ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ  ತೆಂಗಿನಗರಿಯ ಪ್ರಚಾರ ಫಲಕ ಸ್ಥಾಪನೆ

ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ನ.೨ರಿಂದ ೪ರ ತನಕ ಜರಗಲಿದ್ದು, ಇದ ರಂಗವಾಗಿ ತೆಂಗಿನಗರಿಯ ನಾಮಫಲಕ ಗಳನ್ನು ಬದಿಯಡ್ಕ ಪೇಟೆಯಲ್ಲಿ ಸ್ಥಾಪಿಸ ಲಾಯಿತು. ಪ್ರಚಾರ ಸಮಿತಿ ಹಾಗೂ ಗ್ರೀನ್ ಪ್ರೊಟೋಕೋಲ್ ಸಮಿತಿ ನೇತೃತ್ವದಲ್ಲಿ ಪ್ರಚಾರ ಫಲಕಗಳನ್ನು ಸ್ಥಾಪಿಸಲಾಗಿದೆ. ಪ್ರಾಂಶುಪಾಲ ಎಂ. ಶ್ರೀಕೃಷ್ಣ, ಶ್ಯಾಮ್ ಪ್ರಸಾದ್ ಮಾನ್ಯ, ಹಮೀದ್ ಕೆಡೆಂಜಿ, ಆನಂದ ಮವ್ವಾರ್, ಶಾಫಿ ಚೂರಿಪಳ್ಳ, ಅಪ್ಪುರಾಜ್ ಬದಿಯಡ್ಕ, ಲತೀಫ್ ಮಾರ್ಪನಡ್ಕ, ಚಂದ್ರನ್ ಪೊಯ್ಯೆಕಂಡ, ಉಣ್ಣಿಕೃಷ್ಣನ್ ಮಾಸ್ತರ್, ರಾಜೇಶ್ ಮಾಸ್ತರ್, ಪ್ರಸಾದ್ ಮಾಸ್ತರ್, ನಿರಂಜನ …

ಸಮಾನಾಂತರ ಹೋಟೆಲ್‌ಗಳು, ಗೂಡಂಗಡಿಗಳ ವಿರುದ್ಧ ಹೋಟೆಲ್ ಮಾಲಕರಿಂದ ನಾಳೆ ಪ್ರತಿಭಟನೆ

ಕಾಸರಗೋಡು: ಸಮಾನಾಂತರ ಹೋಟೆಲ್‌ಗಳು ಮತ್ತು ಗೂಡಂಗಡಿಗಳ ವಿರುದ್ಧ ನಾಳೆ ಕಾಸರಗೋಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್‌ನ ಜಿಲ್ಲಾ ಸಮಿತಿ ತೀರ್ಮಾನಿಸಿದೆಯೆಂದು ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದ್ದಾರೆ.   ನಾಳೆ ಬೆಳಿಗ್ಗೆ 1೦ ಗಂಟೆಗೆ ಕಾಸರಗೋಡಿನಲ್ಲಿರುವ ಅಸೋಸಿಯೇಶನ್‌ನ ಜಿಲ್ಲಾ ಸಮಿತಿ ಕಚೇರಿ ಬಳಿಯಿಂದ ಹೋಟೆಲ್ ಮಾಲಕರು  ಪ್ರತಿಭಟನಾ ಮೆರವಣಿಗೆ ಆರಂಭಿಸುವರು. ಮೆರವಣಿಗೆ ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಯಾಗಿ ಅಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಸಮಾನಾಂತವಾಗಿ ಕಾರ್ಯವೆಸಗುತ್ತಿರುವ ಹೋಟೆಲ್‌ಗಳು ಮತ್ತು …

ಜೋಡುಕಲ್ಲು ಗಣೇಶಮಂದಿರ ಸಂರಕ್ಷಣೆಗಾಗಿ ಮುಂದುವರಿಯುತ್ತಿರುವ ಹೋರಾಟ

ಉಪ್ಪಳ: ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣೆಗಾಗಿ ಹೋರಾಟ ಸ್ಥಳಕ್ಕೆ ಪ್ರತಾಪನಗರದಿಂದ ಧರ್ಮರಕ್ಷಾ ಸಮಿತಿ ನೇತೃತ್ವದಲ್ಲಿ ನೂರಾರು ಭಕ್ತರು ನಿನ್ನೆ ಸಂಜೆ ಪಾದಯಾತ್ರೆ ಮೂಲಕ ತಲು ಪಿದರು. ಪ್ರತಾಪನಗರ ಗಣೇಶ ಮಂದಿರ ಹಾಗೂ ಗುಳಿಗ ಬನದಲ್ಲಿ ಪ್ರಾರ್ಥಿಸಿ ಪಾದಯಾತ್ರೆ ಆರಂಭಿಸಲಾಗಿದೆ. ಮಾತೆಯರ ಸಹಿತ ನೂರಾರು ಭಕ್ತರು ಪಾಲ್ಗೊಂಡರು. ಜೋಡುಕಲ್ಲು ಸಂರಕ್ಷಣೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ಭಜನೆ, ಯಾಗ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಈಗಲೂ ಮುಂದುವರಿ ಯುತ್ತಿದೆ. ಮಂದಿರ ಸಂರಕ್ಷಣೆಗಾಗಿ ನಿನ್ನೆ ಸಂಜೆ ಸ್ಥಳದಲ್ಲಿ ಗುಳಿಗ ದೈವಕೋಲ ನಡೆಯಿತು. …

