ಬಾಳೆಮೂಲೆಯಲ್ಲಿ ಯುವಕ ಬಸ್ ನಿಲ್ದಾಣದೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಬಾಳೆಮೂಲೆ ಸಮೀಪದ ಬಸ್ ತಂಗುದಾಣವೊಂದರಲ್ಲಿ ಶಂಕಾಸ್ಪದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.  ಬಾಳೆಮೂಲೆ ನಿವಾಸಿ ಯಾದ   ದಯಾನಂದ (45)ಮೃತಪಟ್ಟ ವ್ಯಕ್ತಿಯಾಗಿದ್ದಾರೆ.   ದಯಾನಂದ   ಮನೆ ಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ಈಶ್ವರಮಂಗಲದಲ್ಲಿರುವ ಸಹೋದರಿ ಗೀತಾರ ಮನೆಯಲ್ಲಿದ್ದ ಇವರು ಮೂರು ವಾರಗಳ ಹಿಂದೆಯಷ್ಟೇ ಬಾಳೆಮೂಲೆಗೆ ಮರಳಿದ್ದರೆನ್ನಲಾಗಿದೆ. ನಿನ್ನೆ ಸಂಜೆ ಇವರು  ಬಾಳೆಮೂಲೆಯ ಬಸ್ ತಂಗುದಾಣದಲ್ಲಿ ಮೃತಪಟ್ಟಿರು ವುದು ಸ್ಥಳೀಯರ ಗಮನಕ್ಕೆ ಬಂದಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ.  ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ …

ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ತಲಪಾಡಿ: ಮನೆಯೊಳಗೆ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ತಲಪಾಡಿ ನಾರ್ಲ ಪಡೀಲ್ ನಿವಾಸಿ ದಿ| ದಾಮೋದರ-ಹರಿಣಾಕ್ಷಿ ದಂಪತಿ ಪುತ್ರ ರಂಜನ್ (38) ಮೃತಪಟ್ಟ ವÀರು. ಇವರು ಕುಂಜತ್ತೂರಿನ ಫರ್ನೀಚರ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ರಾತ್ರಿ ಸುಮಾರು 8ಗಂಟೆ ವೇಳೆ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಸಂಬAಧಿಕರ ಗಮನಕ್ಕೆ ಬಂದಿದೆ. ಕೂಡಲೇ ಅವರನ್ನು ದೇ ರಳಕಟ್ಟೆ ಆಸ್ಪತ್ರೆಗೆ ಕೊಂಡೊ ಯ್ಯಲಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಘಟನೆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲವೆನ್ನಲಾಗಿದೆ. ಇವರು ತೂಮಿನಾಡು ಶ್ರೀ …

ಚಟ್ಟಂಚಾಲ್ ಪೇಟೆಯ ತರಕಾರಿ ಅಂಗಡಿಯಿಂದ ನಗದು ಕಳವು: ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲು

ಕಾಸರಗೋಡು: ಚಟ್ಟಂಚಾಲ್ ಪೇಟೆಯ ತರಕಾರಿ ಅಂಗಡಿಯಿಂದ  ಹಾಡಹಗಲೇ 15,000 ರೂ. ಒಳ ಗೊಂಡ ಪರ್ಸ್ ಕಳವು ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಕಾರ್ಯಾಚರಿಸುವ ಕೆವಿಕೆ ವೆಜಿಟೇ ಬಲ್ಸ್ ಎಂಬ ಅಂಗಡಿಯಿಂದ ಕಳವು ನಡೆಸಲಾಗಿದೆ. ಅಂಗಡಿಯ ನೌಕರ ನಾದ ನಾಸರ್‌ನ ಹಣವನ್ನು ಕಳವು ನಡೆಸಲಾಗಿದೆ. ಅಲ್ಯುಮೀನಿಯಂ ಫ್ಯಾಬ್ರಿಕೇಶನ್ ಕೆಲಸ ಗಾರನಿಗೆ ನೀಡಲು ತೆಗೆದಿರಿಸಿದ ಹಣವಾಗಿತ್ತು ಕಳವುಹೋದ ಹಣ. ನಿನ್ನೆ ಸಂಜೆ ಘಟನೆ ನಡೆದಿದ್ದು, ಸಾಮಗ್ರಿಗಳನ್ನು ಖರೀದಿಸಲೆಂಬ ನೆಪದಲ್ಲಿ ತಲುಪಿದ ಓರ್ವ ಕಳವು ನಡೆಸಿರುವುದಾಗಿ ಶಂಕಿಸಲಾಗಿದೆ. ಅಂಗಡಿಯಲ್ಲಿ ಬಹಳ ಹೊತ್ತು …

