ತಿರುವನಂತಪುರ: 8ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನೆಯ್ಯಾಟಿಂಗರ ನಾರಾಣಿ ನಿವಾಸಿ ಅನಂತು (13)ನನ್ನು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಕಾರಕೋಣಂ ಪಿಪಿಎಂ ಹೈಸ್ಕೂಲ್‌ನ ವಿದ್ಯಾರ್ಥಿಯಾಗಿದ್ದಾನೆ. ಮಾಹಿತಿ ತಿಳಿದು ಪೊಲೀಸರು ತಲುಪಿ ಮೃತದೇಹವನ್ನು ಅಲ್ಲಿನ ಮೆಡಿಕಲ್ ಕಾಲೇಜು ಶವಾಗಾರಕ್ಕೆ ಕೊಂಡೊಯ್ಯಲಾ ಯಿತು. ಆತ್ಮಹತ್ಯೆಗೆ ಕಾರಣ ಸ್ಪಷ್ಟವಿಲ್ಲ.






