ಕೋಳಿ ಅಂಕ: 5 ಮಂದಿ ಸೆರೆ

ಉಪ್ಪಳ:  ಮೂಡಂಬೈಲು ಬೆಜ್ಜ ದೈವಸ್ಥಾನ ಬಳಿ ನಿನ್ನೆ ಸಂಜೆ ಕೋಳಿ ಅಂಕದಲ್ಲಿ ನಿರತರಾಗಿದ್ದ  5 ಮಂದಿ ಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಕೋಳಿ ಹಾಗೂ 3000 ರೂ. ವಶಪಡಿಸಲಾಗಿದೆ.  ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ ರಸ್ತೆ ಬಳಿಯ ಪ್ರವೀಣ್ ಕುಮಾರ್ (40), ಉದ್ಯಾವರ ಮಾಡ ಕ್ಷೇತ್ರ ಬಳಿಯ ರವಿ (51),ಉಳ್ಳಾಲ ಚೆಂಬುಗುಡ್ಡೆ ಫಾತಿಮ ಮಂಜಿಲ್‌ನ ಅಬ್ದುಲ್ ರೌಫ್ (50), ತಲಪಾಡಿ ದೇವಿಪುರ ಕ್ಷೇತ್ರ ರಸ್ತೆಯ ಸತೀಶ್ ಶೆಟ್ಟಿ (48), ಕೋಟೆಕಾರ್ ಮಾಡೂರು ನಿವಾಸಿ ಅಶೋಕ (37) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಮೂಡಂಬೈಲಿನಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಸ್‌ಐ ರತೀಶ್ ಕೆ.ಜಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

RELATED NEWS

You cannot copy contents of this page