ಬದಿಯಡ್ಕ: ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನಶೀಲ ಪ್ರತಿಭೆಗಳನ್ನು ಹೊರ ಹಾಕಲು ಶಾಲಾ ಕಲೋತ್ಸವಗಳು ಅತ್ಯುತ್ತಮ ವೇದಿಕೆ ಎಂದು ಶಾಸಕ ಕೆ. ನೀಲಕಂಠನ್ ಅಭಿಪ್ರಾಯಪಟ್ಟರು. ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗುತ್ತಿರುವ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಕ ಗಳಿಕೆಯ ಶಿಕ್ಷಣದೊಂದಿಗೆ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಯ ಸರ್ವಾಂಗೀಣ ವಿಕಾಸಕ್ಕೆ ಅತ್ಯಾವಶ್ಯಕ ಎಂದು ಅವರು ನುಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದರು.
ಸಂಘಟಕ ಸಮಿತಿ ಅಧ್ಯಕ್ಷ, ಬದಿಯಡ್ಕ ಪಂ. ಅಧ್ಯಕ್ಷ ಶಂಕರ ಡಿ. ಸ್ವಾಗತಿಸಿದರು. ಪ್ರಾಂಶುಪಾಲ ಶ್ರೀಕೃಷ್ಣ ಎಂ. ಪ್ರಸ್ತಾಪಿಸಿದರು. ಬ್ಲೋಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲ ಕುಂಞಿ ಚೆರ್ಕಳ, ಪುತ್ತಿಗೆ ಪಂ. ಅಧ್ಯಕ್ಷೆ ಫಿದಾ ಊಜಂಪದವು, ಬದಿಯಡ್ಕ ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಜಿ.ಪಂ. ಸದಸ್ಯ ಸೋಮಶೇಖರ ಜೆ.ಎಸ್, ಪಿಟಿಎ ಅಧ್ಯಕ್ಷ ಹಮೀದ್ ಕೆಡೆಂಜಿ, ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಬ್ಲೋಕ್ ಪಂ. ಸದಸ್ಯ ಖಾದರ್ ಮಾನ್ಯ, ಸಂಘಟಕ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಬದಿಯಡ್ಕ ಪಂ. ಸದಸ್ಯರಾದ ಲೀಲಾವತಿ, ಉಷಾ ಪಳ್ಳತ್ತಡ್ಕ, ಫಾತಿಮತ್ ಫೌಸಿಯಾ, ಮಧುಸೂದನ ಕಂಗಿಲ, ಶಾಹಿನಾ ಅನ್ವರ್, ಸುಬೈದ, ಪ್ರಜ್ಞಾ, ಉಪಜಿಲ್ಲಾ ವಿದ್ಯಾಧಿಕಾರಿ ಅಶೋಕ ಎಂ, ಮುಖ್ಯೋಪಾಧ್ಯಾಯಿನಿ ಶಾಹಿದಾ ಬೀವಿ, ರಮೇಶ್ ಕುಂಡ್ಯಪ್ಪಾಡಿ, ಜಯದೇವ ಖಂಡಿಗೆ, ಆನಂದ ಕೆ. ಮವ್ವಾರು, ಶಂಕರ ಸಾರಡ್ಕ, ಸುರೇಂದ್ರ ಮಾನ್ಯ, ಶರೀಫ್ ಪಾಲೆಕ್ಕಾರ್, ವಿವಿಧ ಪಕ್ಷಗಳ ಪ್ರತಿನಿಧಿಗಳಾದ ಪಿ.ಜಿ. ಚಂದ್ರಹಾಸ ರೈ, ಅನ್ವರ್ ಓಝೋನ್, ಶ್ರೀಕಾಂತ್ ಕಾಡಮನೆ, ಉದ್ಯಮಿ ನಿತ್ಯಾನಂದ ಶೆಣೈ, ಇ. ರಾಮಕೃಷ್ಣನ್ ಉಪಸ್ಥಿತರಿದ್ದರು. ವಿ.ಇ. ಉಣ್ಣಿಕೃಷ್ಣನ್ ವಂದಿಸಿದರು. ವಿಜಯನ್ ಮಾಸ್ತರ್, ನಾರಾಯಣ ಆಸ್ರ ನಿರೂಪಿಸಿದರು. ರಾಜೇಶ್ ಮಾಸ್ತರ್, ನಿರಂಜನ ರೈ ಪೆರಡಾಲ ಸಹಕರಿಸಿದರು.
13 ವೇದಿಕೆಗಳಲ್ಲಿ ವಿದ್ಯಾರ್ಥಿಗಳ ಕಲಾ ಸಂಭ್ರಮ
ಉಪಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಒಟ್ಟು 13 ವೇದಿಕೆಗಳಲ್ಲಿ ವಿಭಿನ್ನ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕಲಾ ಹಾಗೂ ಶೈಕ್ಷಣಿಕ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ವೇಳೆ ಮಳೆರಾಯನ ಆಗಮನದಿಂದ ಪರಿಸರದಲ್ಲಿ ಉಲ್ಲಾಸದ ವಾತಾವರಣ ಕಂಡು ಬಂತು. ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ಉಪಜಿಲ್ಲೆಯ ೯೪ ಶಾಲೆಗಳಿಂದ ೧೮೦೦ ಮಂದಿ ವಿದ್ಯಾರ್ಥಿಗಳು ಮೊದಲ ದಿನದಲ್ಲಿ ೧೩ ವೇದಿಕೆಗಳಲ್ಲಿ ಪ್ರದರ್ಶನ ನೀಡಿದರು.







