ಅಂಗಡಿಗೆ ತೆರಳುತ್ತಿದ್ದ 51ರ ಹರೆಯದ ಮಹಿಳೆಯ ಮಾನಭಂಗ: 45ರ ಹರೆಯದ ಯುವಕನ ವಿರುದ್ಧ ಕೇಸು

ಕಾಸರಗೋಡು: ಅಂಗಡಿಗೆ ತೆರಳುತ್ತಿದ್ದ ೫೧ರ ಹರೆಯದ ಮಹಿಳೆಯನ್ನು ಬಲವಂತವಾಗಿ ಹಿಡಿದುಕೊಂಡು ಹೋಗಿ ಮಾನಭಂಗಗೈದಿರುವುದಾಗಿ ದೂರಲಾಗಿದೆ. ಘಟನೆಯಲ್ಲಿ ಮಜೀದ್ (45) ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಮಾನಭಂಗಕ್ಕೆ ಕೇಸು ದಾಖಲಿಸಿದ್ದಾರೆ. ಆದಿತ್ಯವಾರ ರಾತ್ರಿ 8 ಗಂಟೆಗೆ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಥಳವೊಂದರಲ್ಲಿ ಪ್ರಕರಣಕ್ಕೆ ಆಸ್ಪದವಾದ ಘಟನೆ ನಡೆದಿದೆ. ಅಂಗಡಿಗೆ ಒಂಟಿಯಾಗಿ ಮಹಿಳೆ ನಡೆದುಹೋಗುತ್ತಿದ್ದರು. ಈ ಮಧ್ಯೆ ಸ್ಥಳಕ್ಕೆ ತಲುಪಿದ ಮಜೀದ್ ಈಕೆಯನ್ನು ಬಲವಂತವಾಗಿ ಹಿಡಿದುಕೊಂಡು ಹೋಗಿ ಮಾನಭಂಗಗೈದಿರು ವುದಾಗಿ ದೂರಲಾಗಿದೆ. ಆರೋಪಿ ಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ …

ಹೈವೇ ಪಟ್ರೋಲಿಂಗ್ ವಾಹನ ಹಿಂಭಾಗಕ್ಕೆ ಕಾರು ಢಿಕ್ಕಿ: ಪೊಲೀಸರ ಸಹಿತ 5 ಮಂದಿಗೆ ಗಾಯ

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸುತ್ತಿದ್ದ ಪೊಲೀಸ್ ಇಲಾಖೆಯ ಹೈವೇ ಪಟ್ರೋಲಿಂಗ್ ವಾಹನದ ಹಿಂಭಾಗಕ್ಕೆ  ಅಪರಿಮಿತ ವೇಗದಲ್ಲಿ ಬಂದ ಆಂಧ್ರಪ್ರದೇಶ ನೋಂದಾಯಿತ ಕಾರು ಢಿಕ್ಕಿ ಹೊಡೆದು ನಾಲ್ವರು ಪೊಲೀಸರು ಸಣ್ಣ ಪುಟ್ಟ ಗಾಯಗೊಂಡು ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಕೂಡಾ ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಇಂದು ಮುಂಜಾನೆ 1.30ರ ವೇಳೆ ರಾಷ್ಟ್ರೀಯ ಹೆದ್ದಾರಿ ಶಿರಿಯಕುನ್ನು ಎಂಬಲ್ಲಿ ಅಪಘಾತವುಂಟಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್‌ನ ಪಟ್ರೋಲಿಂಗ್ ವಾಹನ ತಲಪಾಡಿಯಿಂದ ಕಾಸರಗೋಡಿಗೆ ಬರುತ್ತಿದ್ದಾಗ ಮಂಗಳೂರು ಭಾಗದಿಂದ ಕುಂಬಳೆ ಭಾಗಕ್ಕೆ ಬರುತ್ತಿದ್ದ …

ಬಾಯಾರು ಗಾಳಿಯಡ್ಕದ ಮುಹಮ್ಮದ್ ಆಸಿಫ್‌ರ ನಿಗೂಢ ಸಾವು: ಪ್ರತ್ಯೇಕ ಕ್ರೈಂಬ್ರಾಂಚ್ ತಂಡ ರೂಪೀಕರಿಸಿ ತನಿಖೆಗೆ ಆದೇಶ ನೀಡಿದ ಗೃಹ ಸಚಿವ

