ಲೈಂಗಿಕ ದೌರ್ಜನ್ಯಕ್ಕೀಡಾದ ಯುವತಿಯಿಂದ ಮಗುವಿಗೆ ಜನ್ಮ: ಆರೋಪಿ ಪತ್ತೆಗಾಗಿ ಶೋಧ

ಮಂಜೇಶ್ವರ: ಲೈಂಗಿಕ ದೌರ್ಜನ್ಯ ಕ್ಕೀಡಾದ ಯುವತಿ ಮಗುವಿಗೆ ಜನ್ಮ ನೀಡಿದಳು.  ಈ ಹಿನ್ನೆಲೆಯಲ್ಲಿ 40ರ ಹರೆಯದ ಚಂದ್ರು ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಆರೋಪಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 21ರ ಹರೆಯದ ಯುವತಿ  ಲೈಂಗಿಕ ದೌರ್ಜನ್ಯಕ್ಕೊಳಗಿದ್ದಳು.  ಆದರೆ  ಭಯ ದಿಂದ ಯುವತಿ ಈ ವಿಷಯವನ್ನು ಯಾರಲ್ಲೂ ತಿಳಿಸಿರಲಿಲ್ಲ. ತುಂಬು ಗರ್ಭಿಣಿಯಾದ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಪೊಲೀಸರು ಕೇಸು …

ನರೇಂದ್ರ ಮೋದಿಯವರದ್ದು ಅಭಿವೃದ್ಧಿ ಹಾಗೂ ಸೇವೆಯನ್ನೇ ಮುಖಮುದ್ರೆಯಾಗಿಸಿಕೊಂಡ ಆಡಳಿತ-ಸಿ.ಕೆ. ಪದ್ಮನಾಭನ್

ಕಾಸರಗೋಡು: ‘ಅಂತ್ಯೋದಯ’ ಎಂಬ ಆಶಯದ ಸಾಕಾರತೆಯ ಮೂಲಕ 140 ಕೋಟಿ ಜನರ ಕಲ್ಯಾಣ ಹಾಗೂ ದೇಶದ ಸಮಗ್ರ ಅಭಿವೃದ್ಧಿ ಗಾಗಿ ಶ್ರಮಿಸುತ್ತಿರುವ ಆಡಳಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರದ್ದು ಎಂಬುದನ್ನು ಜಗತ್ತು ಇಂದು ಒಪ್ಪಿಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ಹೇಳಿದರು.ನರೇಂದ್ರ ಮೋದಿಯವರು ಆಡಳಿತಗಾರರಾಗಿ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ರಾಷ್ಟ್ರಮಟ್ಟದಲ್ಲಿ ಹಮ್ಮಿಕೊಂಡಿರುವ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಕಾಸರಗೋಡು ಮುನ್ಸಿಪಲ್ ಟೌನ್ ಹಾಲï‌ನಲ್ಲಿ ಇಂದು ಬೆಳಿಗ್ಗೆ ಜರಗಿದ …

ನ್ಯೂಮೋನಿಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಬಾಲಕಿ ಮೃತ್ಯು

ಉಪ್ಪಳ: ನ್ಯುಮೋನಿಯ ಬಾಧಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಾಲಕಿ ಮೃತಪಟ್ಟಳು. ಮಂಜೇಶ್ವರ ದೇರಂಗಡಿಪಳ್ಳದ ಲೋಕೇಶ್ ಎಂಬವರ ಪುತ್ರಿ ಎಂ. ವೀಕ್ಷಾ (5) ಮೃತಪಟ್ಟ ದುರ್ದೈವಿ. ಈಕೆ ಮಂಜೇಶ್ವರ ಎಸ್‌ಎಟಿ ಶಾಲೆಯ  ಯುಕೆಜಿ ವಿದ್ಯಾರ್ಥಿನಿ ಯಾಗಿದ್ದಳು.  ತೀವ್ರ ಜ್ವರ ಬಾಧಿಸಿದ ಹಿನ್ನೆಲೆಯಲ್ಲಿ ವೀಕ್ಷಳನ್ನು  ಆಸ್ಪತ್ರೆಗೆ ತಲುಪಿಸಿ ತಪಾಸಣೆ ನಡೆಸಿದಾಗ ನ್ಯುಮೋನಿಯ ಬಾಧಿಸಿರುವುದಾಗಿ ತಿಳಿದುಬಂದಿತ್ತು. ಬಳಿಕ ತಜ್ಞ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಳೆದ ಮೂರು ವಾರಗಳಿಂದ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಳು.  ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ  ವ್ಯಯಿಸಲಾಗಿದೆ.  ಬಾಲಕಿಯನ್ನು ರಕ್ಷಿಸಲು  …

