8.73 ಗ್ರಾಂ ಎಂಡಿಎಂಎ ಪತ್ತೆ: ಕಾರು ಸಹಿತ ಯುವಕ ಸೆರೆ

ಕಾಸರಗೋಡು: ನೆಕ್ರಾಜೆ ಗ್ರಾಮದ ನೆಲ್ಲಿಕಟ್ಟೆಯಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಾರೊಂದರಿಂದ 8.73 ಗ್ರಾಂ ಮಾದಕ ವಸ್ತುವಾದ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಈ ಸಂಬಂಧ ಕಾಸರಗೋಡು ಅಣಂಗೂರು ಟಿ.ವಿ. ಸ್ಟೇಷನ್ ರಸ್ತೆ ನಿವಾಸಿ ಅಹಮ್ಮದ್ ಕಬೀರ್ (25) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಆತ ಸಂಚರಿಸುತ್ತಿದ್ದ ಕಾರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಕಾಸರಗೋಡು ಡೆಪ್ಯುಟಿ ಎಕ್ಸೈಸ್ ಕಮಿಷನರ್ ಜಯರಾಜ್ ಪಿ.ಕೆ. ಯವರಿಗೆ ಲಭಿಸಿದ  ಗುಪ್ತ ಮಾಹಿ ತಿಯಂತೆ ಕಾಸರಗೋಡು ಅಬ ಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ಯುರ ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ರಾಜೀವನ್ ಎ.ವಿ. ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಬಾಬು ರಾಜೇಶ್, ಕಣ್ಣನ್ ಕುಂಞಿ, ಚಾಲಕ ಸಮೀದ್ ಕುಮಾರ್ ಎಂ.ವಿ. ಎಂಬವರನ್ನೊಳಗೊಂಡ ತಂಡ ಈ  ಕಾರ್ಯಾಚರಣೆ ನಡೆಸಿದೆ.

Leave a Reply

Your email address will not be published. Required fields are marked *

You cannot copy content of this page