ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ: 142 ಶಾಲೆಗಳಿಂದಾಗಿ 5೦೦೦ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗಿ
ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಈ ತಿಂಗಳ 5, 11,12,13ರಂದು ಮೀಯಪದವು ಶಾಲೆಯಲ್ಲಿ ನಡೆಯಲಿದೆಯೆಂದು ಸಂಘಟಕ ಸಮಿತಿ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಎಸ್.ವಿ.ವಿ.ಎಚ್‌ಎಸ್‌ಎಸ್, ವಿಎಯುಪಿಎಸ್ ಮೀಯಪದವು ಎಂಬಿ ವಿದ್ಯಾಲಯಗಳ ಜಂಟಿ ಅತಿಥೇಯತ್ವದಲ್ಲಿ ೬೫ನೇ ಉಪಜಿಲ್ಲಾ ಶಾಲಾ ಕಲೋತ್ಸವ ನಡೆಯಲಿದೆ. ಉಪಜಿಲ್ಲೆಯ 142 ಶಾಲೆಗಳಿಂದ ೫೦೦೦ದಷ್ಟು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವರು. ೫ರಂದು ವೇದಿಕೇತರ ಸ್ಪರ್ಧೆ, 11ರಿಂದ 13ರ ವರೆಗೆ ವೇದಿಕೆ ಸ್ಪರ್ಧೆಗಳು ನಡೆಯಲಿದೆ. ೫ರಂದು ಬೆಳಿಗ್ಗೆ 9 ಗಂಟೆಗೆ ಎಸ್‌ವಿವಿಎಚ್‌ಎಸ್‌ಎಸ್ ಮೆನೇಜರ್ ಡಾ. …