ಕಾಯರ್‌ಕಟ್ಟೆ ಶಾಲೆಯಲ್ಲಿ ಡಿಜಿಟಲ್ ಸ್ಕ್ವೇರ್ ಉದ್ಘಾಟನೆ

ಪೈವಳಿಕೆ: ಕಾಯರ್‌ಕಟ್ಟೆ ಜಿ.ಎಚ್.ಎಸ್.ಎಸ್. ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಲಾದ ಡಿಜಿಟಲ್ ಸ್ಕ್ವೇರ್‌ನ್ನು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಉದ್ಘಾಟಿಸಿ, ಮಾತನಾಡಿ, ಆಧುನಿಕ ತಂತ್ರಜ್ಞಾನದ ಪರಿಚಯವನ್ನು ಶಾಲಾ ಹಂತದಲ್ಲೇ ಮಕ್ಕಳಿಗೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.ತಂತ್ರಜ್ಞಾನ ಆಧಾರಿತ ಕಲಿಕೆಯು ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ, ಕುತೂಹಲ ಹಾಗೂ ಸೃಜನಶೀಲತೆಯನ್ನು ಬೆಳೆಸುತ್ತದೆ. ತಂತ್ರಜ್ಞಾನವನ್ನು ಜ್ಞಾನಾರ್ಜನೆ ಮತ್ತು ಕೌಶಲ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳ ಕಲಿಕೆಯನ್ನು ಸರಳ, ಪರಿಣಾಮಕಾರಿ ಹಾಗೂ ಆಸಕ್ತಿದಾಯಕವಾಗಿಸುವ ಇಂತಹ ವಿನೂತನ ಪ್ರಯತ್ನಗಳು …

ಬುಲ್ಲೆಟ್‌ಗೆ ಢಿಕ್ಕಿ ಹೊಡೆದು ಪ್ರಪಾತಕ್ಕೆ ಮಗುಚಿ ಬಿದ್ದ ಲಾರಿ

 ಕಾಸರಗೋಡು: ಗೂಗಲ್ ಮ್ಯಾಪ್ ನೋಡಿ ಚಲಾಯಿಸಿದ ಲಾರಿ ಕುತ್ತಿಕ್ಕೋಲ್ ವಟ್ಟಂತಟ್ಟದಲ್ಲಿ ಬುಲ್ಲೆಟ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಪ್ರಪಾತಕ್ಕೆ ಮಗುಚಿದೆ. ಢಿಕ್ಕಿಯ ಆಘಾತದಿಂದ ಬುಲ್ಲೆಟ್‌ನ ಸವಾರರು ಎಸೆಯಲ್ಪಟ್ಟ ಕಾರಣ  ದೊಡ್ಡ ದುರಂತ ತಪ್ಪಿಹೋಗಿದೆ. ನಿನ್ನೆ ರಾತ್ರಿ 8.30ರ ವೇಳೆ ಕುತ್ತಿಕ್ಕೋಲ್- ಕಾನತ್ತೂರು ರಸ್ತೆಯ ವಟ್ಟಂತಟ್ಟ ಇಳಿಜಾರಿನಲ್ಲಿ ಅಪಘಾತ ಸಂಭವಿ ಸಿದೆ. ತಮಿಳುನಾಡಿನಿಂದ ಕಾಸರಗೋ ಡಿಗೆ ಆಗಮಿಸುತ್ತಿದ್ದ ಲಾರಿ ಯ ಚಾಲಕ ಗೂಗಲ್ ಮ್ಯಾಪ್ ನೋಡಿ ಲಾರಿ ಚಲಾಯಿಸುತ್ತಿದ್ದನು. ವಟ್ಟಂತಟ್ಟ ಇಳಿಜಾರಿಗೆ ತಲುಪಿದಾಗ ಲಾರಿಯ ಬ್ರೇಕ್ ಡೌನ್ ಆಗಿ ಮುಂಭಾಗದಲ್ಲಿ …

ಬದಿಯಡ್ಕದಲ್ಲಿ ಡಾ| ಮಾಲಿನಿ ಸರಳಾಯ ಮೆಮೋರಿಯಲ್ ಮಲ್ಟಿ ಸ್ಪೆಶಾಲಿಟಿ ಕ್ಲಿನಿಕ್ 25ರಂದು ಉದ್ಘಾಟನೆ

