ಟಯರ್ ಸ್ಫೋಟ: ಸಂಚರಿಸುತ್ತಿದ್ದ ಪಿಕಪ್ ಮಗುಚಿ ಬಿದ್ದು ಇಬ್ಬರಿಗೆ ಗಾಯ

ಕುಂಬಳೆ: ಸಂಚರಿಸುತ್ತಿದ್ದ ಪಿಕಪ್ ವಾಹನದ ಟಯರ್ ಸ್ಫೋಟಗೊಂಡ ಪರಿಣಾಮ ವಾಹನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿಯ ಶಿರಿಯ ಪೆಟ್ರೋಲ್ ಪಂಪ್ ಸಮೀಪ ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದೆ. ವಾಹನದಲ್ಲಿದ್ದ ತೊಕ್ಕೋಟ್ ನಿವಾಸಿಗಳಾದ ಸಮದ್ (30), ಆತಿಶ್ (25) ಎಂಬಿವರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಮಂಗಳೂರಿನಿಂದ ಕುಂಬಳೆಗೆ ಹಣ್ಣು ಹಂಪಲು ಸಾಗಿಸುತ್ತಿದ್ದ   ವಾಹನ ಅಪಘಾತಕ್ಕೀಡಾಗಿದೆ. ಘಟನೆಯಿಂದ ಹೆದ್ದಾರಿಯಲ್ಲಿ ಅಲ್ಪ ಹೊತ್ತು ಸಾರಿಗೆ ಅಡಚಣೆ ಎದುರಾಯಿತು.

ರಾಷ್ಟ್ರೀಯ ಹೆದ್ದಾರಿಯ ಗೋಡೆಗೆ ಬಡಿದು ಮಗುಚಿದ ಸ್ಕೂಟರ್: ಸವಾರನಿಗೆ ಗಂಭೀರ

ಕುಂಬಳೆ: ಶಿರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ ಅಪಘಾತಕ್ಕೀಡಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮಂಗಳೂರು ಪೆರ್ಮುದೆ ಕಟೀಲಿನ ಜೋಸೆಫ್ ಡಿಸೋಜ (52)  ಗಾಯ ಗೊಂಡ ವ್ಯಕ್ತಿ. ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೊನ್ನೆ ರಾತ್ರಿ 7.45ರ ವೇಳೆ ಅಫಘಾತ ಉಂಟಾಗಿದೆ. ಬೇಳದಲ್ಲಿರುವ ಸಂಬಂಧಿಕನ ಮನೆಗೆ ಭೇಟಿ ನೀಡಿ ಊರಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಶಿರಿಯಕ್ಕೆ ತಲುಪಿದಾಗ ನಿಯಂತ್ರಣ ತಪ್ಪಿದ ಸ್ಕೂಟರ್ ರಾಷ್ಟ್ರೀಯ ಹೆದ್ದಾರಿಯ ಸಂರಕ್ಷಣಾ ಗೋಡೆಗೆ ಬಡಿದು ಮಗುಚಿ ಬಿದ್ದಿದೆ.

ಜುಗಾರಿ ದಂಧೆ : 6 ಮಂದಿ ಸೆರೆ

ಬದಿಯಡ್ಕ: ಹಣವಿರಿಸಿ ಕುಟುಕುಟು ಜುಗಾರಿದಂಧೆ ನಡೆಸುತ್ತಿದ್ದ ಆರು ಮಂದಿಯನ್ನು ಬದಿಯಡ್ಕ ಎಸ್‌ಐ ಸುನಿಲ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಪೆರ್ಲ ಬಡಾಜೆಯ ದಿನೇಶ್ (40), ಕುಂಬ್ಡಾಜೆ ಬಳ್ಳಪದವಿನ ನವೀನ್ ಪ್ರಕಾಶ್ (50), ಜಯೇಶ್ (36) ನಾರಂಪಾಡಿ ನೆಲ್ಯಡ್ಕದ ಸತೀಶ್ (31), ಉವೈಸ್ (21), ಬೆಳ್ಳೂರಿನ ಕೃಷ್ಣ (25) ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರ ಕೈಯಿಂದ 2290 ರೂ. ವಶಪಡಿಸಲಾಗಿದೆ. ನಿನ್ನೆ ಸಂಜೆ ನಾರಂಪಾಡಿ   ನೆಲ್ಯಡ್ಕದ ಬಸ್ ವೈಟಿಂಗ್ ಶೆಡ್ ಸಮೀಪದ ಹಿತ್ತಿಲಲ್ಲಿ ಜುಗಾರಿ ದಂಧೆ …

