ಬದಿಯಡ್ಕ: ಬದಿಯಡ್ಕ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸನ ಕಾಂಪ್ಲೆಕ್ಸ್‌ನಲ್ಲಿ ಡಾ| ಮಾಲಿನಿ ಸರಳಾಯ ಮೆಮೋರಿಯಲ್ ಮಲ್ಟಿ ಸ್ಪೆಶಾಲಿಟಿ ಕ್ಲಿನಿಕ್‌ನ ಉದ್ಘಾಟನೆ ಈ ತಿಂಗಳ 25ರಂದು ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಕ್ಲಿನಿಕ್‌ನ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡುವರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿರುವರು. ಇ.ಎನ್.ಟಿ, ಸಾಮಾನ್ಯ ತಜ್ಞರು, ಎಲುಬು, ಮಧುಮೇಹ, ಕಿಡ್ನಿ ತಜ್ಞರು ಸಹಿತ ನುರಿತ ವೈದ್ಯರ ಸೇವೆ ಇಲ್ಲಿ ಲಭ್ಯವಿರುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.






