ಮುಸ್ಲಿಂಲೀಗ್‌ನಿಂದ ಹಿಂದೂ ಭಾವನೆಗೆ ದಕ್ಕೆ ತರುವ ಪ್ರಯತ್ನ-ಬಿಜೆಪಿ ಆರೋಪ

ಪೈವಳಿಕೆ: ಕಳೆದ ೩೭ವರ್ಷ ಗಳಿಂದ ಗಣೇಶ ಉತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ, ಶಬರಿಮಲೆ ಮಾಲೆ ಧಾರಣೆ ನಡೆಯುವ ಜೋಡುಕಲ್ಲು ಪ್ರದೇಶದಲ್ಲಿ ಮಂದಿರದ ಮುಂಭಾಗದ ಜಮೀನು ವಿಚಾರದಲ್ಲಿ ಮುಸ್ಲಿಂ ಲೀಗ್ ದೂರಿನ ಹಿನ್ನಲೆಯಲ್ಲಿ ಲೋಕೋಪ ಯೋಗಿ ಇಲಾಖೆ ಹಾಗೂ ಪೊಲೀಸ್ ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದು, ಶಾಂತಿ ಸಮಾಧಾನದಿಂದ ಇರುವ ತುಳುನಾಡಿನಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ದಕ್ಕೆ ತರುವ ಕೆಲಸ ವನ್ನು ಮುಸ್ಲಿಂ ಲೀಗ್ ವ್ಯವಸ್ಥಿತ ಅಜೆಂಡಾದ ಭಾಗವಾಗಿ ಮಾಡುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.ಸರಕಾರ ದಬ್ಬಾಳಿಕೆ …

ಪಕ್ಷವಾತ: ಚಿಕಿತ್ಸೆ ಮಧ್ಯೆ ವ್ಯಕ್ತಿ ನಿಧನ

ಬದಿಯಡ್ಕ: ಇಲ್ಲಿಗೆ ಸಮೀಪದ ಕಂಗಣ್ಣಾರು ನಿವಾಸಿ ಅಬ್ಬಾಸ್ (58) ನಿಧನ ಹೊಂದಿದರು. ಮೊನ್ನೆ ಪಕ್ಷವಾತ ಉಂಟಾದ ಇವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ಸಂಜೆ ನಿಧನ ಸಂಭವಿಸಿದೆ. ಮೃತರು ಪತ್ನಿ ಜುವೇರಿಯಾ, ಮಕ್ಕಳಾದ ಮೊಹಮ್ಮದ್ ಆದಿಲ್, ತ್ವೈಬಾ, ಸಹೋದರ-ಸಹೋದರಿ ಯರಾದ ಇಬ್ರಾಹಿಂ, ಅಬ್ದುಲ್ಲ, ಬೀಫಾತಿಮ, ನಫೀಸ, ಸಕೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಮುಹಮ್ಮದ್ ಇಸ್ಮಾಯಿಲ್ ಮೂರು ತಿಂಗಳ ಹಿಂದೆಯಷ್ಟೇ ಹೃದಯಾಘಾತ ದಿಂದ ನಿಧನ ಹೊಂದಿದ್ದಾರೆ.

ಕೃಷ್ಣ ನಾಯ್ಕ್ ನಿಧನ

 ಮಾನ್ಯ: ದೇವರಕೆರೆ ನಿವಾಸಿ ಕೃಷ್ಣ ನಾಯ್ಕ್ (ಕಿಟ್ಟಪ್ಪ) (57) ಇಂದು ಮುಂಜಾನೆ ನಿಧನ ಹೊಂದಿದರು.  ಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ಮನೋಜ್, ಕಾರ್ತಿಕ್, ಸಹೋದರರಾದ ಕುಂಞ್ಞಪ್ಪ  (ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ), ಗೋವಿಂದ ನಾಯ್ಕ್, ಸೋಮಪ್ಪ ನಾಯ್ಕ್, ಈಶ್ವರ ನಾಯ್ಕ್, ಸಹೋದರಿ ಸರಸ್ವತಿ ಕುಂಜಾರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕೃಷ್ಣ ನಾಯ್ಕ್‌ರ ತಂದೆ ಮಾಯಿಲ ನಾಯ್ಕ್, ತಾಯಿ ಚೋಮು ಹಾಗೂ ಇನ್ನೋರ್ವ ಸಹೋದರ ವೆಂಕಪ್ಪ ನಾಯ್ಕ್ ಈ ಹಿಂದೆ ನಿಧನಹೊಂದಿದ್ದಾರೆ.

ಪ್ರತಾಪನಗರ ನಿವಾಸಿ ಲಕ್ಷ್ಮಣ್‌ದಾಸ್ ಅಸೌಖ್ಯದಿಂದ ನಿಧನ

ಮಂಗಲ್ಪಾಡಿ : ಪ್ರತಾಪನಗರ ನಿವಾಸಿ ದಿ| ಸೀನ ದಾಸ್ ರವರ ಪುತ್ರ ಲಕ್ಷ್ಮಣ್‌ದಾಸ್ (54) ನಿಧನ ಹೊಂದಿ ದರು. ಅಸೌಖ್ಯ ದಿಂದ ಬಳಲುತ್ತಿದ್ದ ಇವರನ್ನು ಗುರುವಾರ ಸಂಜೆ ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಶುಕ್ರವಾರ ಬೆಳಿಗ್ಗೆ ಉಲ್ಬಣ ಗೊಂಡಿದ್ದು, ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಹೊಂದಿದರು. ಜಾತ್ರೆಯ ವೇಳೆ ಸಂತೆ ನಡೆಸುತ್ತಿದ್ದರು. ಮೃತರು ತಾಯಿ ಕಾವೇರಿ, ಪತ್ನಿ ಸುಶೀಲ, ಮಕ್ಕಳಾದ ಅಶೋಕ, ಅಭಿಷೇಕ್, ಸೊಸೆ ನವ್ಯ, ಸಹೋದರ ಜನಾರ್ದನ ಹಾಗೂ ಅಪಾರ ಬಂಧು- ಬಳಗವನ್ನು …