ಕುಂಬಳೆ ಪೇಟೆಯಲ್ಲಿ ಘರ್ಷಣೆ: ವಾಸಸ್ಥಳಕ್ಕೆ ಅತಿಕ್ರಮಿಸಿ ನುಗ್ಗಿ ಒಡಿಶ್ಶಾ ನಿವಾಸಿಗೆ ಹಲ್ಲೆಗೈದ ಆರೋಪಿ ಸೆರೆ

ಕುಂಬಳೆ:  ಇಲ್ಲಿನ ಪೇಟೆಯಲ್ಲಿ ಘರ್ಷಣೆ ಸೃಷ್ಟಿಸಿರುವುದಲ್ಲದೆ   ಮೀನು ಕಾರ್ಮಿಕನಾದ ಒಡಿಶಾ ನಿವಾಸಿಗೆ ಹಲ್ಲೆಗೈದ ಪ್ರಕರಣದಲ್ಲಿ ಯುವಕನನ್ನು ಬಂಧಿಸಲಾಗಿದೆ.  ಕೊಯಿಪ್ಪಾಡಿ ನಿವಾಸಿ ಆಸಿಫ್ ಎಂಬಾತ ಸೆರೆಗೀಡಾದ ಆರೋಪಿ ಯಾಗಿದ್ದಾನೆ. ಒಡಿಶಾ ಬುಶಾಂತಪುರ್ ನಿವಾಸಿ ಸಂತೋಷ್ ಬೆಹ್ರ (44) ಎಂಬವರ  ಮೇಲೆ ಆಸಿಫ್ ಹಲ್ಲೆಗೈದಿರುವು ದಾಗಿ ದೂರಲಾಗಿದೆ. ನಿನ್ನೆ ಮುಂಜಾನೆ 1 ಗಂಟೆ ವೇಳೆ ಸಂತೋಷ್‌ರ ಕೊಯಿಪ್ಪಾಡಿಯಲ್ಲಿರುವ ವಾಸಸ್ಥಳಕ್ಕೆ ತಲುಪಿದ ಆಸಿಫ್ ಕೊಠಡಿಗೆ ಅತಿಕ್ರಮಿಸಿ ನುಗ್ಗಿ ಬೆದರಿಕೆಯೊ ಡ್ಡಿದ್ದನು.  ಈ ವೇಳೆ ವಾಗ್ವಾದ ಉಂ ಟಾಗಿದ್ದು, ಈಮಧ್ಯೆ ಸಂತೋಷ್‌ರ ತಲೆಗೆ …

ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತರಂಗ ಕಾರ್ಯಕ್ರಮಕ್ಕೆ ಚಾಲನೆ

ಕಾಸರಗೋಡು:  ಕೂಡ್ಲು  ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತ ಮಹೋತ್ಸವ  ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ  ‘ರಜತರಂಗ’  ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕೂಡ್ಲು  ಸುಬ್ರಾಯ ಶ್ಯಾನುಭಗ್ ವೇದಿಕೆಯಲ್ಲಿ ಇಂದು ಬೆಳಿಗ್ಗೆ ಆರಂಭ ಗೊಂಡಿತು.  ಕಾರ್ಯಕ್ರಮಕ್ಕೆ  ಕ್ಷೇತ್ರ ಅರ್ಚಕ ಸೂರ್ಯನಾರಾಯಣ ಅಡಿಗರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ರಜತರಂಗದ ಅಧ್ಯಕ್ಷ ಡಾ| ಹರಿಕಿರಣ ಬಂಗೇರ, ಯಕ್ಷಗಾನ ತರ ಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ ಕೂಡ್ಲು, ಕಾರ್ಯದರ್ಶಿ ಹರಿನಾರಾ ಯಣ ಮಯ್ಯ ಕುಂಬಳೆ, ತರಬೇತಿ ಕೇಂದ್ರದ …

