ಕಂಟೈನರ್ ಲಾರಿ ಸ್ಪರ್ಶಿಸಿ ತುಂಡಾಗಿ ಬಿದ್ದ ವಿದ್ಯುತ್ ತಂತಿ: ತಪ್ಪಿದ ಭಾರೀ ದುರಂತ

ಕುಂಬಳೆ: ಕಂಟೈನರ್ ಲಾರಿಯ ಕ್ಯಾಬಿನ್ ಸ್ಪರ್ಶಿಸಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಅದೃಷ್ಟವಶಾತ್ ಅಪಾಯ ತಪ್ಪಿದೆ. ಕುಂಬಳೆ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ಜೀನಸು ಅಂಗಡಿಯೊಂದರ ಬಳಿ ನಿನ್ನೆ ರಾತ್ರಿ 7.30ರ ವೇಳೆ   ಘಟನೆ ನಡೆದಿದೆ. ವಿದ್ಯುತ್ ತಂತಿ ತಂಡಾಗಿ ಬೀಳುವುದನ್ನು ಕಂಡು ಅಂಗಡಿ ಸಮೀಪದಲ್ಲಿದ್ದವರು ಓಡಿ ದೂರ ಸರಿದುದರಿಂದ ಭಾರೀ ದುರಂತ ತಪ್ಪಿಹೋಗಿದೆ.  ತುಂಡಾದ ವಿದ್ಯುತ್ ತಂತಿ ರೈಲ್ವೇ ನಿಲ್ದಾಣ ಸಮೀಪ ವ್ಯಾಪಾರಿಯಾಗಿರುವ  ಮೊಹಮ್ಮದ್ ಎಂಬವರು ಮಸೀದಿಗೆ ನಡೆದು ಹೋಗುತ್ತಿದ್ದಾಗ ಅವರ ದೇಹದ ಮೇಲೆ ಬಿದ್ದಿದೆ. ತುಂಡಾದ ಪರಿಣಾಮ ವಿದ್ಯುತ್ ಸರಬರಾಜು ಇಲ್ಲದ ತಂತಿ ಅವರ ದೇಹಕ್ಕೆ ಬಿದ್ದಿತ್ತು. ಇದರಿಂದ ಯಾವುದೇ ಅಪಾಯ ಸಂಭವಿಸಿಲ್ಲ, ಘಟನೆ ಬಗ್ಗೆ ಕೂಡಲೇ ನಾಗರಿಕರು ನೀಡಿದ ಮಾಹಿತಿಯಂತೆ ವಿದ್ಯುತ್ ಕಚೇರಿ ಅಧಿಕಾರಿಗಳು ರೈಲ್ವೇ ನಿಲ್ದಾಣ ಭಾಗಕ್ಕಿರುವ ವಿದ್ಯುತ್ ಸಂಪರ್ಕವನ್ನು ವಿಚ್ಛೇಧಿಸಿದರು. ಮಂಗಳೂರಿನಿಂದ ಸರಕು ಸಹಿತ ತಲುಪಿದ ಕಂಟೈನರ್ ಲಾರಿ ಸರಕು ಇಳಿಸಿ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

You cannot copy contents of this page