523 ಗ್ರಾಂ ಗಾಂಜಾ ಸಹಿತ ಇಬ್ಬರಸೆರೆ
ಕಾಸರಗೋಡು: ಕಾಞಂ ಗಾಡ್‌ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 523.96 ಗ್ರಾಂ ಗಾಂಜಾ
ವನ್ನು ವಶಪಡಿಸಲಾಗಿದೆ. ಮಾವುಂಗಾಲ್ ಕಲ್ಯಾಣ್ ರೋಡ್‌ನ ಪಿ. ಶ್ರೀಕಾಂತ್, ಎಂ. ಅಶ್ವಿನ್ ಎಂಬವರನ್ನು ಹೊಸ ದುರ್ಗ ಪೊಲೀಸರು ಸೆರೆಹಿಡಿ ದಿದ್ದಾರೆ. 50 ಪ್ಲಾಸ್ಟಿಕ್ ಕವರ್ ಗಳಲ್ಲಾಗಿ ಕೊಂಡೊಯ್ಯುತ್ತಿದ್ದ ಗಾಂಜಾವನ್ನು ಬಂಧಿತರ ಕೈಯಿಂದ ವಶಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಜ್ಯೂನಿಯರ್ ಎಸ್‌ಐ ಪಿ.ವಿ. ವರುಣ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಎಂ. ನಿಶಾದ್, ಚಾಲಕ ಶಬ್ಜು ಎಂಬಿವರಿದ್ದರು.