ವಂದೇಮಾತರಂಗೆ ಅವಮಾನ ದೂರು ಸಲ್ಲಿಕೆ- ಎಂ.ಎಲ್. ಅಶ್ವಿನಿ
ಕಾಸರಗೋಡು: ರಾಷ್ಟ್ರಗೀತೆಯಾದ ವಂದೇ ಮಾತರಂಗೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿ ಗಳ ವಿರುದ್ಧ ವಿವಿಧ ಅಧಿಕಾರಿಗಳಿಗೆ ದೂರು ನೀಡಲಾಗುವುದೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ವಂದೇ ಮಾತರಂಗೂ ರಾಷ್ಟ್ರಗೀತೆಗೆ ಸಮಾನವಾದ ಗೌರವ ನೀಡಬೇಕು ಎಂದು ಇತ್ತೀಚೆಗೆ ತಿದ್ದುಪಡಿ ನಡೆಸಿದ ಕಾಯ್ದೆಯು ಸ್ಪಷ್ಟಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಡೆಸಿರುವುದು ಗಂಭೀರ ಕರ್ತವ್ಯಲೋಪವಾಗಿದೆ ಎಂದು ಅಶ್ವಿನಿ ಆರೋಪಿಸಿದ್ದಾರೆ. ಆರೋಗ್ಯ ಸಚಿವ ಕೆ. ಮುರಳೀಧರನ್ ದೇವಸ್ವಂ ಇಲಾಖೆಯ ಉಸ್ತುವಾರಿಯನ್ನು ವಹಿಸಿದ ಸಚಿವರಾಗಿದ್ದಾರೆ. ವಂದೇ ಮಾತರಂನಲ್ಲಿ …