ಹುಚ್ಚುನಾಯಿ ರೋಗ ತಗಲಿರುವುದಾಗಿ ಶಂಕೆ: ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು

ಹೊಸದುರ್ಗ: ಹುಚ್ಚುನಾಯಿ ರೋಗ ತಗಲಿರುವುದಾಗಿ ಶಂಕಿಸುವ ವ್ಯಕ್ತಿ ಮೃತಪಟ್ಟರು. ಪುಲ್ಲೂರು ಉದಯನಗರ ನಿವಾಸಿ ಅಶೋಕನ್ (55) ಮೃತಪಟ್ಟವರು. ವಾಹನಗಳಿಗೆ ಪೈಂಟ್ ಕೊಡುವ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆದಿತ್ಯವಾರ ಅಶೋಕನ್‌ರಿಗೆ ರೋಗಲಕ್ಷಣ ಕಂಡುಬಂದಿತ್ತು. ಕಾಞಂಗಾಡ್ ಆಸ್ಪತ್ರೆಗೆ ತಲುಪಿಸಿ ಪ್ರಾಥಮಿಕ ಶುಶ್ರೂಷೆ ನೀಡಲಾಯಿತು. ಈ ವೇಳೆ ಹುಚ್ಚುನಾಯಿ ರೋಗ ಲಕ್ಷಣದ ಶಂಕೆ ಡಾಕ್ಟರ್‌ಗೆ ಮೂಡಿಬಂದಿತ್ತು. ಮೂರು ತಿಂಗಳ ಹಿಂದೆ ಚಿತ್ತಾರಿ ಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಶೋಕನ್‌ರಿಗೆ ಬೀದಿ ನಾಯಿ ಪರಚಿತ್ತೆಂಬ ಮಾಹಿತಿ ಇದೆ. ಪ್ರತಿರೋಧ ಚುಚ್ಚುಮದ್ದು ತೆಗೆದಿರಲಿಲ್ಲ ಎನ್ನಲಾಗಿದೆ. …

ವ್ಯಾಪಾರಿ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲು: ಬಸ್ ಚಾಲಕನ ವಿರುದ್ಧ ದೂರು

ಕುಂಬಳೆ: ಉಪ್ಪಳ ಬಸ್ ನಿಲ್ದಾಣದಲ್ಲಿ  ಬೇಕರಿ ಮಾಲಕನಾದ ಅಬ್ದುಲ್ಲ (58) ಎಂಬವರು ಹಲ್ಲೆಯಿಂದ ಗಾಯಗೊಂಡು  ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ದ್ದಾರೆ. ಕಾಸರಗೋಡು-ತಲಪ್ಪಾಡಿ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್ಸೊಂದರ ಚಾಲಕ ಇವರಿಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಗಾಯಗೊಂಡ ಅಬ್ದುಲ್ಲ ಈ ರೀತಿ ತಿಳಿಸಿದ್ದಾರೆ – ನಿನ್ನೆ ಸಂಜೆ  ಸ್ನೇಹಿತನೋರ್ವ ತನಗೆ ಕರೆಮಾಡಿ ಬಸ್‌ನಲ್ಲಿ ಪಾರ್ಸೆ ಲೊಂದು ಬರಲಿದ್ದು ಅದನ್ನು ತೆಗೆ ಯುವಂತೆ ತಿಳಿಸಿದ್ದನು. ಇದರಂತೆ 5 ಗಂಟೆಗೆ ಬಸ್ ಉಪ್ಪಳ ನಿಲ್ದಾಣಕ್ಕೆ ತಲುಪಿದಾಗ ಚಾಲಕನ …