ಸಿಡಿಲು ಬಡಿದು ಯುವಕ ಮೃತ್ಯು

ಮುಳ್ಳೇರಿಯ: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಕುಂಟಾರು ಉಯಿತ್ತಡ್ಕ ಮಾಯಿಲಂಕೋಟೆ ನಿವಾಸಿ ಅರಬಿ ಎಂಬವರ ಪುತ್ರ ಮುಹಮ್ಮದ್ ನೌಫಲ್ ಪಿ.ಎ (30) ಮೃತಪಟ್ಟ  ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ ೭.೩೦ರ ವೇಳೆ  ಘಟನೆ ನಡೆದಿದೆ. ನೌಫಲ್ ಪಾಂಡಿ ಬಳವಂತಡ್ಕದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ  ಸಿಡಿಲಿನ ಆಘಾತವುಂಟಾಗಿದ್ದು, ಇದರಿಂದ ತೀವ್ರ ಅಸ್ವಸ್ಥಗೊಂಡ ನೌಫಲ್‌ರನ್ನು ಕೂಡಲೇ ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗ ಲಿಲ್ಲ. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ …

ಮೆಕ್ಯಾನಿಕ್ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಆಟೋ ವರ್ಕ್‌ಶಾಪ್‌ನ ಮೆಕ್ಯಾನಿಕ್  ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಡಿ ಕೊಲ್ಲಂಪಾಡಿ ನಿವಾಸಿ ಟಿ. ಅಜೀಶ್ (31) ಸಾವನ್ನಪ್ಪಿದ ಯುವಕ. ಇವರು ನಿನ್ನೆ ಅಪರಾಹ್ನ ಮನೆ ಪಕ್ಕದ ಹಿತ್ತಿಲ ಮರದ ರೆಂಬೆಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಬೇತೂರು ಪಾರದ ಗೋಪಾಲ- ನಿರ್ಮಲ ದಂಪತಿ ಪುತ್ರನಾಗಿರುವ ಮೃತರು ಕಳೆದ ಹಲವು ವರ್ಷಗಳಿಂದ …

ಸೆಂಟ್ರಿಂಗ್ ಕಾರ್ಮಿಕ ಬಾವಿಯ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಬಂಗ್ರ ಮಂಜೇಶ್ವರ ಕೋಟಗಂ ತರವಾಡು ಬಳಿಯ ನಿವಾಸಿ, ಸೆಂಟ್ರಿAಗ್ ಕಾರ್ಮಿಕ ಕೇಶವ (63) ಎಂಬವರ ಮೃತದೇಹ ಮನೆ ಬಳಿಯ ಬಾವಿಯ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಭಾನುವಾರ ಬೆಳಿಗ್ಗೆ ಮನೆಯಿಂದ ಹೊರಗಡೆ ಹೋದ ಇವರು ಬಳಿಕ ಮರಳದೆ ನಾಪತ್ತೆಯಾಗಿದ್ದರು. ನಿನ್ನೆ ಬೆಳಿಗ್ಗೆ ಸುಮಾರು 10ಗಂಟೆ ವೇಳೆ ಸಂಬAಧಿಕೆಯಾದ ಮಹಿಳೆ ಈ ದಾರಿಯಗಿ ಮನೆಗೆ ತೆರಳುವ ವೇಳೆ ಬಾವಿಯ ಕಟ್ಟೆಯಲ್ಲಿ ಮೊಬೈಲ್ ಕಂಡು ಬಂದಿದ್ದು, ಅದನ್ನು ನೋಡಲೆಂದು ಬಾವಿಯ ಬಳಿ ಹೋದ ವೇಳೆ ಮೃತದೇಹ ಪತ್ತೆಯಾಗಿದೆ. …

ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ: ಹಲವು ಮಾದಕದ್ರವ್ಯ ಪ್ರಕರಣಗಳ ಆರೋಪಿ ಸೆರೆ

ಕಾಸರಗೋಡು: ನಗರದ ನೆಲ್ಲಿಕುಂಜೆ ಲೈಟ್ ಹೌಸ್ ಬಳಿ ಕಾಸರಗೋಡು ಪೊಲೀಸ್ ಇನ್ಸ್‌ಪೆಕ್ಟರ್ ಮೆಲ್ವಿನ್ ಜೋಸ್‌ರ ನೇತೃತ್ವದ ಪೊಲೀಸರು ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 69.510 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂಲತಃ ಕಾಸರಗೋಡು ತಾಯಲಂಗಾಡಿ ಕೆ.ಇ. ವಳಪ್ಪಿಲ್ ಹೌಸ್‌ನ ನಿವಾಸಿ ಹಾಗೂ ಈಗ ಉಳಿಯತ್ತಡ್ಕ ಎಸ್‌ಪಿ ನಗರದಲ್ಲಿ ವಾಸಿಸುತ್ತಿರುವ ಅಬ್ದುಲ್ ಖಾದರ್ ಕೆ.ಇ. ಅಲಿಯಾಸ್ ರ‍್ಯಾಂಬೋ ಖಾದರ್ (56) ಬಂಧಿತ ಆರೋಪಿ. ಬಂಧಿತನು ಹಲವು ಮಾದಕ ದ್ರವ್ಯ ಪ್ರಕರಣಗಳ ಆರೋಪಿಯಾಗಿದ್ದಾನೆ. ಅದಕ್ಕೆ …

ಮನೆಯಿಂದ ಹೊರಗೆ ಹೋದ ಯುವತಿ ನಾಪತ್ತೆ

ಮಂಜೇಶ್ವರ: ಮನೆಯಿಂದ ಹೊರಗೆ ತೆರಳಿದ ಯುವತಿ ಮರಳಿ ಬಂದಿಲ್ಲವೆಂದು ದೂರಲಾಗಿದೆ.  ಕುಂಜತ್ತೂರು ಬಿ.ಎಸ್.ನಗರದ ಬಪ್ಪನ್ ಕುಂಞಿಯವರ ಪುತ್ರಿ ಫಾತಿಮತ್ ಅಫ್ರೀನ (24) ನಾಪತ್ತೆಯಾದ ಯುವತಿ. ಈ ಬಗ್ಗೆ ತಾಯಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ ಫಾತಿಮತ್ ಅಫ್ರೀನ ಮನೆಯಿಂದ ಹೊರಗೆ ಹೋಗಿದ್ದಾಳೆ. ರಾತ್ರಿಯಾ ದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

ಕನ್ನಡ ಭಾಷಾ ವಲಯಗಳಲ್ಲಿ ಬಿಪಿಸಿಯಾಗಿ ಕನ್ನಡ ಅಧ್ಯಾಪಕರನ್ನು ನೇಮಿಸಲು ಕನ್ನಡ ಅಧ್ಯಾಪಕರ ಸಂಘ ಆಗ್ರಹ:  ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ಮತ್ತೊಂದು ಹೊಡೆತ

