ಕುಂಬಳೆಯಲ್ಲಿ ಬಸ್ ನಿಲ್ದಾಣ ಶೀಘ್ರ ನಿರ್ಮಿಸಲು ಎಸ್‌ವೈಎಸ್ ಆಗ್ರಹ

ಕುಂಬಳೆ: ಆರು ವರ್ಷದ ಹಿಂದೆ ಮುರಿದು ತೆರವುಗೊಳಿಸಿದ ಕುಂಬಳೆ ಬಸ್ ನಿಲ್ದಾಣ ಕಾಂಪ್ಲೆಕ್ಸ್ ಪುನರ್ ನಿರ್ಮಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಎಸ್‌ವೈಎಸ್ ಕುಂಬಳೆ ವಲಯ ವಿಚಾರ ಸದಸ್ ಆಗ್ರಹಿಸಿದೆ. ಅಂತಾರಾಜ್ಯ ಸಂಚಾರ ಸಹಿತ 400ರಷ್ಟು ಬಸ್‌ಗಳು ಹತ್ತಿ ಇಳಿಯುವ ಇಲ್ಲಿ ಈಗ ಪ್ರಯಾಣಿಕರಿಗೆ ಬಸ್‌ಗಾಗಿ ಕಾಯಲು ಸೂಕ್ತ ಸ್ಥಳವಿಲ್ಲದೆ ಬಿಸಿಲು, ಮಳೆಗೆ ನಿಲ್ಲಬೇಕಾದ ಸ್ಥಿತಿ ಇದೆ. ಕಾಸರಗೋಡು, ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ, ಕುಂಬಳೆ- ಮುಳ್ಳೇರಿಯ, ಕುಂಬಳೆ- ಪೆರ್ಮುದೆ ಮೊದಲಾದ ಸ್ಥಳಗಳಿಗಿರುವ ಪ್ರಯಾಣಿಕರು ಬಸ್‌ಗಾಗಿ ಕಾಯುವ ಪ್ರಮುಖ ಕೇಂದ್ರವಾಗಿದೆ ಕುಂಬಳೆ. ಇಲ್ಲಿ ಆರು ವರ್ಷದಿಂದ ಬಸ್ ನಿಲ್ದಾಣವಿಲ್ಲದೆ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಬಸ್ ನಿಲ್ದಾಣ ನಿರ್ಮಿಸಲು ಕ್ರಮವುಂಟಾಗಬೇಕೆಂದು ವಿಚಾರ ಸದಸ್ ಆಗ್ರಹಿಸಿದೆ.

You cannot copy contents of this page