ಕುಂಬಳೆ ಪಂ. ಮಾಜಿ ಅಧ್ಯಕ್ಷ ಬಶೀರ್ ಮುಹಮ್ಮದ್ ಕುಂಞಿ ನಿಧನ

ಕುಂಬಳೆ: ಕುಂಬಳೆ ಪಂಚಾಯತ್ ಮಾಜಿ ಅಧ್ಯಕ್ಷರ, ಹಿರಿಯ ಲೀಗ್ ನೇತಾರನಾದ ಮೊಗ್ರಾಲ್‌ನ ಬಶೀರ್ ಮುಹಮ್ಮದ್ ಕುಂಞಿ (89) ನಿಧನಹೊಂದಿದರು.  ವೃದ್ಧಾಪ್ಯ ಸಹಜ ಅಸೌಖ್ಯದ ಹಿನ್ನೆಲೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಮಂಜೇಶ್ವರ ಮಂಡಲದ ಹಿರಿಯ ಲೀಗ್ ನೇತಾರನಾಗಿದ್ದ ಇವರು ಜಿಲ್ಲಾ ಉಪಾಧ್ಯಕ್ಷರಾಗಿಯೂ ಕಾರ್ಯಾಚರಿಸಿದ್ದಾರೆ.  ವಿದ್ಯಾರ್ಥಿಯಾಗಿದ್ದಾಗಲೇ ಎಂ.ಎಸ್.ಎಫ್ ಮೂಲಕ ರಾಜಕೀಯ ರಂಗದಲ್ಲಿ ತೊಡಗಿಕೊಂ ಡಿದ್ದರು.ಮಂಜೇಶ್ವರ ಮಂಡಲದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.  ಕುಂಬಳೆ ಬದರ್ ಜುಮಾ ಮಸೀದಿಯ ಉಪಾಧ್ಯಕ್ಷರಾಗಿಯೂ ಕಾರ್ಯಾಚರಿಸಿದ್ದಾರೆ. ಹಿರಿಯ ವ್ಯಾಪಾರಿಯೂ, ಫುಟ್ಬಾಲ್, ಶೆಟಲ್‌ನ ರೆಫರಿಯೂ ಆಗಿದ್ದರು. ಮೃತರು …

ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದ ಕಾರಿನಲ್ಲಿ ತಂಬಾಕು ಉತ್ಪನ್ನ ಪತ್ತೆ: ಓರ್ವ ಸೆರೆ

ಕಾಸರಗೋಡು:  ಕಾರಿನಲ್ಲಿ ಸಾಗಿಸುತ್ತಿದ್ದ ಕೇರಳದಲ್ಲಿ ನಿಷೇಧ ಹೇರಲಾಗಿರುವ ತಂಬಾಕು ಉತ್ಪನ್ನಗಳನ್ನು ಕಾಸರಗೋಡು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮಧೂರು ಹಿದಾಯತ್ ನಗರ ಚೆಟ್ಟುಂಗುಳಿಯ ರಾಶೀದ್ (32) ಎಂಬಾತನನ್ನು ಪೊಲೀಸರು ಕಾರು ಸಹಿತ ಸೆರೆ ಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಗ್ರಾಲ್ ಪುತ್ತೂರು ಚೌಕಿ ಕುನ್ನಿಲ್‌ನಲ್ಲಿ ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ವಿ.ವಿ. ಸುರೇಶ್ ಕುಮಾರ್‌ರ ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ವೇಳೆ ಚೌಕಿಯಿಂದ ಕಂಬಾರಿನತ್ತ ಹೋಗುತ್ತಿದ್ದ ಕಾರು ಪೊಲೀಸರನ್ನು ಕಂಡಾಕ್ಷಣ ಅಲ್ಲಿಂದ ಹಿಂದಕ್ಕೆ …

ಅಪ್ರಾಪ್ತರಿಗೆ ಚಲಾಯಿಸಲು ವಾಹನ ನೀಡಿದ ಮೂವರ ವಿರುದ್ಧ ಪ್ರಕರಣ ದಾಖಲು

ಕುಂಬಳೆ: ಅಪ್ರಾಪ್ತರಿಗೆ ಚಲಾಯಿಸಲು ವಾಹನ ನೀಡಿದ ಮೂವರ ವಿರುದ್ದ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ.  ಬಂದ್ಯೋಡಿನಲ್ಲಿ ಕುಂಬಳೆ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆ ವೇಳೆ  ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್   ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರಂತೆ  ಬಾಲಕನಿಗೆ ಚಲಾಯಿಸಲು ಸ್ಕೂಟರ್ ನೀಡಿದ ಮಾಲಕ ಮೊಗ್ರಾಲ್ ನಿರೋಳಿ ನಿವಾಸಿ ಅಹಮ್ಮದ್ ಅಫಲ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದ.  ಇದೇ ರೀತಿ ಶಿರಿಯ ಕುನ್ನಿಲ್‌ನಲ್ಲೂ  ನಿನ್ನೆ ಬಾಲಕನೋರ್ವ   ಚಲಾಯಿಸುತ್ತಿದ್ದ    ಸ್ಕೂಟರ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅದರ ಮಾಲಕ ಇಚ್ಚಿಲಂಗೋಡು ಪಚ್ಚಂಬಳದ …

ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮನೆಯೊಳಗೆ ಯುವಕ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಾಸರಗೋಡು ಲೈಟ್‌ಹೌಸ್ ಕಡಪ್ಪುರ ಗಂಗಾನಗರ ವಾಣಿನಿಲಯ  ನಿವಾಸಿ ಈ ಹಿಂದೆ ಗಲ್ಫ್‌ನಲ್ಲಿ ದುಡಿಯುತ್ತಿದ್ದು, ನಂತರ ಊರಿಗೆ ಹಿಂತಿರುಗಿ ನೆಲ್ಲಿಕುಂಜೆಯಲ್ಲಿ ವೆಲ್ಡಿಂಗ್ ಕಾರ್ಮಿಕರಾಗಿ ದುಡಿಯುತ್ತಿದ್ದ ಕೆ.ವಿ. ವಿಕೇಷ್ (28) ಸಾವನ್ನಪ್ಪಿದ ಯುವಕ. ಇವರು ಮೊನ್ನೆ ರಾತ್ರಿ ಊಟ ಮಾಡಿ ನಿದ್ರಿಸಲೆಂದು ಮನೆಯ ಕೊಠಡಿಯೊಳಗೆ ಹೋಗಿದ್ದರು. ನಿನ್ನೆ ಬೆಳಿಗ್ಗೆ ತಡವಾದರೂ ಕೊಠಡಿಯಿಂದ ಹೊರ ಬಾರದೇ ಇರುವುದನ್ನು ಕಂಡ ಮನೆಯವರು ಬಾಗಿಲು ತೆರೆದು ನೋಡಿದಾಗ ವಿಕೇಷ್  ಕೊಠಡಿಯ …

ಜೋಡುಕಲ್ಲು ಶ್ರೀ ಗಣೇಶ ಮಂದಿರದಲ್ಲಿ ದೀಪಾವಳಿ ಆಚರಣೆ

ಉಪ್ಪಳ: ಜೋಡುಕಲ್ಲು ತಪೋವನ ಶ್ರೀ ಗಣೆಶ ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿ ನೇತೃತ್ವದಲ್ಲಿ ಗಣೇಶ ಮಂದಿರದ ಸಂರಕ್ಷಣೆಗಾಗಿ ಕಳೆದ 18 ದಿನಗಳಿಂದ ನಿರಂತರ ಭಜನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಯತಿವರ್ಯರ ಆಗಮನ, ಧಾರ್ಮಿಕ ಮುಖಂಡರ ಭೇಟಿ ನಡೆಯುತ್ತಿದೆ. ನಿನ್ನೆ ದೀಪಾವಳಿ ಕಾರ್ಯಕ್ರಮ ನಡೆಯಿತು. ರವೀಶ ತಂತ್ರಿ ಕುಂಟಾರು ದೀಪ ಪ್ರಜ್ವಲನೆಗೊಳಿಸಿ ಚಾಲನೆ ನೀಡಿದರು. ಗಣೇಶ ಮಂದಿರ ಸಂರಕ್ಷಣೆ ಕ್ರಿಯಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಇವರ ಉಪಸ್ಥಿತಿಯಲ್ಲಿ ಜಾಗೃತ ಹಿಂದೂ ಸಭೆ ನಡೆಯಿತು. ಧಾರ್ಮಿಕ ಮುಖಂಡರು, …

ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದಿಂದ ದೀಪಾವಳಿ ಆಚರಣೆ

ಕಾಸರಗೋಡು: ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋ ಕುಲದ ಆಶ್ರಯದಲ್ಲಿ ದೀಪಾವಳಿ ಆಚರಿಸಲಾಯಿತು. ದೇವಸ್ಥಾನ ಪರಿಸರದಲ್ಲಿ ಅಣತೆಯನ್ನು ಬೆಳಗಿಸಲಾಯಿತು. ಬಾಲಗೋಕುಲ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ ಉದ್ಘಾಟಿಸಿದರು. ನಗರಸಭಾ ಸದಸ್ಯೆ ದಿವ್ಯಾ ಸಂದೀಪ್ ಶುಭಕೋರಿದರು. ಮಕ್ಕಳು ಭಜನೆ ಹಾಡಿದರು. ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು. ಹಲವರು ಭಾಗವಹಿಸಿದರು.

