ಉಪ್ಪಳ ನಿವಾಸಿ ಮುಂಬಯಿಯಲ್ಲಿ ಕುಸಿದು ಬಿದ್ದು ಮೃತ್ಯು

ಕುಂಬಳೆ: ಉಪ್ಪಳ ಮೂಸೋಡಿ ನಿವಾಸಿ ಮೂಸ ಇಬ್ರಾಹಿಂ (63) ಎಂಬವರು ಮುಂಬಯಿಯಲ್ಲಿ  ಕುಸಿದು ಬಿದ್ದು ಮೃತಪಟ್ಟರು. ಇವರು ಮುಂಬಯಿಯಲ್ಲಿ ಹೋಟೆಲ್ ವ್ಯಾಪಾರಿಯಾಗಿದ್ದರು. ನಿನ್ನೆ ಸಂಜೆ ವಾಸಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿಯರಾದ ನಫೀಸ, ತಸ್ಲೀಮ, ಮಕ್ಕಳಾದ ಅಮೀರ್, ಸುಲ್ತಾನ, ಸುನೈನ, ಇರ್ಶಾನ, ತಸ್ರೀನ, ಫರ್ಸಾನ, ಮುನೀರ್, ಫರ್ಹಾನ, ಸಹೋದರ- ಸಹೋದರಿಯರಾದ ಯೂಸಫ್, ಅಬೂಬಕರ್, ಮರಿಯಮ್ಮ, ನಫೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಪುತ್ರಿ ರೈಹಾನ ಈ ಹಿಂದೆ ನಿಧನರಾಗಿದ್ದಾರೆ.

ಮೂಸಾ ಇಬ್ರಾಹಿಂರ ಮೃತದೇಹವನ್ನು ಕೇರಳ ಮುಸ್ಲಿಂ ಜಮಾಅತ್ ಸೆಕ್ರೆಟರಿ ಹನೀಫ್, ಕೌನ್ಸಿಲ್ ಸದಸ್ಯ ಇಸ್ಮಾಯಿಲ್ ನೇತೃತ್ವದಲ್ಲಿ ಊರಿಗೆ ತರಲಾಗುತ್ತಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

RELATED NEWS

You cannot copy contents of this page