ಅಧಿಕಾರಿಗಳ ವಿಚಿತ್ರ ನಡವಳಿಕೆ: ಮೀನು ಮರಿಗಳನ್ನು ಹಿಡಿಯಬಾರದು ಆದರೆ ಮಾರಾಟಕ್ಕೆ ತಡೆ ಇಲ್ಲ

ಕಾಸರಗೋಡು: ಜಿಲ್ಲೆಯ ಬಂದರುಗಳಿಂದ ಮೀನು ಹಿಡಿದು  ಮಾರುಕಟ್ಟೆಗೆ ತರುವ ಸಣ್ಣ ಭೂತಾಯಿ ಮೀನುಗಳನ್ನು ಫಿಶರೀಸ್ ಇಲಾಖೆ, ಎನ್‌ಫೋರ್ಸ್‌ಮೆಂಟ್ ಜಂಟಿಯಾಗಿ ವಶಪಡಿಸುತ್ತಿರುವಾಗ ಮೀನು ಮಾರುಕಟ್ಟೆಗಳಲ್ಲಿ ಸಣ್ಣ ಭೂತಾಯಿಯ ಮಾರಾಟ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಈ ಮಧ್ಯೆ ರಾಜ್ಯದ ಆಳಸಮುದ್ರದಿಂದ ಮೀನು ಮರಿಗಳನ್ನು ಸಂಗ್ರಹಿಸಿ ಅನ್ಯರಾಜ್ಯಗಳಿಗೆ ಸಾಗಿಸುತ್ತಿ ರುವುದಾಗಿಯೂ ಆರೋಪವಿದೆ. ೧೦ ಸೆ.ಮೀ.ಗಿಂತ ಕೆಳಗಿನ ಗಾತ್ರದ ಸಣ್ಣ ಮೀನು ಮರಿಗಳು ವ್ಯಾಪಕವಾಗಿದೆ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ವಿವಿಧ ಬಂದರುಗಳಿಂದ ಫಿಶರೀಸ್ ಇಲಾಖೆ ಅಧಿಕಾರಿಗಳು ಇವುಗಳನ್ನು ವಶಪಡಿಸಿದ್ದರು. ಮಂಜೇಶ್ವರದಿಂದ ೩೦ …

ಮುಳ್ಳೇರಿಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಸಮರ್ಪಕ ನಿರ್ವಹಣೆಗೆ ಜನರ ಆಗ್ರಹ

ಮುಳ್ಳೇರಿಯ: ಮಳೆ ಬಂದರೂ, ಬಾರದಿದ್ದರೂ ಪದೇಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ಮುಳ್ಳೇರಿಯ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ವಿದ್ಯುತ್ ವ್ಯತ್ಯಯದಿಂದ ಮನೆಗಳ ದೈನಂದಿನ ಚಟುವಟಿಕೆಗಳು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ವ್ಯಾಪಾರ-ವ್ಯವಹಾರಗಳ ಮೇಲೂ ಪರಿಣಾಮ ಬೀರುತ್ತಿದೆ.ವಿದ್ಯುತ್ ಯಾವಾಗ ಕಡಿತವಾಗುತ್ತದೆ, ಯಾವಾಗ ಪುನಃ ಪೂರೈಕೆಯಾಗುತ್ತದೆ ಎಂಬುದು ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ. ಈ ಸಮಸ್ಯೆಗೆ ತಾತ್ಕಾಲಿಕ ದುರಸ್ತಿಗಿಂತ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ವಿದ್ಯುತ್ ತಂತಿಗಳು ಹಾದುಹೋಗುವ ಪ್ರದೇಶಗಳಲ್ಲಿ ಮರಗಳ ರೆಂಬೆ-ಕೊಂಬೆಗಳು …

ಯುಡಿಎಫ್ ಅಧಿಕಾರಕ್ಕೇರಿದ ಬಳಿಕ  ಜನಜೀವನ ಅಸ್ತವ್ಯಸ್ಥ- ಡಿವೈಎಫ್‌ಐ

ಕಾಸರಗೋಡು: ರಾಜ್ಯದಲ್ಲಿ ಯುಡಿಎಫ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನಜೀವನ ಅಸ್ತವ್ಯಸ್ಥಗೊಂಡಿದೆಯೆಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ರತೀಶ್ ಎಂ.ವಿ ಆರೋಪಿಸಿದ್ದಾರೆ. ಸಿಪಿಎಂ ವಿಸ್ತರಣಾ ಜಿಲ್ಲಾ ಸಮಿತಿ ಅಂಗವಾಗಿ ಚೆಟ್ಟುಂಗುಳಿಯಲ್ಲಿ ನಡೆದ ಪಕ್ಷದ ರಾಮದಾಸನಗರ ಲೋಕಲ್ ಬಹುಜನ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯುಡಿಎಫ್ ಸರಕಾರ ಅಧಿಕಾರಕ್ಕೇರಿದ ಬಳಿಕ ನಿತ್ಯೋಪಯೋಗಿ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ವಿದ್ಯುತ್ ಕಡಿತದಿಂದ ಆಸ್ಪತ್ರೆಗಳು ಸಹಿತ ಎಲ್ಲಾ ವಲಯಕ್ಕೂ ಹೊಡೆತ ಬಿದ್ದಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರುಗಳ ಅಭಾವ ಹಾಗೂ ಔಷಧಿಗಳ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದಾರೆ. …

