ಕುರಿಯ ಶಾಲಾ ಹಳೇ ವಿದ್ಯಾರ್ಥಿ ಸಂಘ ಸಮಾವೇಶ

ಪೈವಳಿಕೆ: ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢ ಶಾಲಾ ಹಳೇ ವಿದ್ಯಾರ್ಥಿ ಸಂಘದ ಸಮಾವೇಶ ಇತ್ತೀಚೆಗೆ ನಡೆಯಿತು. ಶಾಲೆಯ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಶಾಲಾ ಸಂಚಾಲಕ ಗೋಪಾಲಕೃಷ್ಣ ಶಾಸ್ತ್ರಿ, ನಿವೃತ್ತಿ ಮುಖ್ಯೋಪಾಧ್ಯಾಯರು ಗಳು, ಅಧ್ಯಾಪಕರು, ಸಿಬಂದಿಗಳು, ಮುಖ್ಯೋಪಾಧ್ಯಾಯಿನಿ ಗಾಯತ್ರಿ.ಕೆ, ಅಧ್ಯಾಪಕರು, ಅಧ್ಯಾಪಕೇತರ ಸಿಬಂದಿ ವರ್ಗದವರು ಹಾಗೂ ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆವರಣ ಗೋಡೆ ಹಾಗೂ ಆಟದ ಮೈದಾನದ ಕೆಲಸವನ್ನು ಆದಷ್ಟು ಬೇಗ ಪೂರ್ತಿಗೊಳಿ ಸುವುದು, ಇಂಗ್ಲಿಷ್ ಮಾಧ್ಯಮವನ್ನು ಪ್ರಾರಂಭಿಸುವುದು ಪ್ಲಸ್-ವನ್ ಕೋರ್ಸನ್ನು ಶೀಘ್ರವಾಗಿ ಆರಂಭಿಸುವ ವ್ಯವಸ್ಥೆಯನ್ನು ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

You cannot copy contents of this page