ಪೈವಳಿಕೆ: ಪೈವಳಿಕೆ ಗಾಳಿಯಡ್ಕದ ಮುಹಮ್ಮದ್ ಆಸಿಫ್ (25)ರ  ಮೃತದೇಹ 2025 ಜನವರಿ 15ರಂದು ಮುಂಜಾನೆ ಪೈವಳಿಕೆ ಕಾಯರ್‌ಕಟ್ಟೆ ರಸ್ತೆ ಬದಿ ಟಿಪ್ಪರ್ ಲಾರಿಯಲ್ಲಿ   ಪತ್ತೆಯಾದ ಘಟನೆ ಕುರಿತು ಸಮಗ್ರ ತನಿಖೆ ನಡೆಸು ವಂತೆ ಗೃಹ ಸಚಿವ ರಮೇಶ್ ಚೆನ್ನಿತ್ತಲ ಕಣ್ಣೂರು ಕ್ರೈಂ ಬ್ರಾಂಚ್ ಎಸ್‌ಪಿಗೆ ನಿರ್ದೇಶಿಸಿದ್ದಾರೆ. ಇದಕ್ಕಾಗಿ ಎಸ್‌ಪಿ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ವನ್ನು ನೇಮಿಸಿದ್ದು ಈ  ತಂಡ ನಿನ್ನೆ ಪೈವಳಿಕೆ ದೇವಕಾನ ಬಳಿಯ ಮುಹ ಮ್ಮದ್  ಆಸಿಫ್‌ರ ಮನೆಗೆ ತಲುಪಿ ಮನೆಯವರಿಂದ ಹೇಳಿಕೆ, ಅವರ …

ಎದೆಹಾಲು ಗಂಟಲಲ್ಲಿ ಸಿಲುಕಿ 42 ದಿನ ಮಗು ಮೃತ್ಯು

ಕಾಸರಗೋಡು: ಎದೆ ಹಾಲು ಗಂಟಲಿನಲ್ಲಿ ಸಿಲುಕಿಕೊಂಡು 42 ದಿನಗಳ ಹೆಣ್ಣು ಮಗು ಸಾವನ್ನಪ್ಪಿದೆ. ಬೇಕಲ ಕುನ್ನಿಲ್‌ನ ಖಿಲ್ರಿಯಾ ನಗರದ ಕೆ.ಎ. ಮುರ್ತಾಜಾ ಅವರ ಪುತ್ರಿ ಮೃತಪಟ್ಟ ಮಗು. ನಿನ್ನೆ ಬೆಳಿಗ್ಗೆ ಚಲನ ರಹಿತವಾಗಿ ಕಂಡುಬAದಿದ್ದು, ಕೋಟಿ ಕುಳಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ವೈದ್ಯರು ನಡೆಸಿದ ಪರೀ ಕ್ಷೆಯಲ್ಲಿ ಮಗು ಮೃತಪಟ್ಟಿದೆ ಎಂದು ದೃಢಪಡಿಸ ಲಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ಎದೆ ಹಾಲು ಗಂಟಲಿ ನಲ್ಲಿ ಸಿಲುಕಿಕೊಂಡಿದ್ದರಿAದ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಬೇಕಲ ಪೊಲೀಸರು ಅಸಹಜ ಸಾವು …

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಬೈಕ್ ಢಿಕ್ಕಿ ಹೊಡೆದು ಇಬ್ಬರು ಯುವಕರ ದಾರುಣ ಸಾವು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ರಾತ್ರಿ ನಡೆದಿದೆ. ನೀಲೇಶ್ವರ ಪಡಿಞ್ಞಾಟಂ ಕೊಳವಲ್ ನಿವಾಸಿಗಳಾದ ಕಲ್ಲಾಳಿ ವೀಟಿಲ್ ಮನೋಜ್ ಕುಮಾರ್ ಎಂಬವರ ಪುತ್ರ ಅನುರಾಗ್ ಮನೋಜ್ (24) ಪುಳಿಚ್ಚೆರಂ ವೀಟಿಲ್ ವೇಣು ಗೋಪಾಲ್ ಎಂಬವರ ಪುತ್ರ ಆನಂದ ಕೃಷ್ಣನ್ (24) ಎಂಬವರು ಸಾವನ್ನಪ್ಪಿದ ದುರ್ದೈವಿಗಳು. ಇವರಿಬ್ಬರು ಹೊಸದುರ್ಗ ತೆರುವತ್ ಅರೆಯಿಲ್ ಭಗವತಿ ಕ್ಷೇತ್ರದಲ್ಲಿ ನಡೆಯುತ್ತಿರುವ ದೈವ  ಕೋಲ ಉತ್ಸವದಲ್ಲಿ ಭಾಗವಹಿಸಲೆಂದು ಬೈಕ್‌ನಲ್ಲಿ ನಿನ್ನೆ …

ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಹಣ ನೀಡದೆ ವಂಚಿಸಿದ ಬಗ್ಗೆ ದೂರು: ವೈದ್ಯರು ಸೇರಿ 5 ಮಂದಿ ವಿರುದ್ಧ ಪ್ರಕರಣ ದಾಖಲು