ರಬ್ಬರ್ ಟ್ಯಾಪಿಂಗ್‌ಗೆಂದು ತೆರಳಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಅಡೂರು: ತಂದೆಯ ಜೊತೆ ರಬ್ಬರ್ ಟ್ಯಾಪಿಂಗ್‌ಗೆ ತೆರಳಿದ ಯುವಕ ನೇಣು ಬಿಗಿದ  ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಮಣಿಯೂರು ಚೆನ್ನಯ್ಯಮೂಲೆಯ ನಿವಾಸಿ ಶೋಭಿತ್ (26) ನೇಣು ಬಿಗಿದ ಯುವಕ. ನಿನ್ನೆ ಬೆಳಿಗ್ಗೆ ತಂದೆಯ ಜೊತೆ ರಬ್ಬರ್ ಟ್ಯಾಪಿಂಗ್‌ಗಾಗಿ ತೆರಳಿದ್ದರು. ಆದರೆ ಸಮಯ ಕಳೆದರೂ ಶೋಭಿತ್ ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಮನೆ ಮಂದಿ ಹುಡುಕಾಡುತ್ತಿದ್ದ ಮಧ್ಯೆ ಈ ಮೊದಲು ಇವರು ವಾಸಿಸುತ್ತಿದ್ದ ಹಳೆಯ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಕೂಡಲೇ ಹಗ್ಗ ತುಂಡರಿಸಿ …

ಯೂತ್ ಕಾಂಗ್ರೆಸ್ ಮುಖಂಡ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪೊಯಿನಾಚಿಯಲ್ಲಿ ಯೂತ್ ಕಾಂಗ್ರೆಸ್ ಮುಖಂಡ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಯೂತ್ ಕಾಂಗ್ರೆಸ್ ಉದುಮ ವಿಧಾನಸಭಾ ಮಂಡಲ ಕಾರ್ಯದರ್ಶಿ ಹರಿಕೃಷ್ಣನ್ (32) ಮೃತಪಟ್ಟವರು. ನಿನ್ನೆ ಮಧ್ಯಾಹ್ನ ಪೊಯಿನಾಚಿಯ ಸ್ವಂತ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಪೊಯಿನಾಚಿಯಲ್ಲಿ ಶಿಕ್ಷಣ ರಿಕ್ರೂಟಿಂಗ್ ಏಜೆನ್ಸಿ ನಡೆಸುತ್ತಿದ್ದರು.  ಮೊನ್ನೆ ಸಂಜೆಯಿಂದ ಇವರು ನಾಪತ್ತೆಯಾಗಿದ್ದರು. ನಿನ್ನೆ  ಬೆಳಿಗ್ಗೆ  ಕೂಡಾ ಮನೆಗೆ ತಲುಪದ ಹಿನ್ನೆಲೆಯಲ್ಲಿ ಮಧ್ಯಾಹ್ನ ವೇಳೆ ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಕೇಸು ದಾಖಲಿಸಲಿರುವ ಸಿದ್ಧತೆ ಮಧ್ಯೆ …

ದೆಹಲಿಯನ್ನು ಕೇಂದ್ರೀಕರಿಸಿ ಎಂಡಿಎಂಎ ತಯಾರಿಸಿಕೇರಳದಲ್ಲಿ ವಿತರಿಸುವ ವಿದೇಶಿ ಯುವತಿಯರ ಸೆರೆ

ಕಾಸರಗೋಡು: ದೆಹಲಿಯನ್ನು ಕೇಂದ್ರೀಕರಿಸಿ ಮಾದಕ ದ್ರವ್ಯವಾದ ಎಂಡಿಎಂಎ ತಯಾರಿಸಿ ಅದನ್ನು ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿ ವಿತರಿಸುವ ದಂಧೆಗೆ ಸೇರಿದ ಇಬ್ಬರು ವಿದೇಶಿ ಯುವತಿಯರನ್ನು ಕಣ್ಣೂರು ಸಿಟಿ ಪೊಲೀಸ್ ಸ್ಕ್ವಾಡ್ ಬಂಧಿಸಿದೆ. ನೈಜೀರಿಯ  ಪ್ರಜೆ ಬೆನೆಲೊ ಲಿಲಿಯನ್ (36) ಮತ್ತು ಕ್ಯಾಮರೂನ್ ಪ್ರಜೆ ಫಿಲೋಮೆನ ಚೌನ್‌ಸೆಲಿನ್ (30) ಬಂಧಿತರಾದ ಯುವತಿಯರು. ನ್ಯೂಮಾಹಿಯಿಂದ ಪೊಲೀಸರು ದಿನಗಳ ಹಿಂದೆ 0.6 ಗ್ರಾಂ ಎಂಡಿಎಂಎ ಸಹಿತ ರಿಜಿನಾಸ್ (31) ಎಂಬಾತನನ್ನು ಬಂಧಿಸಿದ್ದರು. ಆತನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ತನಗೆ ಈ ಮಾಲು …