ತಂದೆ ಹಿಂದಕ್ಕೆ ಚಲಾಯಿಸಿದ ಕಾರಿನಡಿಗೆ ಬಿದ್ದು ಮಗು ಮೃತ್ಯು

ಕಣ್ಣೂರು: ತಂದೆ  ಹಿಂದಕ್ಕೆ  ಚಲಾಯಿಸಿದ ಕಾರಿನಡಿಗೆ ಬಿದ್ದು  ಒಂ ದೂವರೆ ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಕಣ್ಣೂರಿನ ತಯ್ಯಿಲ್ ಎಂಬಲ್ಲಿ ಸಂಭವಿಸಿದೆ. ತಯ್ಯಿಲ್ ಕುರುವ ರೋಡ್ ಸಮೀಪ ಸೈನ್ ಹೌಸ್‌ನ ಹೂರಿನ್ ಮೆಹ ಬೂಬಿ ಎಂಬ ಹೆಣ್ಣು ಮಗು ಮೃತಪಟ್ಟ ದುರ್ದೈವಿ.  ನಿನ್ನೆ ಬೆಳಿಗ್ಗೆ ಮನೆಯಂಗಳದಲ್ಲಿ ಕಾರನ್ನು ತಿರುಗಿ ಸಲು ತಂದೆ ಯತ್ನಿಸಿದಾಗ ಮಗು ಅಲ್ಲಿಗೆ  ಓಡಿದ್ದು, ಆದರೆ ಅದನ್ನು ತಂದೆ ಕಂಡಿರಲಿಲ್ಲ. ಈ ವೇಳೆ ಕಾರಿ ನಡಿಗೆ ಬಿದ್ದು ಗಂಭೀರ ಗಾಯಗೊಂಡ ಮಗುವನ್ನು ಕೂಡಲೇ …

ರಾತ್ರಿ ಮರೆಯಲ್ಲಿ ಮಲಿನಜಲ ಮನೆ ಪರಿಸರದಲ್ಲಿ ಉಪೇಕ್ಷೆ: ದುರ್ವಾಸನೆ ಅಸಹನೀಯ; ಮನೆಮಂದಿಯ ದೂರಿನಂತೆ ತನಿಖೆ ಆರಂಭ

ಕಾಸರಗೋಡು: ರಾತ್ರಿ ಮರೆಯಲ್ಲಿ ಟ್ಯಾಂಕರ್ ಲಾರಿಯಲ್ಲಿ ತಂದ ಪಾಯಿಖಾನೆ ತ್ಯಾಜ್ಯವನ್ನು ಮನೆ ಪರಿಸರದಲ್ಲಿ ಉಪೇಕ್ಷಿಸಿರುವುದಾಗಿ ದೂರಲಾಗಿದೆ. ಮನೆ ಮಾಲಕ ನೀಡಿದ ದೂರಿನಂತೆ ಪೈವಳಿಕೆ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದರು. ಮಂಜೇಶ್ವರ ಪೊಲೀಸರು ಕೂಡಾ ತನಿಖೆಗೆ ಚಾಲನೆ ನೀಡಿದ್ದಾರೆ. ಪೈವಳಿಕೆ ಪಂಚಾಯತ್‌ನ ಏದಾರ್ ನಿವಾಸಿ ರಾಮ ಎಂಬವರ ಮನೆ ಪರಿಸರದಲ್ಲಿ ನಿನ್ನೆ ರಾತ್ರಿ ಪಾಯಿಖಾನೆ ತ್ಯಾಜ್ಯವನ್ನು ಉಪೇಕ್ಷಿಸಲಾಗಿದೆ. ರಸ್ತೆಯಲ್ಲಿ ಟ್ಯಾಂಕರ್ ಲಾರಿ ನಿಲ್ಲಿಸಿ ಕೆಳಗಿನ ಸ್ಥಳಕ್ಕೆ ಪೈಪ್ ಮೂಲಕ ಮಲಿನ ಜಲವನ್ನು ಹರಿಯಬಿಡಲಾಗಿದೆ. ಇದರಿಂದ ರಸ್ತೆಯ …

ಚೆಮ್ನಾಡು ಸಹಕಾರಿ ಸೊಸೈಟಿಯಲ್ಲಿ  ನಕಲಿ ಚಿನ್ನ ಅಡವಿರಿಸಿ 4.40 ಲಕ್ಷ ರೂ.ಸಾಲ ಪಡೆದು ವಂಚನೆ: ಹಲವು ಕಳವು ಪ್ರಕರಣಗಳ ಆರೋಪಿ ಸೆರೆ