ಬದಿಯಡ್ಕ: ಬದಿಯಡ್ಕ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸನ ಕಾಂಪ್ಲೆಕ್ಸ್‌ನಲ್ಲಿ ಡಾ| ಮಾಲಿನಿ ಸರಳಾಯ ಮೆಮೋರಿಯಲ್ ಮಲ್ಟಿ ಸ್ಪೆಶಾಲಿಟಿ ಕ್ಲಿನಿಕ್‌ನ ಉದ್ಘಾಟನೆ ಈ ತಿಂಗಳ 25ರಂದು ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಕ್ಲಿನಿಕ್‌ನ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡುವರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿರುವರು. ಇ.ಎನ್.ಟಿ, ಸಾಮಾನ್ಯ ತಜ್ಞರು, ಎಲುಬು, ಮಧುಮೇಹ, ಕಿಡ್ನಿ ತಜ್ಞರು ಸಹಿತ ನುರಿತ ವೈದ್ಯರ ಸೇವೆ ಇಲ್ಲಿ ಲಭ್ಯವಿರುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಬಿಎಂಎಸ್ ಜಿಲ್ಲಾ ಸಮ್ಮೇಳನ ನಾಳೆಯಿಂದ: ನಗರದಲ್ಲಿ ಡಂಗುರ ಜಾಥಾ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಸಮ್ಮೇಳನ ನಾಳೆ, 25ರಂದು ಕಾಸರಗೋಡಿನಲ್ಲಿ ನಡೆಯಲಿದೆ. ನಾಳೆ ಬೆಳಿಗ್ಗೆ ೯.೩೦ಕ್ಕೆ ಜಿಲ್ಲೆಯ ೩೮ ಪಂಚಾಯತ್‌ಗಳಿಂದ ಹಾಗೂ ಮೂರು ನಗರಸಭೆಗಳಿಂದಾಗಿ 1೦,೦೦೦ ಕಾರ್ಮಿಕರು ಭಾಗವಹಿಸುವ ಮೆರವಣಿಗೆಯೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಬಳಿಕ ನಡೆಯುವ ಸಾರ್ವಜನಿಕ ಸಮ್ಮೇಳನವನ್ನು ರಾಜ್ಯ ಕಾರ್ಯದರ್ಶಿ ಕೆ.ವಿ. ಮಧುಕುಮಾರ್ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಉಪೇಂದ್ರ ಕೆ. ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ರಾಜ್ಯ ಡೆಪ್ಯುಟಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರನ್, ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಪಿ. ಮುರಳೀಧರನ್ ಮಾತನಾಡುವರು. …

ಸಿಪಿಎಂ ಮುಖಂಡ ವಿ. ಸುರೇಂದ್ರನ್ ನಿಧನ

ಮೊಗ್ರಾಲ್‌ಪುತ್ತೂರು: ಕಾಸರಗೋಡು ಸಿಪಿಎಂನ ಹಿರಿಯ  ಮುಖಂಡ ವಿ. ಸುರೇಂದ್ರನ್ (72) ನಿಧನ ಹೊಂದಿದರು. ಮೊಗ್ರಾಲ್ ಪುತ್ತೂರು ಪೆರಿಯಡ್ಕ ನಿವಾಸಿಯಾಗಿದ್ದಾರೆ. ಮೂಲತಃ ಕಣ್ಣೂರು ನಿವಾಸಿಯಾದ ಇವರು  ಕಾಸರಗೋಡು ಜಿಲ್ಲಾ ರೂಪೀಕರಣಕ್ಕೂ ಮುಂಚಿತ ಹಾಗೂ ಅದರ ಬಳಿಕ ಹಲವು ವರ್ಷ ಕಾಲ ಸಿಪಿಎಂ ಕಾಸರಗೋಡು ಏರಿಯ ಸಮಿತಿ ಕಚೇರಿ ಕಾರ್ಯದರ್ಶಿಯಾಗಿದ್ದರು. ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅಂದು   ಏರಿಯಾ ಕಾರ್ಯದರ್ಶಿ ಆಗಿದ್ದರು. ಜಿಲ್ಲಾ ಸಮಿತಿ ಕಚೇರಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಳಿಕ ದಿನೇಶ್ ಬೀಡಿ ಚೌಕಿ ಬ್ರಾಂಚ್ ಮೇಸ್ತ್ರಿಯಾಗಿದ್ದರು. ಸಿಪಿಎಂ …