ಆಲಪ್ಪುಳ: ಮದ್ಯದ ಅಮಲಿನಲ್ಲಿ ಯುವಕನೋರ್ವ ತನ್ನ ತಾಯಿಗೆ ಗಂಭೀರ ಹಲ್ಲೆ ನಡೆಸಿ ಕೊಲೆಗೈದ ಘಟನೆ ಅಂಬಲಪುಳದಲ್ಲಿ ನಡೆದಿದೆ. ಕುಂಞಿಪ್ಪಾಡಂ ಆಶಾರಿಪರಂಬಿಲ್ ನಿವಾಸಿ ಆನಿ ಎಂಬವರು ಕೊಲೆಗೈಯ್ಯಲ್ಪಟ್ಟ ಮಹಿಳೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಈಕೆಯ ಪುತ್ರ ಜೋನ್ಸನ್ ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಳೆದ ಆದಿತ್ಯವಾರ ಮದ್ಯದಮಲಿನಲ್ಲಿ ಮನೆಗೆ ತಲುಪಿದ ಜೋನ್ಸನ್ ತಾಯಿಗೆ ಹಲ್ಲೆಗೈದು ಗಾಯಗೊಳಿಸಿದ್ದನು. ತಡೆಯಲೆತ್ನಿಸಿದ ತಂದೆ ಜೋಯಿಗೂ ಹಲ್ಲೆಗೈ ಯ್ಯಲಾಗಿತ್ತು. ಹಲ್ಲೆಯಿಂದ ಗಂಭೀರಗಾಯ ಗೊಂಡ ಆನಿಯನ್ನು ವಂಡಾನಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅವರು ಮೃತಪಟ್ಟರು