ಆರಿಕ್ಕಾಡಿ ಬಳಿ ಯುವಕರ ಮಧ್ಯೆ ಘರ್ಷಣೆ: ಎರಡು ಪ್ರಕರಣಗಳು ದಾಖಲು

ಕುಂಬಳೆ: ಆರಿಕ್ಕಾಡಿ ಕುಂಡಾಪು ಎಂಬಲ್ಲಿ ಈತಿಂಗಳ 21ರಂದು ಸಂಜೆ ಕಾರು ಮತ್ತು ಬೈಕ್ ಸವಾರರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿ ಪೊಲೀಸರು ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಬೈಕ್ ಸವಾರ ಆರಿಕ್ಕಾಡಿ ಕೋಟೆ ಹಿತ್ತಿಲು ನಿವಾಸಿ ಪ್ರದೀಪ್ ಕುಮಾರ್ (42) ನೀಡಿದ ದೂರಿನಂತೆ ಕಾರು ಚಾಲಕ ಸಹಿತ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.  ಈತಿಂಗಳ ೨೧ರಂದು ಸಂಜೆ ತಾನು ಆರಿಕ್ಕಾಡಿ ಕುಂಡಾಪು ಎಂಬಲ್ಲಿ ಸ್ನೇಹಿತನ ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆ  ಓವರ್‌ಟೇಕ್ ಮಾಡಿ ಕಾರೊಂದು ಎದುರುಗಡೆಯಿಂದ ಬರುತ್ತಿರುವು ದನ್ನು ಕಂಡು …

ಅನಂತಪುರ ಪರಿಸರ ಮಾಲಿನ್ಯ: ವಿವಾದಿತ ಫ್ಯಾಕ್ಟರಿ  ವಿರುದ್ಧ ಕೇಸು ದಾಖಲಿಸಿದ ಮಾನವಹಕ್ಕು ಆಯೋಗ

ಕುಂಬಳೆ: ಪರಿಸರ ಮಾಲಿನ್ಯ, ಆರೋಗ್ಯಕ್ಕೆ ಬೆದರಿಕೆಯೊಡ್ಡುತ್ತಿರುವ  ಅನಂತಪುರ ಉದ್ದಿಮೆ ಪಾರ್ಕ್‌ನ ವಿವಾದಿತ ಫ್ಯಾಕ್ಟರಿ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೇಸು ದಾಖಲಿಸಿಕೊಂಡಿದೆ. ಫ್ಯಾಕ್ಟರಿಯಿಂದ ಹರಿದುಹೋಗುವ ಮಲಿನ ನೀರು ಕುಡಿಯುವ ನೀರನ್ನು ಕೂಡಾ ಕಲುಷಿತಗೊಳಿಸುತ್ತಿರು ವುದಾಗಿ ಖಚಿತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಫ್ಯಾಕ್ಟರಿಯನ್ನು ಮುಚ್ಚುಗಡೆಗೊಳಿಸಲು ಈ ಮೊದಲು ನಿರ್ದೇಶ ನೀಡಿತ್ತು.  ಫ್ಯಾಕ್ಟರಿಯ ಈಗಿನ  ಚಟುವಟಿಕೆ ಪರಿಸರ ಪ್ರದೇಶಗಳ ಕುಡಿಯುವ ನೀರಿಗೂ  ಹಾನಿಕರವಾಗಿ ಬಾಧಿಸಲಿದೆಯೆಂದು ಎಸ್‌ಡಿಪಿಐ ಕುಂಬಳೆ ಯೂನಿಟ್ ನೀಡಿದ ದೂರಿನಂತೆ ರಾಷ್ಟ್ರೀಯ ಮಾನವಹಕ್ಕು ಆಯೋಗ ಕೇಸು ದಾಖಲಿಸಿಕೊಂಡಿದೆ.  ಅನಂತಪುರ …

