ಮಾದಕ ಪದಾರ್ಥ ಪ್ರಕರಣದಲ್ಲಿ ಸಿಲುಕಿಸಲು ಯತ್ನ ಆರೋಪ: ಪೈವಳಿಕೆ ಪಂಚಾಯತ್ ಸದಸ್ಯನ ವಿರುದ್ಧ ಯುವಕ ಜಿಲ್ಲಾ ಪೊಲೀಸ್ ಅಧಿಕಾರಿಗೆ ದೂರು

ಕುಂಬಳೆ: ಮಾದಕ ಪದಾರ್ಥ ಪ್ರಕರಣದಲ್ಲಿ ಸಿಲುಕಿಸಲು, ವ್ಯಕ್ತಿ ಹತ್ಯೆ ನಡೆಸಲು ಪೈವಳಿಕೆ ಪಂಚಾಯತ್ ಸದಸ್ಯ ಸಕರಿಯಾ ಯಾನೆ ಜೆಕ್ಕಿ ಯತ್ನಿಸುತ್ತಿರುವುದಾಗಿ ಚಿಪ್ಪಾರು ನಿವಾಸಿಯಾದ ಯುವಕ ಉಮ್ಮರ್ ಫಾರೂಕ್ ಆರೋಪಿಸಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ದೂರಿನಲ್ಲಿ ಪಂಚಾಯತ್ ಸದಸ್ಯನ ವಿರುದ್ಧ ಅವರು ಗಂಭೀರ ಆರೋಪ ಹೊರಿಸಿದ್ದಾರೆ. ತನ್ನ ಮಾಲಕತ್ವದಲ್ಲಿರುವ ಆಲ್ಟೋ ಕಾರಿನಲ್ಲಿ ಮಾದಕ ಪದಾರ್ಥವಿದೆಯೆಂದು ತಿಳಿಸಿ ನಿರಂತರ ವಾಹನ ತಪಾಸಣೆಗೊಳಪಡಿಸಿ ಮಾನಸಿಕವಾಗಿ ಪೀಡಿಸುತ್ತಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಗಲ್ಫ್ ನಂಬ್ರಗಳಿಂದ ಕರೆಮಾಡಿ ಕೇರಳ, ಕರ್ನಾಟಕ ಪೊಲೀಸರಿಗೆ …

ಸಿಪಿಎಂ ವಿಸ್ತೃತ ಸಮಿತಿ ಸಭೆ ಕಾರ್ಯಕರ್ತರ ಕಣ್ಣಿಗೆ ಮಣ್ಣೆರಚುವ ತಂತ್ರ -ಎ.ಪಿ. ಅಬ್ದುಲ್ಲಕುಟ್ಟಿ

ಹೊಸದುರ್ಗ: ಕಮ್ಯೂನಿಸ್ಟ್ ಪಕ್ಷದ ವಿಸ್ತೃತ ರಾಜ್ಯ ಸಮಿತಿ ಸಭೆ ಹಾಗೂ ಚುನಾವಣಾ ಫಲಿತಾಂಶದ ಪರಾಮ ರ್ಶೆಯು ಕೇವಲ ಕಾರ್ಯಕರ್ತರ ಕಣ್ಣಿಗೆ ಮಣ್ಣೆರಚುವ ತಂತ್ರ ಮಾತ್ರವಾಗಿದೆ ಯೆಂದು ಬಿಜೆಪಿ ಮುಖಂಡ ಎ.ಪಿ. ಅಬ್ದುಲ್ಲಕುಟ್ಟಿ ಆರೋಪಿಸಿದರು. ವಿರೋಧ ಪಕ್ಷದ ನಾಯಕ ಸ್ಥಾನದಿಂದ ಪಿಣರಾಯಿ ವಿಜಯನ್‌ರನ್ನು ಹಾಗೂ ರಾಜ್ಯ ಕಾರ್ಯದರ್ಶಿ ಸ್ಥಾನದಿಂದ ಎಂ.ವಿ. ಗೋವಿಂದನ್ ರನ್ನು ಬದಲಾಯಿಸಲು ಸಿಪಿಎಂ ಮುಂದಾಗದಿರುವುದು ಪಕ್ಷವು ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಸಿದ್ಧವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.ಚೀಮೇನಿಯ ಟ್ರೀ ವುಡ್ ಕನ್ವೆನ್‌ಶನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ …

ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಕೆ.ಪಿ. ಕುಂಞಿಕಣ್ಣನ್ ಸಂಸ್ಮರಣೆ

ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ, ಮಾಜಿ ಶಾಸಕರಾಗಿದ್ದ ಕೆ.ಪಿ . ಕುಂಞ ಕಣ್ಣನ್‌ರ ಎರಡನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ನೇತಾರರು ಪುಷ್ಪಾರ್ಚನೆ ನಡೆಸಿದರು. ಬಳಿಕ ನಡೆದ ಸಭೆಯಲ್ಲಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆ.ಪಿ. ಕುಂಞ ಕಣ್ಣನ್ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ತನ್ನೆಲ್ಲಾ ಶಕ್ತಿಯನ್ನು ಮೀರಿ ದುಡಿದ ನೇತಾರರಾಗಿದ್ದರು ಎಂದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯ ದರ್ಶಿ …

ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ, ವರದಿ ಮಂಡನೆ

ಪೈವಳಿಕೆ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಬ್ಯಾಂಕ್ ಸಭಾಂಗಣದಲ್ಲಿ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ಬಾಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಬ್ಯಾಂಕ್‌ನ ವಾರ್ಷಿಕ ವರದಿ, ಲೆಕ್ಕಪತ್ರಗಳು, ಬ್ಯಾಂಕ್‌ನ ವ್ಯವಹಾರ ಹಾಗೂ ಪ್ರಗತಿಯ ವಿವರಗಳನ್ನು ಮಂಡಿಸಲಾಯಿತು. ಠೇವಣಿ, ಸಾಲ ವಿತರಣೆ, ಸದಸ್ಯರ ಸಂಖ್ಯೆ ಸೇರಿದಂತೆ ಬ್ಯಾಂಕ್‌ನ ವಿವಿಧ ಚಟುವಟಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ವರದಿ ಪ್ರಕಾರ ಬ್ಯಾಂಕ್‌ನ ಠೇವಣಿ 31,98,19,000 ರೂ. ಆಗಿದ್ದು, ವಿತರಿಸಲಾದ ಒಟ್ಟು ಸಾಲದ ಮೊತ್ತ 29,87,41,000 ರೂ. …