85ನೇ ದಿನಕ್ಕೆ ಕಾಲಿಟ್ಟ ಅನಿರ್ಧಿಷ್ಟಾವಧಿ ಮುಷ್ಕರ: ಶಾಸಕರಿಂದ ಕಾಲ್ನಡೆ ಮೇಲ್ಸೇತುವೆ ಭರವಸೆ; ಸಮಿತಿಗೆ ಅತೃಪ್ತಿ

ಮಂಜೇಶ್ವರ : ಕಳೆದ ೮೫ ದಿವಸ ಗಳಿಂದ ಮಂಜೇಶ್ವರ ರಾಗಂ ಜಂಕ್ಷನಿ ನಲ್ಲಿ ಅಂಡರ್ ಪಾಸ್ ಬೇಡಿಕೆಯ ನ್ನಿಟ್ಟು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಅನಿರ್ಧಿ ಷ್ಟಾವಧಿ ಮುಷ್ಕರ ನಡೆಯುತ್ತಿದ್ದರೂ ಅಧಿಕಾರಿಗಳ ಭಾಗದಿಂದ, ಜನ ಪ್ರತಿನಿಧಿಗಳ ಭಾಗದಿಂದ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ.
ಈ ಹಿನ್ನೆಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರದ ೮೫ನೇ ದಿನ ವೇದಿಕೆಗೆ ಶಾಸಕ ಎ ಕೆ ಎಂ ಅಶ್ರಫ್ ಆಗಮಿಸಿ ಕಾಲ್ನಡೆ ಮೇಲ್ಸೇತುವೆಯನ್ನು ನಿರ್ಮಿಸಿ ಕೊಡಲು ತಯರಾಗಿರುವ ಬಗ್ಗೆ ಸಂದೇಶ ನೀಡಿದ್ದಾರೆ. ಯು ಎಲ್ ಸಿ ಸಿ ಅಧಿಕಾರಿಗಳಲ್ಲಿ ನಿರಂತರವಾಗಿ ನಡೆಸಿದ ಒತ್ತಾಯದ ಫಲವಾಗಿ ಗುತ್ತಿಗೆದಾರರು ಈ ಬೇಡಿಕೆಯನ್ನು ಒಪ್ಪಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಇಲ್ಲಿಯ ಜನತೆಗೆ ಅಂಡರ್ ಪಾಸ್ ಆಗಲೇ ಬೇಕೆಂಬ ಒತ್ತಾಯ ಇರುವ ಕಾರಣ ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ನೂತನ ಸಂಸದರೊAದಿಗೆ ಚರ್ಚಿಸಿ ಆ ಪ್ರಯತ್ನವನ್ನು ಕೂಡಾ ಮುಂದುವರಿಸಲಿರುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಈ ಬಗ್ಗೆ ಪ್ರತಿ ಕ್ರಿಯಿಸಿದ ರಾ. ಹೆದ್ದಾರಿ ಹೋರಾಟ ಸಮಿತಿ ಪದಾಧಿಕಾರಿಗಳು ನಮಗೆ ಬೇಕಾಗಿರುವುದು ಕಾಲ್ನಡೆ ಅಂಡರ್ ಪಾಸ್ ಆಗಿದ್ದು, ಅದು ಸಿಗುವ ತನಕ ಪ್ರತಿಭಟನೆಯ ತೀವ್ರತೆ ಹೆಚ್ಚಿಸಲಿದ್ದೇವೆ. ಆದರೆ ಶಾಸಕರು ನೀಡಿದ ಸಂದೇಶ ವನ್ನು ಸ್ವಾಗತಿಸಿರುವುದಾಗಿ ತಿಳಿಸಿದ್ದಾರೆ.

RELATED NEWS

You cannot copy contents of this page