ಮೊಬೈಲ್ ಟವರ್‌ನ ಮೇಲೇರಿ ಆತ್ಮಹತ್ಯೆ ಬೆದರಿಕೆವ್ಯಕ್ತಿಯನ್ನು ಕೆಳಕ್ಕಿಳಿಸುವಲ್ಲಿ ಯಶಸ್ವಿಯಾದ ಪೊಲೀಸ್, ಅಗ್ನಿಶಾಮಕದಳ

ಬದಿಯಡ್ಕ: ನೈಲಾನ್ ಹಗ್ಗ, ಪೆಟ್ರೋಲ್ ತುಂಬಿದ ಕ್ಯಾನ್ ಹಾಗೂ ಬ್ಯಾಗ್ ಸಹಿತ ಬಿಎಸ್‌ಎನ್‌ಎಲ್ ಟವರ್‌ನ ಮೇಲೇರಿ ಆತ್ಮಹತ್ಯೆ ಬೆದರಿಕೆ ಯೊಡ್ಡುತ್ತಿದ್ದ ವ್ಯಕ್ತಿಯನ್ನು ಸಮಾಧಾನ ಪಡಿಸಿ ಕೆಳಗಿಳಿಸುವಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕದಳ ಯಶಸ್ವಿಯಾ ಗಿದೆ.  ನಾರಂಪಾಡಿ ಬಳಿಯ ನೆಲ್ಯಡ್ಕ ನಿವಾಸಿಯೂ, ಬದಿಯಡ್ಕದಲ್ಲಿ ಈ ಹಿಂದೆ ಫೋಟೋಗ್ರಾಫರ್ ಆಗಿದ್ದ ಪಿ.ಕೆ. ಮೋಹನ್‌ದಾಸ್ ಅವರನ್ನು  ನಿನ್ನೆ   ಭಾರೀ ಪ್ರಯತ್ನದ ಬಳಿಕ ಟವರ್‌ನಿಂದ ಕೆಳಗಿಳಿಸಲಾಯಿತು.  ನಿನ್ನೆ ಬೆಳಿಗ್ಗೆ ಬದಿಯಡ್ಕ ಪೇಟೆಯಲ್ಲಿರುವ ಬಿಎಸ್‌ಎನ್‌ಎಲ್ ಟವರ್‌ನ ಮೇಲೆ ಹತ್ತಿದ ಮೋಹನ್ ದಾಸ್ ಗಟ್ಟಿಯಾಗಿ  ಬೊಬ್ಬೆ ಹಾಕುತ್ತಿರು …

ಚರಂಡಿಯಿಂದ ರಸ್ತೆಗೆ ಹರಿದ ತ್ಯಾಜ್ಯ ನೀರು ಕುಂಬಳೆ  ರೈಲು ನಿಲ್ದಾಣ ಸಮೀಪದಲ್ಲಿ ದುರ್ನಾತ

ಕುಂಬಳೆ: ಕುಂಬಳೆ ಪೇಟೆಯಲ್ಲಿ ರೈಲು ನಿಲ್ದಾಣ ಸಮೀಪದ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ. ಪೇಟೆಯ ಕೆಲವು ಹೋಟೆಲ್ ಸಹಿತ ಕಟ್ಟಡಗಳ ತ್ಯಾಜ್ಯ ನೀರನ್ನು ಚರಂಡಿಗೆ ಹರಿಯಬಿಟ್ಟ ಪರಿಣಾಮ ಈ ಸಮಸ್ಯೆ ಹುಟ್ಟಿಕೊಂಡಿದೆ.    ಕೆಲವು ಹೋಟೆಲ್ ಹಾಗೂ ಕಟ್ಟಡಗಳಿಂದ ಹರಿಯಬಿಟ್ಟ ತ್ಯಾಜ್ಯ ನೀರು ಚರಂಡಿಯಲ್ಲಿ ಸಾಗಿ ಕುಂಬಳೆ ರೈಲು ನಿಲ್ದಾಣ ಬಳಿ ಅಂಡರ್ ಪಾಸ್‌ನ ಸಮೀಪದಲ್ಲಿರುವ ಸರ್ವೀಸ್ ರಸ್ತೆಯ   ಮೂಲಕ ಹರಿಯುತ್ತಿದೆ. ಇದು  ಚರಂಡಿಯಲ್ಲಿ ತುಂಬಿ ಸರ್ವೀಸ್ ರಸ್ತೆ ಮೇಲೆ ಕಟ್ಟಿ ನಿಂತಿದೆ. ಇದು …