ಮಂಜೇಶ್ವರದಲ್ಲಿ 6ರ ಹರೆಯದ ಬಾಲಕ ಸಮುದ್ರದಲ್ಲಿ ಮುಳುಗಿ ಮೃತ್ಯು

ಮಂಜೇಶ್ವರ: ಮಂಜೇಶ್ವರ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಆರರ ಹರೆಯದ ಬಾಲಕ ಕಡಲಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದೆ. ಕರ್ನಾಟಕ ನಿವಾಸಿಯಾದ ಫೈಸಾನ್ ಮೃತಪಟ್ಟ ಬಾಲಕ. ನಿನ್ನೆ ಸಂಜೆ 6 ಗಂಟೆಗೆ ಈ ಧಾರುಣ ಘಟನೆ ಸಂಭವಿಸಿದೆ. ಹೊಸಬೆಟ್ಟುವಿನ ಸಂಬಂಧಿಕರ ಮನೆಗೆ ಫೈಸಾನ್ ತಲುಪಿದ್ದನು.  ಇತರ ಮೂರು ಮಕ್ಕಳ ಜೊತೆ ಹೊಸಬೆಟ್ಟು ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಮಧ್ಯೆ ದುರಂತ ಉಂಟಾಗಿದೆ. ಮೂರು ಮಕ್ಕಳನ್ನು ದಡಕ್ಕೆ ತಲುಪಿಸಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಫೈಸಾನ್‌ನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.

RELATED NEWS

You cannot copy contents of this page