ಜಿಲ್ಲೆಯಲ್ಲಿ ಒಟ್ಟು 436 ಸೂಕ್ಷ್ಮ ಸಂವೇದಿ, 97 ಅತೀವ ಸೂಕ್ಷ್ಮ ಸಂವೇದಿ ಮತಗಟ್ಟೆಗಳು

436 sensitive and 97 highly sensitive polling stations in the district

ಕಾಸರಗೋಡು: ಕಾಸರಗೋಡು ಸೇರಿದಂತೆ ೭ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿಸೆಂಬರ್ 11ರಂದು ಮತದಾನ ನಡೆಯಲಿರುವಂತೆಯೇ ಅದಕ್ಕಿರುವ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಪೂರ್ತೀಕರಿಸಲಾಗಿದೆ. 5,24,022 ಪುರುಷ ಹಾಗೂ 5,88,156 ಮಹಿಳಾ ಮತದಾರರು, 12 ಮಂಗಳಮುಖಿ ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 11,12,190 ಮತದಾರರಿದ್ದಾರೆ. ಇದರಲ್ಲಿ 129 ಅನಿವಾಸಿ ಕೇರಳೀಯ ಮತದಾರರೂ ಒಳಗೊಂಡಿದ್ದಾರೆ.

ಮತದಾನಕ್ಕಾಗಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 11,12,190 ಮತಗಟ್ಟೆಗಳನ್ನು ಸಜ್ಜೀಕರಿಸಲಾಗಿದೆ. ಒಟ್ಟು 6584 ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಗಳಿಗಾಗಿ ನೇಮಿಸಲಾಗಿದೆ. ಇದರಲ್ಲಿ 3995 ಮಹಿಳಾ ಮತ್ತು ೨೫೮೯ ಪುರುಷ ಸಿಬಬಂದಿಗಳು ಒಳಗೊಂಡಿದ್ದಾರೆ. ಇನ್ನು ಮಹಿಳಾ ಸಿಬ್ಬಂದಿಗಳೂ  ಮಾತ್ರ  ಕರ್ತವ್ಯದಲ್ಲಿರುವ 179 ಮತಗಟ್ಟೆಗಳು ಜಿಲ್ಲೆಯಲ್ಲಿದೆ.

ಜಿಲ್ಲೆಂiiಲ್ಲಿ ಒಟ್ಟು ಮತಗಟ್ಟೆಗಳ ಪೈಕಿ 436 ಮತಗಟ್ಟೆಗಳನ್ನು ಘರ್ಷಣೆಗೆ ಸಾಧ್ಯತೆ ಇರುವ  ಸೂಕ್ಷ್ಮ ಸಂವೇದಿ ಹಾಗೂ 97 ಮತಗಟ್ಟೆಗಳನ್ನು ಅತೀವ ಸೂಕ್ಷ್ಮ ಸಂವೇದಿ ಮತಗಟ್ಟೆಗಳಾಗಿ ಗುರುತಿಸಲಾಗಿದೆ.ಇಂತಹ ಮತಗಟ್ಟೆಗಳಲ್ಲಿ ಅತೀ ಹೆಚ್ಚು ಭದ್ರತೆ ಏರ್ಪಡಿಸಲಾಗುವುದೆಂದು ಜಿಲ್ಲಾ ವರಿಷ್ಠ ಪೊಲೀಸ್  ಅಧಿಕಾರಿ ವಿಜಯ್ ಭರತ್ ರೆಡ್ಡಿ ತಿಳಿಸಿದ್ದಾರೆ.