ಕಾಸರಗೋಡು: ಕಳನಾಡಿನಲ್ಲಿರುವ ಚೆಮ್ನಾಡು  ವನಿತಾ ಸರ್ವೀಸ್ ಸೊಸೈಟಿಯಲ್ಲಿ ನಕಲಿ ಚಿನ್ನ ಅಡವಿರಿಸಿ 4.40 ಲಕ್ಷ ರೂ. ಸಾಲ ಪಡೆದು ವಂಚನೆ ಗೈದ ಪ್ರಕರಣದ ಆರೋಪಿಯನ್ನು ಮೇಲ್ಪರಂಬ ಪೊಲೀಸ್ ಠಾಣೆ ಎಸ್‌ಐ ಎ.ಟಿ. ಅಖಿಲ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಚಂದ್ರಗಿರಿ ಕೀಯೂರು ವೀಟಿಲ್‌ನ ಕೆ. ಸಾಜುದ್ದೀನ್ (47) ಬಂಧಿತ ಆರೋಪಿ. ಈತನನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.  ಕಳೆದ ಮಾರ್ಚ್ ತಿಂಗಳಿಂದ ಆರಂಭಗೊಂಡು ಮುಂದಿನ ಮೂರು ತಿಂಗಳಲ್ಲಾಗಿ ಆರೋಪಿ ನಕಲಿ ಚಿನ್ನದ ಸರ, ನಾಲ್ಕು …

ಸಿಪಿಎಂ ಬಂದ್ಯೋಡು ಲೋಕಲ್ ಕಾರ್ಯದರ್ಶಿಗೆ ಮನೆ ನಿರ್ಮಾಣ: ಸಮಿತಿ ರೂಪೀಕರಣ

ಬಂದ್ಯೋಡು: ಸಿಪಿಎಂ ಬಂದ್ಯೋಡು ಲೋಕಲ್ ಸಮಿತಿ ಕಾರ್ಯದರ್ಶಿ ಹನೀಫ್ ಶಿರಿಯರಿಗೆ ಪಕ್ಷದ ಏರಿಯಾ ಸಮಿತಿ ವತಿಯಿಂದ ಮನೆ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಸಮಿತಿ ರೂಪೀಕರಣ ಸಭೆ ಕೈಕಂಬದ ಸಾಗರ್ ಸಭಾಂಗಣದಲ್ಲಿ ಜರಗಿತು. ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದರು. ಸಿಪಿಎಂ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಸಿ.ಎಚ್. ಕುಂಞಂಬು ಉದ್ಘಾಟಿಸಿದರು. ಏರಿಯಾ ಸಮಿತಿ ಸದಸ್ಯ ಚಂದ್ರ ನಾಯ್ಕ್ ಮಾನಿಪ್ಪಾಡಿ, ಹಾರೀಸ್ ಪೈವಳಿಕೆ, ಪ್ರಶಾಂತ ಕನಿಲ, ಕರುಣಾಕರ ಶೆಟ್ಟಿ, ಸಾದಿಕ್ ಚೆರುಗೋಳಿ, ನವೀನ, ರಾಮಚಂದ್ರ …

ರಸ್ತೆ ಬದಿಯ ಪೊದೆ ತೆರವಿಗೆ ಮೀಯಪದವು ಆಟೋರಿಕ್ಷಾ ಚಾಲಕರ ಸಂಘದಿಂದ ಮನವಿ

ಮೀಂಜ: ರಸ್ತೆ ಬದಿಗಳಲ್ಲಿನ ಪೊದೆಗಳು ಹಾಗೂ ಕಳೆ ಗಿಡಗಳನ್ನು ತೆರವುಗೊಳಿಸಬೇಕೆಂದು ಆಟೋರಿಕ್ಷಾ ಚಾಲಕರ ಸಂಘ ಮೀಯಪದವು ಇದರ ವತಿಯಿಂದ ಮೀಂಜ ಪಂಚಾಯತ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಮನವಿ ನೀಡಲಾಗಿದೆ. ರಸ್ತೆ ಬದಿಗಳಲ್ಲಿ ಪೊದೆ ಹಾಗೂ ಕಳೆ ಗಿಡಗಳು ಬೆಳೆದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಎದುರುಗಡೆ ಯಿಂದ ಬರುವ ವಾಹನಗಳು ಸರಿಯಾಗಿ ಕಾಣದೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಅಲ್ಲದೆ ರಸ್ತೆ ಬದಿಯಲ್ಲಿ ಪೊದೆ ತುಂಬಿ ಕೊಂಡ ಹಿನ್ನೆಲೆಯಲ್ಲಿ ಪಾದಚಾರಿಗಳಿಗೆ ನಡೆದು ಹೋಗಲು ಕೂಡಾ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ …

ಬಿದ್ದು ಸಿಕ್ಕಿದ ಪರ್ಸ್ ಮಾಲಕನಿಗೆ ಹಸ್ತಾಂತರ: ವ್ಯಾಪಾರಿಗಳು, ಸಾಮಾಜಿಕ ಕಾರ್ಯಕರ್ತನಿಗೆ ನಾಗರಿಕರ ಅಭಿನಂದನೆ