ಎಸ್.ಎ ಅಬ್ದುಲ್ಲ  ನಿಧನ

ಕಾಸರಗೋಡು: ಮಾಜಿ ಅನಿವಾಸಿ, ಕೃಷಿಕನಾದ  ಸಿರಿಬಾಗಿಲು ಮುಳಿಕಂಡಂ ನಿವಾಸಿ ಎಸ್.ಎ ಅಬ್ದುಲ್ಲ (7೦) ನಿಧನಹೊಂದಿದರು. ಸಿರಿಬಾಗಿಲು ಜಮಾಅತ್ ಕಮಿಟಿ, ಸಿರಿಬಾಗಿಲು ಶಾಖೆ ಮುಸ್ಲಿಂ ಲೀಗ್ ಕಮಿಟಿ, ಭತ್ತಕೃಷಿ ಗದ್ದೆಬಯಲು ಸಮಿತಿ ಎಂಬಿವುಗಳ  ಪದಾಧಿಕಾರಿಯಾಗಿದ್ದರು. ಇವರ ಪತ್ನಿ ಸಫಿಯ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ  ಅರಫಾತ್, ಅರ್ಷಾದ್, ಅಶ್ಫರ್, ಅನ್ಫರ್, ಅಲ್‌ಅಮೀನ್, ಆದಿಲ, ಅಳಿಯ-ಸೊಸೆಯಂದಿರಾದ ಬಾಸಿತ್ ಪಟ್ಲ, ಫಾತಿಮ, ಖೈರುನ್ನಿಸ, ಸಹೋದರ-ಸಹೋದರಿಯರಾದ ಎಸ್.ಎ ಮೊಯ್ದು  ಎಸ್.ಎ. ಅಬ್ದುಲ್ ರಹ್ಮಾನ್ , ನಬೀಸ (ಕುನ್ನಿಲ್ ಮೊಗ್ರಾಲ್ ಪುತ್ತೂರು), ಮರಿಯಮ್ಮ …

ಪಾರ್ಲಿಮೆಂಟ್ ಚಲೋ ಮುಷ್ಕರ: ಸಿಐಟಿಯುನಿಂದ ವಾಹನ ಪ್ರಚಾರ ಜಾಥಾಕ್ಕೆ ಚಾಲನೆ

ಮಂಜೇಶ್ವರ: ಡಿಸೆಂಬರ್ 1,2ರಂದು ನಡೆಯುವ ಕಾರ್ಮಿಕ ವಿರೋಧಿ ನೀತಿಯ ವಿರುದ್ದ ಪಾರ್ಲಿ ಮೆಂಟ್ ಚಲೋ ಕಾರ್ಯಾಕ್ರಮ ದಂಗವಾಗಿ ಸಿ.ಐ.ಟಿ.ಯು ಜಿಲ್ಲಾ ವಾಹನ ಪ್ರಚಾರ ಜಾಥಾ ಹೊಸಂಗಡಿಯಲ್ಲಿ ನಿನ್ನೆ ಸಂಜೆ ನಡೆಯಿತು. ಸಿ.ಐ.ಟಿ.ಯು ರಾಜ್ಯ ಉಪಾಧ್ಯಕ್ಷ ಟಿ.ಕೆ ರಾಜನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಣಿ ಮೋಹನ್‌ರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಡಿ. ಕಮಲಾಕ್ಷರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿ.ಪಿ.ಪಿ ಮುಸ್ತಪ, ಶೋಭಾ.ಬಿ, ಪಿ.ಎ ಅಬ್ದುಲ್ ರಹಿಮಾನ್, ಇಬ್ರಾಹಿಂ ಪುತ್ತಿಗೆ, ಕರ್ಷಕ ರಾಜ್ಯ ಸಮಿತಿ ಸದಸ್ಯ ಕೆ.ಆರ್.ಜಯಾನಂದ ಉಪಸ್ಥಿತರಿದ್ದರು. …