ಕುಂಬಳೆ: ವೈದ್ಯಕೀಯ ಸಾಮಗ್ರಿ ಗಳನ್ನು ಖರೀದಿಸಿದ ವತಿಯಿಂದ ನೀಡಬೇಕಾಗಿದ್ದ 39980.50 ರೂ. ನೀಡದೆ ವಂಚನೆಗೈದಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ನ್ಯಾಯಾಲಯ ನಿರ್ದೇಶ ಪ್ರಕಾರ ನಾಲ್ವರು ವೈದ್ಯರು ಸೇರಿ ಐದು ಮಂದಿ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಣೂರು ತಲಾಪ್ ಚಿನ್ಮಯ ಬಾಲಭವನದ ಎದುರುಭಾಗದ ರಿನ್ ಮಾರ್ಕೆಟಿಂಗ್ ಆಂಡ್ ಸರ್ವೀಸ್ ಎಂಬ ಸಂಸ್ಥೆಯ ಮಾಲಕ  ವೆಟ್ಟಿಯಿನ್ ಗೋಕುಲ್‌ರಾಜ್ ಎಂಬವರು ಈ ಬಗ್ಗೆ ನ್ಯಾಯಾಲಯಕ್ಕೆ ದೂರು ನೀಡಿದ್ದು, ಅದರಂತೆ ನ್ಯಾಯಾಲಯದ ನಿರ್ದೇಶ ಪ್ರಕಾರ ಕಾಸರಗೋಡು ಪಿಲಿಕುಂಜೆ ನಿವಾಸಿಗಳಾದ ಡಾ. …

ಕೊಳವೆಬಾವಿ, ಕೆರೆಗಳಿರುವ ಸ್ಥಳದಲ್ಲಿ ಮತ್ತೆ ಕೊಳವೆಬಾವಿ ನಿರ್ಮಾಣ

ಬೆಳ್ಳೂರು:  ಅಗತ್ಯದಷ್ಟು  ನೀರು ಲಭಿಸುವ ಕೊಳವೆಬಾವಿ, ಕೆರೆ ಮೊದಲಾದವುಗಳಿರುವ ಸ್ಥಳದಲ್ಲಿ ಇದೀಗ ಮತ್ತೆ ಮೂರು ಕೊಳವೆಬಾ ವಿಗಳನ್ನು ನಿರ್ಮಿಸಿದ ಬಗ್ಗೆ ದೂರುಂ ಟಾಗಿದೆ. ಬೆಳ್ಳೂರು ಪಂಚಾಯತ್ ೨ನೇ ವಾರ್ಡ್‌ನ ಬಜ ಎಂಬಲ್ಲಿ ಮತ್ತೆ ಕೊಳವೆಬಾವಿ ನಿರ್ಮಿಸುವ ಮೂಲಕ ಭೂಗರ್ಭ ಜಲದ ಅನಿಯಂತ್ರಿತ ಶೋಷಣೆ ನಡೆದಿರುವುದಾಗಿ ನಾಗರಿಕರು ದೂರುತ್ತಿದ್ದಾರೆ. ಕರ್ನಾಟಕನಿವಾಸಿಯಾದ ಓರ್ವ ಇಲ್ಲಿ ೧೨ ಎಕ್ರೆ ಸ್ಥಳ ಖರೀದಿ ಸಿದ್ದನು. ಆ ಸ್ಥಳದಲ್ಲಿ  ಧಾರಾಳ ನೀರು ಲಭಿಸುವ ಕೊಳವೆಬಾವಿ, ಕೆರೆ ಮೊದ ಲಾದ ವುಗಳು ಇವೆ.  ಈ ಸ್ಥಳ …

ಸರೋಳಿಮೂಲೆಯಲ್ಲಿ ಸಂಚಾರ ನಿಷೇಧ

ಮುಳ್ಳೇರಿಯ: ಕಿನ್ನಿಂಗಾರು- ಸ್ವರ್ಗ ರಸ್ತೆಯ ಸರಳಿಮೂಲೆ ಎಂಬಲ್ಲಿ ಮೋರಿ ಸಂಕ ನಿರ್ಮಾಣ ನಡೆಯುವ ಹಿನ್ನೆಲೆ ಯಲ್ಲಿ ನಾಳೆಯಿಂದ ಎರಡು ತಿಂಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿಷೇಧಿ ಸಲಾಗಿದೆ ಎಂದು ಅಸಿಸ್ಟೆಂಟ್ ಎಕ್ಸಿ ಕ್ಯೂಟ್ ಇಂಜಿನಿಯರ್ ತಿಳಿಸಿದ್ದಾರೆ. ಪೆರ್ಲದಿಂದ  ಸ್ವರ್ಗ ಮೂಲಕ ಕಿನ್ನಿಂಗಾ ರಿಗೆ ತೆರಳುವ ವಾಹನಗಳು ಸರೋಳಿಮೂಲೆಯಿಂದ ತಿರುಗಿ ಈಂದುಮೂಲೆ ಮೂಲಕ ಕಿನ್ನಿಂಗಾರು ರೇಶನ್ ಶಾಪ್ ಜಂಕ್ಷನ್‌ಗೆ ಹಾಗೂ ಕಿನ್ನಿಂಗಾರಿನಿಂದ ಸರೋಳಿಮೂಲೆ ಸೇತುವೆ ಮೂಲಕ ಸ್ವರ್ಗಕ್ಕೆ ತೆರಳುವ ವಾಹನಗಳು ಕಿನ್ನಿಂಗಾರ್ ರೇಶನ್ ಶಾಪ್ ಬಳಿಯಿಂದ ಸ್ವರ್ಗ-ಪೆರ್ಲ …

