ಧಾರ್ಮಿಕ ಮುಖಂಡ ನಿಧನ

ಕಾಸರಗೋಡು: ಪೆರ್ಣೆ ಶ್ರೀ ಮುಚ್ಚಿಲೋಟು ಭಗವತಿ ಕ್ಷೇತ್ರದ ಲೆಕ್ಕ ಪರಿಶೋಧಕ (ಚೇನಪ್ಪರ್), ಕ್ಷೇತ್ರ ಸಮಿತಿ ಅಧ್ಯಕ್ಷರಾಗಿದ್ದ ಸೂರ್ಲು (ಚೂರಿ) ನಿವಾಸಿ ಅಪ್ಪು ಪಾಟಾಳಿ (79) ಇಂದು ಮುಂ ಜಾನೆ ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಕಾಸರಗೋಡು ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಮಾಜಿ ಕಾರ್ಯದರ್ಶಿಯಾಗಿದ್ದರು. ಕೃಷಿಕರಾಗಿದ್ದ ಇವರು ಹಿರಿಯ ವ್ಯಾಪಾರಿಯಾಗಿದ್ದಾರೆ.

ಮೃತರು ಪತ್ನಿ ಕುಸುಮಾವತಿ, ಮಕ್ಕಳಾದ ಮಹೇಶ್ (ಗಲ್ಫ್), ಗಣೇಶ್, ಮನೋಜ್ ಕುಮಾರ್, ವಾಣಿಶ್ರೀ, ಅಳಿಯ ಭಾಸ್ಕರ, ಸೊಸೆಯಂದಿರಾದ ವಿನುತಾ, ಜಯ ಲಕ್ಷ್ಮಿ, ಶೋಭಿತಾ, ಸಹೋದರ ರಾದ ಚಂದ್ರಶೇಖರ (ನಿವೃತ್ತ ವಿಲ್ಲೇಜ್ ಆಫೀಸರ್), ನಾರಾಯಣ, ಸಹೋದರಿಯರಾದ ಸುಶೀಲಾ, ಸೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಪಕ್ಕೀರ ಪಾಟಾಳಿ ಈ ಹಿಂದೆ ನಿಧನ ಹೊಂದಿದ್ದಾರೆ.

You cannot copy contents of this page