ವಿವಿಧೆಡೆ ಅಧ್ಯಾಪಕ ಹುದ್ದೆ ಭರ್ತಿಗೆ ಸಂದರ್ಶನ

ಮಂಜೇಶ್ವರ: ಸರಕಾರಿ ಉನ್ನತ ಪ್ರೌಢ ಶಾಲೆ ಬಂಗ್ರಮAಜೇಶ್ವರದಲ್ಲಿ ಖಾಲಿಯಿರುವ ಹುದ್ದೆಗಳಿಗೆ ದಿನವೇತನ ಆಧಾರದಲ್ಲಿ ನೇಮಕಾತಿ ನಡೆಸಲು ನಾಳೆ ಸಂದರ್ಶನ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಅರ್ಹರು ಭಾಗವಹಿಸಬಹುದು. ಎಚ್ಎಸ್ಟಿ ಹಿಂದಿ, ಸೋಶಿಯಲ್ ಸಯನ್ಸ್ (ಮಲಯಾಳ), ಫಿಸಿಕಲ್ ಸಯನ್ಸ್ (ಮಲಯಾಳ), ಯುಪಿಎಸ್ಟಿ ಮಲಯಾಳ, ಕನ್ನಡ, ಎಲ್ಪಿಎಸ್ಟಿ ಮಲಯಾಳ, ಕನ್ನಡ, ಅರಬಿಕ್ ಯುಪಿ ಹುದ್ದೆ ಖಾಲಿಯಿದೆ.
ಆದೂರು: ಪಳ್ಳಂಗೋಡು ಜಿಯುಪಿ ಎಸ್ನಲ್ಲಿ ಖಾಲಿಯಿರುವ ಯುಪಿಎಸ್ಟಿ (ಮಲಯಾಳ), ಜ್ಯೂನಿಯರ್ ಲ್ಯಾಂಗ್ವೇಜ್ ಅರೆಕಾಲಿಕ ಅರಬಿಕ್ (ಯುಪಿ), ಜ್ಯೂನಿಯರ್ ಲ್ಯಾಂಗ್ವೇಜ್ ಅರೆಕಾಲಿಕ ಹಿಂದಿ ಎಂಬೀ ಹುದ್ದೆಗಳನ್ನು ಭರ್ತಿಗೊ ಳಿಸಲು ಈ ತಿಂಗಳ 31ರಂದು ಅಪರಾಹ್ನ 2 ಗಂಟೆಗೆ ಸಂದರ್ಶನ ನಡೆಯಲಿದೆ.
ಕಾಸರಗೋಡು: ಜಿವಿಎಚ್ ಎಸ್ಎಸ್ ಫಾರ್ ಗರ್ಲ್ಸ್ ಹೈಸ್ಕೂಲ್ನ ಕನ್ನಡ ಮಾಧ್ಯಮ ಗಣಿತ, ಸಂಸ್ಕೃತ, ಕನ್ನಡ (ಅರೆಕಾಲಿಕ) ಹುದ್ದೆ ಭರ್ತಿಗೆ ಜೂನ್ 1ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಮೂಡಂಬೈಲು: ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಖಾಲಿಯಿರುವ ಎಚ್ಎಸ್ಟಿಫಿಸಿಕಲ್ ಸಯನ್ಸ್ (ಕನ್ನಡ), ಹಿಂದಿ, ಯುಪಿಎಸ್ಟಿ (ಕನ್ನಡ) ಹುದ್ದೆ ಭರ್ತಿಗೆ ಈ ತಿಂಗಳ 31ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಕಾವುಗೋಳಿ: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿಯಿರುವ ಎಲ್ಪಿಎಸ್ಟಿ ಕನ್ನಡ-1 ಹುದ್ದೆಯನ್ನು ಭರ್ತಿಗೊಳಿಸಲು ನಾಳೆ ಬೆಳಿಗ್ಗೆ 11 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಕೆ-ಟೆಟ್ ಆದವರಿಗೆ ಆದ್ಯತೆ ನೀಡಲಾಗುವುದು.
ಕುಂಬಳೆ: ಉಜಾರು ಉಳುವಾರು ಜಿಬಿಎಲ್ಪಿ ಶಾಲೆಯಲ್ಲಿ ಖಾಲಿಯಿ ರುವ ಎಲ್ಪಿಎಸ್ಟಿ (ಕನ್ನಡ, ಮಲೆಯಾಳ), ಫುಲ್ಟೈಂ ಭಾಷಾ ಶಿಕ್ಷಕರು (ಅರೆಬಿಕ್) ಹುದ್ದೆ ಭರ್ತಿಗೆ ಜೂನ್ 1ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.

RELATED NEWS

You cannot copy contents of this page