ಕೋಟೆಕಣಿ ಶ್ರೀ ರಾಮನಾಥ ಭವನ ಸಮಿತಿಯಿಂದ ಕಾಸರಗೋಡು ಕನ್ನಡ ರಾಜ್ಯೋತ್ಸವ ನ.1ರಂದು 

ಕಾಸರಗೋಡು: ನಗರದ ಕೋಟೆಕಣಿ ರಾಮನಗರದಲ್ಲಿರುವ  ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಶ್ರಯದಲ್ಲಿ ಕಾಸರಗೋಡು ಕನ್ನಡ ರಾಜ್ಯೋತ್ಸವ ನವಂಬರ್ ೧ರಂದು  ಸಂಜೆ 5.3೦ಕ್ಕೆ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.  ಕನ್ನಡ ನಾಡಗೀತೆ ಸಮೂಹ ಗಾಯನದೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಜೆ. ಸೋಮಶೇಖರ ಉದ್ಘಾಟಿಸುವರು. ಕ.ಸಾ.ಪ ಗಡಿನಾಡ ಘಟಕದ ಅಧ್ಯಕ್ಷ ಡಾ| ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಬಿಜೆಪಿ ನೇತಾರ ನ್ಯಾಯವಾದಿ ಶ್ರೀಕಾಂತ್, ಕನ್ನಡ ಕ್ರಿಯಾ ಸಮಿತಿ  ಗೌರವಾಧ್ಯಕ್ಷ ಶಿವಪ್ರಸಾದ್ ಎಚ್.ಸಿ …

ಅಬ್ದುಲ್ ರಹಿಮಾನ್ ನಿಧನ

ಮೊಗ್ರಾಲ್: ಮೊಗ್ರಾಲ್ ಕಡಪ್ಪುರಂ ವಲಿಯ ಜುಮಾ ಮಸೀದಿ ಸಮೀಪದ ನಿವಾಸಿ ಮೀನು ಕಾರ್ಮಿಕ ಕೊಪ್ಪಳಂ ಹೌಸ್ ಅಬ್ದುಲ್ ರಹಿಮಾನ್ (77) ನಿಧನ ಹೊಂದಿದರು. ಮೃತರು ಪತ್ನಿ ಉಮ್ಮಾಲಿಮ್ಮ, ಮಕ್ಕಳಾದ ಅಸ್ಮಿನ, ಹಸೀನ, ಅನಸ್, ಅಳಿಯಂದಿರಾದ ಸಾದಿಕಲಿ, ಜಾಫರ್, ಅಸ್ಲಹ, ಸಹೋದರ ಕುಂಞಹಮ್ಮದ್, ಸಹೋದರಿ ಖದೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಎಆರ್ ಕ್ಯಾಂಪ್ ಸೀನಿಯರ್ ಪೊಲೀಸ್ ಆಫೀಸರ್ ನಿಧನ

  ಕಾಸರಗೋಡು: ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ನಿಧನ ಹೊಂದಿದರು. ಕಾಸರಗೋಡು ಎಆರ್ ಕ್ಯಾಂಪ್‌ನ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಡ್ರೈವರ್ ಕೆ. ಸುಕೇಶನ್ (54) ನಿಧನ ಹೊಂದಿದರು. ಕಾಂಗೋಲ್ ಕುಂಡಯಂ ಕೊವ್ವಲ್ ನಿವಾಸಿಯಾಗಿದ್ದಾರೆ. ಮೃತರು ತಾಯಿ ಶಾರದ, ಪತ್ನಿ ಸುಮಜ, ಮಕ್ಕಳಾದ ಶ್ರಯ, ಶ್ರಾವಣ್, ಸಹೋದರಿ ಕೆ. ಶ್ರೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಂದೆ ತೈವಳಪ್ಪಿಲ್ ಚಂದಕುಂಞಿ ಈ ಹಿಂದೆ ನಿಧನ ಹೊಂದಿದ್ದಾರೆ.

ಅಸೌಖ್ಯ: ನಿಧನ

ಮಂಜೇಶ್ವರ : ಮಜಿಬೈಲ್ ಕೊಡ್ದೆ ನಿವಾಸಿ ದಿ| ರವಿ ಎಂಬವರ ಪತ್ನಿ ಕಮಲ (56) ನಿಧನ ಹೊಂದಿದರು. ಹಲವು ತಿಂಗಳಿAದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಬುಧವಾರ ರಾತ್ರಿ ಉಸಿರಾಟದ ತೊಂದರೆ ಜೋರಾದ ಹಿನ್ನೆಲೆಯಲ್ಲಿ ಅವರನ್ನು ಕಾಸರ ಗೋಡು ಜನರಲ್ ಆಸ್ಪತ್ರೆಗೆ ಕೊಂ ಡೊಯ್ದಿದ್ದಾರೆ. ಅಲ್ಲಿ ತಪಾಸಣೆ ನಡೆಸುತ್ತಿರುವ ವೇಳೆ ಮೃತಪಟ್ಟಿದ್ದರು. ಪುತ್ರ ಸುಭಾಷ್, ಸಹೋದರಿ ಶಾರದಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಂಜೇಶ್ವರ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜನರಲ್ ಆಸ್ಪತ್ರೆಯಲ್ಲಿ ಮರಣೋ ತ್ತರ ಪರೀಕ್ಷೆ …