ಸಂಚರಿಸುತ್ತಿದ್ದ ರೈಲಿನಡಿಗೆ ಹಾರಿ ಸಾವಿಗೆ ಶರಣಾದ ಯುವಕ
ಕಾಸರಗೋಡು: ಸಂಚರಿಸುತ್ತಿದ್ದ ರೈಲಿನಡಿಗೆ ಹಾರಿ ಯುವಕ ಸಾವಿಗೆ ಶರಣಾದ ಘಟನೆ ಕಾಸರಗೋಡು ಪಳ್ಳಂನಲ್ಲಿ ಇಂದು ಮುಂಜಾನೆ ನಡೆದಿದೆ. ಈ ಬಗ್ಗೆ ಲೋಕೋ ಪೈಲಟ್ ನೀಡಿದ ಮಾಹಿತಿ ಪ್ರಕಾರ ನಗರಠಾಣೆ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು. ಘಟನೆ ನಡೆದ ಸ್ಥಳದಿಂದ ಲಭಿಸಿದ ಪರ್ಸ್‌ನಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಅದರಲ್ಲಿ ಟಿ. ಜಿತಿನ್ (26) ತೆಚ್ಚಿಕಾಟಿಲ್ ಕುರುವಾಟ್ಟೂರ್ ವಲ್ಲಪ್ಪುಳ ಪಾಲಕ್ಕಾಡ್ ಎಂಬ ವಿಳಾಸವಿದೆ. ಮೃತದೇಹ ಸಮೀಪ ಒಂದು ಮೊಬೈಲ್ ಫೋನ್ ಪತ್ತೆಯಾಗಿದ್ದು,ಅದರಲ್ಲಿ ಮೃತಪಟ್ಟ ಯುವಕನದ್ದೆಂದು ಅಂದಾಜಿಸುವ ಹಲವು ಫೋಟೋಗಳು …