಂಡಿಗೆ …

ಆರ್ಥಿಕ ವ್ಯವಹಾರಗಳಲ್ಲಿ ನಿಗೂಢತೆ: ಮುಖ್ಯಮಂತ್ರಿ  ಜನತೆಗೆ ಲೆಕ್ಕ ಕೊಡಬೇಕು- ಕೆ. ಸುರೇಂದ್ರನ್

ಕಾಸರಗೋಡು: ಮುಖ್ಯಮಂತಿ ಯವರ ಚಾರ್ಟರ್ಡ್ ವಿಮಾನ ಪ್ರಯಾಣ, ಸಚಿವರ ವಿದೇಶ ಪ್ರವಾಸಗಳು ಹಾಗೂ ಖಾಸಗಿ ಐಷಾರಾಮಿ ವಾಹನಗಳ ಬಳಕೆಯ ಹಿಂದಿನ ಆರ್ಥಿಕ ಮೂಲಗಳನ್ನು ಬಹಿರಂಗಪಡಿಸಬೇಕೆAದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೆ. ಸುರೇಂದ್ರನ್ ಆಗ್ರಹಿಸಿದ್ದಾರೆ. ಪಿಣರಾಯಿ ವಿಜಯನ್ ಸರಕಾರ ಹತ್ತು ವರ್ಷಗಳಲ್ಲಿ ಮಾಡಿದ್ದನ್ನೆಲ್ಲಾ ಕೇವಲ ಮೂರೇ ತಿಂಗಳಲ್ಲಿ ಪುನರಾವರ್ತಿಸಲು ನೂತನ ಸರಕಾರ ಆತುರಪಡುತ್ತಿದೆ ಎಂದೂ ಅವರು ಆರೋಪಿಸಿದರು.ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಮಲಪ್ಪುರಂ ಪ್ರವಾಸಕ್ಕೆ ಚಾರ್ಟರ್ಡ್ ವಿಮಾನ ಉಚಿತವಾಗಿ ದೊರೆತಿದೆ ಎಂಬುದು ಸಂಶಯಾಸ್ಪದವಾಗಿದೆ. ಇದರ ವೆಚ್ಚವನ್ನು ಯಾರು ಭರಿಸಿದರು ಹಾಗೂ …

ರವಿಶಂಕರ ಕೋರಿಕ್ಕಾರು ನಿಧನ

ಬದಿಯಡ್ಕ: ಪಳ್ಳತ್ತಡ್ಕ ಸಮೀಪದ ಕೋರಿಕ್ಕಾರು ನಿವಾಸಿ, ಬದಿಯಡ್ಕದಲ್ಲಿ ವಾಸಿಸುತ್ತಿದ್ದ ರವಿಶಂಕರ ಕೋರಿಕ್ಕಾರು (೪೯) ನಿಧನರಾದರು. ಸಿವಿಲ್ ಇಂಜಿನಿಯರ್ ಆಗಿದ್ದರು. ಮೃತರು ಪತ್ನಿ ಅನುಪಮ, ಪುತ್ರ ಅಭಿರಾಮ, ಸಹೋದರ- ಸಹೋದರಿಯರಾದ ವಿಷ್ಣು ಭಟ್, ಸುಧಾ, ಗೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಮಹೇಶ್ ಭಟ್ ಈ ಹಿಂದೆ ನಿಧನರಾಗಿದ್ದಾರೆ.