ಉಪ್ಪಳ: ಎಸ್‌ಎಸ್‌ಕೆಯ ನೇತೃತ್ವದಲ್ಲಿ ಶಿಕ್ಷಣ ಚಟುವಟಿಕೆಗಳನ್ನು ಜ್ಯಾರಿಗೊಳಿಸುವ ಬಿಆರ್‌ಸಿಗಳಲ್ಲಿ ಬಿಪಿಸಿಗಳನ್ನು ನೇಮಕ ಮಾಡುವಾಗ ಭಾಷಾ ಅಲ್ಪಸಂಖ್ಯಾತ ವಲಯವಾದ ಮಂಜೇಶ್ವರ ಉಪ ಜಿಲ್ಲೆಯ ಬಿಆರ್‌ಸಿಯಲ್ಲಿ ಕನ್ನಡ ಮಾಧಮ ಅಧ್ಯಾಪಕರನ್ನು ಪರಿಗಣಿಸದಿರುವುದರಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಆರ್ಗನೈಸೇಷನ್ ಮಂಜೇಶ್ವರ ಉಪಜಿಲ್ಲಾ ಸಮಿತಿ ಪ್ರತಿಭಟಿಸಿದೆ. ಮಂಜೇಶ್ವರ ಉಪಜಿಲ್ಲೆಯ ೯೦ ಶೇಕಡಾದಷ್ಟು ಶಾಲೆಗಳು ಭಾಷಾ ಅಲ್ಪಸಂಖ್ಯಾತ ವಲಯದಲ್ಲಿ ಕಾರ್ಯಾಚರಿಸುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಕಲಿಯುವವರಾಗಿದ್ದಾರೆ. ಶಿಕ್ಷಣ ಗುಣಮಟ್ಟ ಖಚಿತಪಡಿಸುವುದಕ್ಕಾಗಿ ಸರಕಾರ ಜ್ಯಾರಿಗೊಳಿಸುವ ವಿವಿಧ ಯೋಜನೆಗಳು ಬಿಆರ್‌ಸಿ ಮೂಲಕ ಸಂಯೋಜಿಸಲಾಗುತ್ತಿದೆ. …

ಜಿಲ್ಲಾ ಮುಸ್ಲಿಂ ಲೀಗ್‌ಗೆ ನೂತನ ಪದಾಧಿಕಾರಿಗಳು: ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷ, ಪಿ.ಎಂ. ಮುನೀರ್ ಹಾಜಿ ಪ್ರಧಾನ ಕಾರ್ಯದರ್ಶಿ

ಕಾಸರಗೋಡು: ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷರಾಗಿ ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನುರನ್ನು ಘೋಷಿಸಲಾಗಿದೆ. ರಾಜ್ಯಾಧ್ಯಕ್ಷ ಸಯ್ಯೀದ್ ಸಾದಿಕ್ ಅಲಿ ಶಿಹಾಬ್ ತಂಙಳ್ ಈ ಘೋಷಣೆ ನಡೆಸಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಂ. ಮುನೀರ್ ಹಾಜಿಯವರನ್ನು, ಕೋಶಾಧಿಕಾರಿಯಾಗಿ  ಪಳ್ಳಿಕ್ಕರೆಯ ಕೆಇಎ ಬಕ್ಕರ್‌ರನ್ನು ಘೋಷಿಸಲಾಗಿದೆ. ಕೆ.ಎಂ. ಅಬ್ದುಲ್ ರಹ್ಮಾನ್, ವಿ.ಕೆ. ಬಾವ (ತೃಕರಿಪುರ) ಎಂಬಿವರನ್ನು ಹೊಸ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅಶ್ರಫ್ ಎಡನೀರು ಜಿಲ್ಲಾ ಕಾರ್ಯದರ್ಶಿಯಾಗುವರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳು ಹೊಸ ಹುದ್ದೆಗಳಿಗೆ ನೇಮಕಗೊಂಡ ಹಿನ್ನೆಲೆಯಲ್ಲಿ …