ಕುಂಬಳೆ ಉಪಜಿಲ್ಲಾ ಶಾಲಾ ಕ್ರೀಡಾ ಕೂಟಕ್ಕೆ ಚಾಲನೆ

ಕುಂಬಳೆ: 68ನೇ  ಕುಂಬಳೆ ಉಪ ಜಿಲ್ಲಾ ಕ್ರೀಡಾ ಕೂಟಕ್ಕೆ ಕುಂಬಳೆ ಜಿಎಸ್‌ಬಿಎಸ್‌ನಲ್ಲಿ ಚಾಲನೆ ನೀಡಲಾ ಗಿದೆ. ಸ್ವಾಗತ ಸಮಿತಿ ಅಧ್ಯಕ್ಷ, ಕುಂಬಳೆ ಪಂಚಾಯತ್ ಅಧ್ಯಕ್ಷ ಬಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಎಸಿಪಿ ಅಚ್ಯುತ್ ಅಶೋಕ್ ವಂದನೆ ಸ್ವೀಕರಿಸಿದರು. ಉಪಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಅಶೋಕ್ ಧ್ವಜಾರೋಹಣಗೈದರು. ಕಾಸರಗೋಡು ಬ್ಲೋಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಜಿಲ್ಲಾ ಪಂಚಾಯತ್ ಸದಸ್ಯ ಅಸೀಸ್ ಕಳತ್ತೂರು, ಕುಂಬಳೆ ಸಿಐ ಅನೂಪ್ ಕೃಷ್ಣ, ಸ್ವಾಗತ ಸಮಿತಿ ಪದಾಧಿಕಾರಿಗಳಾದ …

ಅಂಗನವಾಡಿ ನೌಕರರು ಭೂಮಿಯ ಮೇಲಿನ ದೇವತೆಗಳು-ಎಂ.ಎಲ್. ಅಶ್ವಿನಿ

ಮಂಜೇಶ್ವರ: ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು ಮತ್ತು ಹಸಿರು ಕ್ರಿಯೆ ಸೇನೆ ಸದಸ್ಯೆ ಯರು ಭೂಮಿಯ ಮೇಲಿನ ದೇವತೆ ಗಳಾಗಿದ್ದು, ಅವರ ನಿಸ್ವಾರ್ಥ ಸೇವೆಗೆ ಇಡೀ ಸಮಾಜ ಋಣಿಯಾಗಬೇಕಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು.‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ ಮೀಂಜ ಪಂಚಾಯತ್ ವ್ಯಾಪ್ತಿಯ ಕೋಳಿಯೂರು ಅಂಗನ ವಾಡಿಯಲ್ಲಿ ನಡೆದ ಸಮಾರಂಭದಲ್ಲಿ 2024-25ನೇ ಸಾಲಿನ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ರಾಜ್ಯ ಪ್ರಶಸ್ತಿ ಪಡೆದ ಪಿ. ವಿಶಾಲಾಕ್ಷಿ ಅವರನ್ನು ಬಿಜೆಪಿ ಪರವಾಗಿ ಸನ್ಮಾನಿಸಿ ಅವರು ಮಾತ …

ಹುಸೈನಾರ್ ನಿಧನ

 ಮೊಗ್ರಾಲ್: ಮೊಗ್ರಾಲ್‌ನ ಹಿರಿಯ ವ್ಯಾಪಾರಿ, ಪೆರುವಾಡ್ ಕೆ.ಕೆ. ರಸ್ತೆ ನಿವಾಸಿ ಹುಸೈನಾರ್ (68) ನಿಧನ ಹೊಂದಿದರು. ಮೃತರು ಪತ್ನಿ ಆಯಿಷಾ, ಮಕ್ಕಳಾದ ರಾಶಿದ್, ನಾಸರ್, ರಸೀನ, ಮಿಸ್ರಿಯ, ರಿಯಾನ, ರಿಸಾನ, ಅಳಿಯ-ಸೊಸೆಯಂದಿರು, ಸಹೋದರ -ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಾಲಕೃಷ್ಣ ನಾಯ್ಕ ನಿಧನ

ಬದಿಯಡ್ಕ: ಎದೆನೋವು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ ವ್ಯಕ್ತಿ ಮೃತಪಟ್ಟರು. ಪಳ್ಳತ್ತಡ್ಕ ನಿವಾಸಿ ಬಾಲಕೃಷ್ಣ ನಾಯ್ಕ (54) ಮೃತಪಟ್ಟವರು. ತೆಂಗಿನಕಾಯಿ ಸುಲಿಯುವ ಕಾರ್ಮಿಕನಾಗಿದ್ದಾರೆ. ಮನೆ ಕೆಲಸದ ನಡುವೆ ಇವರಿಗೆ ಎದೆನೋವು ಕಂಡು ಬಂದಿದ್ದು, ಕೂಡಲೇ ಕಾಸರಗೋ ಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ನಿನ್ನೆ ಇವರು ಕೊನೆಯುಸಿರೆಳೆದರು. ಮೃತರು ಪತ್ನಿ ಜಯಶ್ರೀ, ಮಕ್ಕಳಾದ ವಿಘ್ನೇಶ್ ಕುಮಾರ್, ಅಜಿತ್ ಕುಮಾರ್, ಸೊಸೆ ದಿವ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಚಿನ್ನಾಭರಣ ವ್ಯಾಪಾರಿ ನಿಧನ

ಕಾಸರಗೋಡು: ನಗರದ ಹಳೆ ಬಸ್ ನಿಲ್ದಾಣದಲ್ಲಿ ಚಿನ್ನ ವ್ಯಾಪಾರ ನಡೆಸುತ್ತಿದ್ದ ನೀಲೇಶ್ವರ ಕರುವಾಚ್ಚೇರಿ ನಿವಾಸಿ ಎಂ.ವಿ. ಜಯನ್ (64) ನಿಧನ ಹೊಂದಿದರು. ಮೃತರು ಸಹೋದರರಾದ ಸಿ.ವಿ. ಗಂಗಾಧರನ್, ಸಿ.ವಿ. ಗಿರೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.