ಚುನಾವಣಾ ಕರ್ತವ್ಯಕ್ಕಾಗಿ ಅಗತ್ಯದಷ್ಟು ಪೊಲೀಸರನ್ನು ನೇಮಿಸ ಲಾಗಿದೆ. ಇದರಲ್ಲಿ 13 ಡಿವೈಎಸ್ಪಿ ಗಳು, 29ಇನ್‌ಸ್ಪೆಕ್ಟರ್‌ಗಳು,184 ಎಸ್‌ಐ ಮತ್ತು ಎಎಸ್‌ಐಗಳು, 21೦೦ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳು ಮತ್ತು ಸಿವಿಲ್ ಪೊಲೀಸ್ ಆಫೀಸರ್‌ಗಳು ಒಳಗೊಂಡಿದ್ದಾರೆ. ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಾನೂನು ಮತ್ತು ಶಿಸ್ತು ಪಾಲನಾ ಗಸ್ತು ತಿರುಗುವಿಕೆ, ಗ್ರೂಪ್  ಗಸ್ತು ತಿರುಗುವಿಕೆ, ಪ್ರತೀ ಪೊಲೀಸ್ ಠಾಣೆಗಳಲ್ಲಿ ಮತ್ತು ಎಂಟು ಚುನಾವಣಾ ಉಪವಿಭಾಗಗಳಲ್ಲಿ ತಲಾ ಒಂದರಂತೆ ಸ್ಟ್ರೈಕಿಂಗ್ ಫೋರ್ಸ್‌ಗಳೂ ಕಾರ್ಯವೆಸಗಲಿದೆ. ಇದರ ಹೊರತಾಗಿ ಜಿಲ್ಲಾ ಮಟ್ಟದಲ್ಲೂ ಸ್ಟ್ರೈಕಿಂಗ್ ಫೋರ್ಸ್‌ಗಳನ್ನು ಸಿದ್ಧಪಡಿಸಿ ನಿಲ್ಲಿಸಲಾಗಿದೆ. ಘರ್ಷಣೆ ಉಂಟಾದಲ್ಲಿ ಐದು  ನಿಮಿಷದೊಳಗಾಗಿ ಪೊಲೀಸ್ ತಂಡ ಅಲ್ಲಿಗೆ ಆಗಮಿಸಿ ಅಗತ್ಯದ ಕ್ರಮ ಕೈಗೊಳ್ಳಲಿದೆ.  ಹೀಗೆ ಚುನಾವಣಾ ಕರ್ತವ್ಯಕ್ಕಾಗಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 2793 ಪೊಲೀಸರು ನಿಯೋಜಿಸಲಾಗಿದೆ.

ಇದರ ಹೊರತಾಗಿ ಕ್ಷಿಪ್ರ ಕಾರ್ಯಾರಣಾ ಪಡೆಯನ್ನು ಕರ್ತವ್ಯಕ್ಕಾಗಿ ನೇಮಿಸಲಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಪೊಲೀಸರು ತೀವ್ರ ನಿಗಾ ವಹಿಸತೊಡಗಿದ್ದಾರೆ. ಜಿಲ್ಲೆಯಲ್ಲಿ ಕೇರಳ-ಕರ್ನಾಟಕ ಗಡಿಯಲ್ಲಿ ಒಟ್ಟು 30 ಪ್ರವೇಶ ಮಾರ್ಗಗಳಿವೆ. ಇದರಲ್ಲಿ 18 ಪ್ರಧಾನ ರಸ್ತೆಗಳು, 12  ಕಿರು ರಸ್ತೆಗಳು ಒಳಗೊಂಡಿವೆ. ಈ ಎಲ್ಲಾ ರಸ್ತೆಗಳಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.

ಇನ್ನೊಂದೆಡೆ ಗಡಿಯಲ್ಲಿ ಕರ್ನಾಟಕ ಪೊಲೀಸರೂ ತೀವ್ರ ನಿಗಾ ಇರಿಸತೊಡಗಿದ್ದಾರೆ. ಚುನಾವಣೆ ಅಗತ್ಯಕ್ಕಾಗಿ  ಕಣ್ಣೂರು ರೇಂಜ್ ಡಿಐಜಿ ಜಿ.ಎಸ್. ಯತೀಶ್ಚಂದ್ರ, ವರಿಷ್ಠ ಪೊಲೀಸ್ ಅಧಿಕಾರಿ ವಿಜಯ್ ಭರತ್ ರೆಡ್ಡಿ, ಎಎಸ್‌ಪಿ ಡಾ.ಎಂ. ನಂದಗೋ ಪಾಲನ್  ಭದ್ರತಾ ವ್ಯವಸ್ಥೆಗಳ ಮೇಲ್ನೋಟ ವಹಿಸುತ್ತಿದ್ದಾರೆ.

RELATED NEWS

You cannot copy contents of this page