ಮನೆ ಮುಂದೆ ನಿಲ್ಲಿಸಿದ್ದ  ಸಿಪಿಎಂ ಕಾರ್ಯಕರ್ತನ ಸ್ಕೂಟರ್‌ಗೆ ಬೆಂಕಿ

ಕಾಸರಗೋಡು: ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ಗೆ ಬೆಂಕಿ ತಗಲಿ ನಾಶಗೊಂಡ ಸ್ಥಿತಿಯಲ್ಲಿ ಪತ್ತೆಯಾ ಗಿದೆ. ನೀಲೇಶ್ವರ ಕೋಯಾಬುರಂ ಇಟ್ಟುಪಾರದ ಸಿಪಿಎಂ ಕಾರ್ಯ ಕರ್ತ ಪ್ರಕಾಶನ್ ಎಂಬವರ ಮನೆ ಮುಂದೆ ನಿಲ್ಲಿಸಲಾಗಿದ್ದ ಸ್ಕೂಟರ್  ಬೆಂಕಿಗಾಹುತಿಯಾಗಿದೆ. ಯಾರೋ ದುಷ್ಕರ್ಮಿಗಳು ಇದಕ್ಕೆ ಕಿಚ್ಚಿರಿಸಿರಬಹುದೆಂದು ಶಂಕಿಸಲಾಗುತ್ತಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಈ ಬಗ್ಗೆ ನೀಡಲಾದ ದೂರಿನಂತೆ ನೀಲೇಶ್ವರ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವಿಷಯ ತಿಳಿದ ನಗರಸಭಾ ಕೌನ್ಸಿಲರ್ ಸೇರಿದಂತೆ ಹಲವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಬಗ್ಗೆ …

ಕೆಎಸ್‌ಇಬಿ ಕೇಬಲ್ ಕಳವುಗೈದು ಸಾಗಾಟ: 5 ಮಂದಿ ಆರೋಪಿಗಳ ಬಂಧನ; ಇನ್ನೋರ್ವನಿಗಾಗಿ ಶೋಧ

ಬದಿಯಡ್ಕ: ಪೆರ್ಲ ಬಳಿಯ ಗುಣಾಜೆಯಲ್ಲಿರಿಸಿದ್ದ ಕೆ. ಎಸ್. ಇ. ಬಿ ಯ ವಿದ್ಯುತ್ ಕೇಬಲ್ ಗಳನ್ನು ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ ಐದಕ್ಕೇರಿದೆ.ಕರ್ನಾಟಕದ ಬಿ. ಸಿ ರೋಡ್ ನಿವಾಸಿಯೂ, ಪೆರ್ಲದಲ್ಲಿ ವಾಸಿಸುವ ನೌಶಾದ್ (34), ಕಿದೂರು ಪಂಜಿಕಲ್ಲಿನ ಇ. ಮುಹಮ್ಮದ್ (41), ಕರ್ನಾಟಕದ ಪರಂಗಿಪೇಟೆ ನಿವಾಸಿ ಮುಹಮ್ಮದ್ ಶಾಹಿದ್ ( 29), ಬೈತುಲ್ ಪದವಿನ ನವೀನ್ (48), ಬಂಟ್ವಾಳ ಬೈರ್ ಮಾರ್ ನಿವಾಸಿ ರಾಜೇಶ್ ಪೂಜಾರಿ ( 43) ಎಂಬಿವರು ಸೆರೆಗೀಡಾದ ಆರೋಪಿಗಳಾಗಿದ್ದಾರೆ. ಬದಿಯಡ್ಕ ಸಿ. ಐ …

ಸ್ನಾನದ ದೃಶಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಯುವಕ ಸೆರೆ

ಕಾಸರಗೋಡು: ಸ್ನಾನ ಮಾಡುತ್ತಿದ್ದ ದೃಶ್ಯಗಳನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲು ಯತ್ನಿಸಿದ ಯುವಕನನ್ನು ಸ್ಥಳೀಯರು ಸೇರಿ ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪಶ್ಚಿಮ ಬಂಗಾಳ ನಿವಾಸಿ ಮಾಲಿಕ್ ಹುಸೈನ್ (21)ನನ್ನು ಸೆರೆ ಹಿಡಿಯಲಾಗಿದ್ದು, ಈತನನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ತೃಕರಿಪುರ ತಂಗಯದಲ್ಲಿ ಘಟನೆ ನಡೆದಿದೆ. ನಿರ್ಮಾಣ ಕೆಲಸಕ್ಕೆಂದು ಮಾಲಿಕ್ ಹುಸೈನ್ ಸಹಿತದ ತಂಡ ಮನೆಗೆ ತಲುಪಿತ್ತು. ಈತ ಕೆಲಸ ಮಾಡುತ್ತಿದ್ದ ವೇಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ  ಈತ ಸೆರೆ ಹಿಡಿದಿದ್ದಾನೆ. ಈ ವಿಷಯ ಗಮನಕ್ಕೆ ಬಂದು ಮನೆ ಮಂದಿ …

ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

ಉಪ್ಪಳ: ಹೊಳೆಯಲ್ಲಿ ಸ್ನಾನಕ್ಕಿಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ನಿವಾಸಿ ಶ್ಯಾಮ್ ಲಾಲ್ ಬರ್ಮನ್ ಎಂಬವರ ಪುತ್ರ ಬಿಸ್ವಾಸ್ ಬರ್ಮನ್ ( 21) ಮೃತಪಟ್ಟ ದುರ್ದೈವಿ. ಬಿಸ್ವಾಸ್ ಹಾಗೂ ಇತರ ಇಬ್ಬರು ನಿನ್ನೆ ಮಧ್ಯಾಹ್ನ 11.30ರ ವೇಳೆ ವಾಮಂಜೂರು ಚೆಕ್ ಪೋಸ್ಟ್ ಬಳಿಯ ಉಪ್ಪಳ ಹೊಳೆಯಲ್ಲಿ ಸ್ನಾನಕ್ಕಾಗಿ ತೆರಳಿದ್ದರು. ಬಿಸ್ವಾಸ್ ಹಾಗೂ ಇನ್ನೋರ್ವ ಹೊಳೆಯ ಅಣೆಕಟ್ಟು ಸಮೀಪ ಸ್ನಾನಕ್ಕಾಗಿ ಇಳಿದಿದ್ದು ಓರ್ವ ದಡದಲ್ಲಿ ನಿಂತಿದ್ದನು. ಸ್ನಾನ ಮಾಡುತ್ತಿದ್ದಂತೆ ಬಿಸ್ವಾಸ್ ನೀರಿನಲ್ಲಿ ಮುಳುಗಿದ್ದಾನೆ. …

ಹೆಣ್ಮಕ್ಕಳ ಚಿತ್ರಗಳನ್ನು ಮೋರ್ಫ್ ನಡೆಸಿ ಟೆಲಿಗ್ರಾಂನಲ್ಲಿ ಪ್ರಚಾರ: ಇನ್ನೋರ್ವ ಆರೋಪಿ ಸೆರೆ

ಕಾಸರಗೋಡು: ಹೆಣ್ಮಕ್ಕಳ ಚಿತ್ರಗಳನ್ನು ಅವರಿಗೆ ತಿಳಿಯದಂತೆ ಸಂಗ್ರಹಿಸಿ ತಾಂತ್ರಿಕ ವಿದ್ಯೆಗಳ ಮೂಕ ಮೋರ್ಫ್ ನಡೆಸಿ ಅಶ್ಲೀಲ ಚಿತ್ರಗಳಾಗಿ ಬದಲಾಯಿಸಿ ಟೆಲಿಗ್ರಾಂ ಗ್ರೂಪ್‌ಗಳ ಮೂಲಕ ಪ್ರಚಾರಗೈದ ಪ್ರಕರಣದಲ್ಲಿ ಪ್ರಧಾನ ಆರೋಪಿಯನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ಪುಳಕ್ಕಾಟಿರಿ ನಿವಾಸಿ ನಿಕೇತ್ (24) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಈತ ಈ ಪ್ರಕರಣದಲ್ಲಿ ೨ನೇ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ೧ನೇ ಆರೋಪಿಯಾದ ಇರಿಯಣ್ಣಿ ನಿವಾಸಿ ಅನೂಪ್ ಎಂಬಾತನನ್ನು ಈ ಮೊದಲು ಸೆರೆ ಹಿಡಿಯಲಾಗಿತ್ತು. ಬಳಿಕ ನಡೆಸಿದ ಸಮಗ್ರ ತನಿಖೆಯಲ್ಲಿ ೧ನೇ …

3 ದಿನಗಳ ಬ್ಯಾಂಕ್ ಮುಷ್ಕರ ಹಿಂತೆಗೆತ

ಹೊಸದಿಲ್ಲಿ: ಇಂದಿನಿಂದ ಮೂರು ದಿನ ನಡೆಸಲು ನಿರ್ಧರಿಸಲಾಗಿದ್ದ ಬ್ಯಾಂಕ್ ನೌಕರರ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ. ಮುಷ್ಕರವನ್ನು ಮುಂದೂಡಿರುವುದಾಗಿ ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟವಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ತಿಳಿಸಿದೆ. ನಿನ್ನೆ ರಾತ್ರಿ ಇಂಡ್ಯನ್ ಬ್ಯಾಂಕ್ಸ್ ಅಸೋಸಿಯೇಶನ್ (ಐಬಿಎ)ನೊಂದಿಗೆ ನಡೆಸಿದ ಚರ್ಚೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವಾರದಲ್ಲಿ ೫ ದಿನ ಕೆಲಸ ಎಂಬ ಬೇಡಿಕೆಯನ್ನು ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿ ರೂಪೀಕರಿಸಲು ಒಪ್ಪಂದವಾಗಿದೆ. ಇತರ ಬೇಡಿಕೆಗಳಲ್ಲಿ  ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ಲಭಿಸಿದೆ ಎಂದು ನೌಕರರ …

ಬಾಲಕನಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಎಂ. ಸುರೇಶ್ ಅವರು ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು ನಾಲ್ಕು ವರ್ಷ, ಒಂದು ತಿಂಗಳ ಕಠಿಣ ಸಜೆ ಹಾಗೂ 16,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಹೊಸದುರ್ಗ ಕುಶಾಲನಗರದ ವಿನೋದ್ ಕುಮಾರ್ (52) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳು ಹಾಗೂ ೨ ವಾರ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. …