ಬದಿಯಡ್ಕ: ಬಿದ್ದು ಸಿಕ್ಕಿದ ಹಣ ಒಳಗೊಂಡ ಪರ್ಸನ್ನು ಅದರ ಮಾಲಕನಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ತೋರಿಸಿದ ಬದಿಯಡ್ಕದ ಇಬ್ಬರು ವ್ಯಾಪಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತ ನಾಗರಿಕರ ಅಭಿನಂದನೆಗೆ ಪಾತ್ರರಾಗಿದ್ದಾರೆ.ಬದಿಯಡ್ಕ ಬಸ್ ನಿಲ್ದಾಣ ಬಳಿಯ ವ್ಯಾಪಾರ ಸಂಸ್ಥೆಯಲ್ಲಿ ಹತ್ತು ದಿನಗಳ ಹಿಂದೆ ವ್ಯಾಪಾರಿಯಾದ ಸಿದ್ದೀಕ್ ಹಾಗು ಟಿ ಸ್ಟಾಲ್ ಮಾಲಕ ಅಶ್ರಫ್ ನೆಕ್ರಾಜೆ ಎಂಬಿವರಿಗೆ ಹಣ ಇದ್ದ ಲೇಡೀಸ್ ಪರ್ಸ್ ಬಿದ್ದು ಸಿಕ್ಕಿತ್ತು. ಈ ವಿಷಯವನ್ನು ಅವರು ಸಾಮಾಜಿಕ ಕಾರ್ಯಕರ್ತ ಹಾರಿಸ್ ಬಿ. ಡಿ. ಕೆ ಅವರಲ್ಲಿ ತಿಳಿಸಿದ್ದರು. ಹಾರಿಸ್ …

ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣೆಗಾಗಿ ಜಾಗೃತ ಹಿಂದೂ ಶಕ್ತಿ ಸಂಗಮ ನಾಳೆ

ಉಪ್ಪಳ : ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣೆ ಗಾಗಿ ಕಳೆದ ಹಲವು ದಿನಗಳಿಂದ ಸ್ಥಳದಲ್ಲಿ ನಿರಂ ತರ ಭಜನೆ, ಯಾಗ, ನಾಮ ಜಪ ಮೊದಲಾದ ಧಾರ್ಮಿಕ ಕಾರ್ಯ ಕ್ರಮಗಳು ನಡೆಯುತ್ತಿದೆ. ಅಲ್ಲದೆ ಮಂದಿರದ ಸಂರಕ್ಷಣೆಗಾಗಿ ಜೋಡು ಕಲ್ಲು ಚಲೋ ಜಾಗೃತಿ ಹಿಂದೂ ಶಕ್ತಿ ಸಂಗಮ ನಾಳೆ ಸಂಜೆ ೩ಗಂಟೆಗೆ ಜೋಡುಕಲ್ಲು ಜಂಕ್ಷನ್ ನಲ್ಲಿ ನಡೆಯಲಿದೆ. ಈಗಾಗಲೇ ಮಂ ದಿರಕ್ಕೆ ಕೊಂಡೆವೂರು ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮ …

ಬದಿಯಡ್ಕದಲ್ಲಿ ಇಂದಿರಾಗಾಂಧಿ ಸಂಸ್ಮರಣೆ ಕಾರ್ಯಕ್ರಮ

ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ  ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಸಂಸ್ಮರಣೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸ್ ನೇತಾರ ಚಂದ್ರಹಾಸ ರೈಯವರು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಉದ್ಘಾಟಿಸಿದರು.  ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ನೇತಾರರಾದ ಗಂಗಾಧರ ಗೋಳಿಯಡ್ಕ, ಜಗನ್ನಾಥ ರೈ,  ರಾಮ ಪಟ್ಟಾಜೆ,  ಶ್ರೀನಾಥ್ ಬದಿಯಡ್ಕ, ಕೃಷ್ಣದಾಸ್ ಡಿ, ಚಂದ್ರಹಾಸನ್ ಮಾಸ್ತರ್, ಲೀಲಾವತಿ ಪಟ್ಟಾಜೆ, ನಾರಾಯಣ ಭಂಡಾರಿ, ರಾಮ ಗೋಳಿಯಡ್ಕ, ಮಹಮ್ಮದ್ ಪಯ್ಯಲಡ್ಕ, ಮಂಜುನಾಥ, ನಿಜೀಶ್ ಪಟ್ಟಾಜೆ, …