ಇಂದಿನಿಂದ ಆರಂಭಗೊಳ್ಳಬೇಕಾಗಿದ್ದ ಖಾಸಗಿ ಮುಷ್ಕರ ಹಿಂತೆಗೆತ

ಕಾಸರಗೋಡು: ಇಂದಿನಿಂದ ನಡೆಸಲುದ್ದೇಶಿಸಿದ್ದ ಖಾಸಗಿ ಬಸ್ ಮುಷ್ಕರವನ್ನು ಮಾಲಕರು ಹಿಂತೆಗೆದಿದ್ದಾರೆ. ಸಾರಿಗೆ ಸಚಿವ ಸಿ.ಪಿ. ಜೋನ್‌ರೊಂದಿಗೆ ನಡೆಸಿದ ನಿರ್ಣಾಯಕ ಚರ್ಚೆಯ ಹಿನ್ನೆಲೆಯಲ್ಲ್ಲಿ ಮುಷ್ಕರ ಹಿಂತೆಗೆಯಲು ತೀರ್ಮಾನಿಸಲಾಗಿದೆ. ಬೇಡಿಕೆಗಳನ್ನು ಪರಿಗಣಿಸುವ ಭರವಸೆ ಸಚಿವರು ನೀಡಿದ್ದಾರೆ. ಖಾಸಗಿ ಬಸ್‌ಗಳನ್ನು ಸರಕಾರ ಲೀಸ್‌ಗೆ ಪಡೆದುಕೊಂಡು ಬಸ್‌ಗಳ ಸಮಯ ಕ್ರಮವನ್ನು ಆಲೋಚಿತವಾಗಿ ಪರಿಷ್ಕರಿಸುವುದು ಸಹಿತದ ಬೇಡಿಕೆಗಳನ್ನು ಅಂಗೀಕರಿಸಲಾಗಿದೆ. ಇದೇ ವೇಳೆ ಬಸ್ ಟಿಕೆಟ್ ದರ ಹೆಚ್ಚಿಸುವ ವಿಷಯದಲ್ಲಿ ಹಾಗೂ ರಿಯಾಯಿತಿ ದರ ಹೆಚ್ಚಿಸುವ ವಿಷಯದಲ್ಲಿ ತೀರ್ಮಾನವಾಗಿಲ್ಲ.

ಜೋಡುಕಲ್ಲು ಗಣೇಶ ಮಂದಿರ ಪರಿಸರ ಮುಂದುವರಿಯುತ್ತಿರುವ ಪ್ರತಿಭಟನೆ: ನಿನ್ನೆ ಸ್ವಾಮೀಜಿದ್ವಯರ ಭೇಟಿ

ಉಪ್ಪಳ: ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣೆಗಾಗಿ ಕಳೆದ ಹಲವಾರು ದಿನಗಳಿಂದ ನಿರಂತರ ಭಜನೆ, ಯಾಗ, ಧಾರ್ಮಿಕ ಕಾರ್ಯಕ್ರಮಗಳು, ಯತೀವರ್ಯರ ಭೇಟಿ ಮೊದಲಾದ ಕಾರ್ಯ ಕ್ರಮಗಳು ಮುಂದುವರಿಯುತ್ತಿದೆ. ನಿನ್ನೆ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಶಿವಗಿರಿ ಮಠ ಮಡ್ಯಾರು ಮತ್ತು ಶ್ರೀ ಮಹಾಬಲೇಶ್ವರ ಸರಸ್ವತಿ ಶ್ರೀ ಚಾಮುಂಡೇಶ್ವರೀ ಕ್ಷೇತ್ರ ಕಣಿಯೂರು ಕನ್ಯಾನ ಇವರು ಭೇಟಿ ನೀಡಿ ಆಶೀರ್ವಚನ ನೀಡಿದರು. ಸ್ಥಳಕ್ಕೆ ಹಗಲು, ರಾತ್ರಿ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಇಂದು ರಾತ್ರಿ ೭ರಿಂದ ವಿದುಷಿ ಮಂಜುಳಾ. ಜಿ ರಾವ್ ಇರಾ …