ಕುಂಬಳೆ-ಕಂಚಿಕಟ್ಟೆ ರಸ್ತೆಯಲ್ಲಿ ಸಂಚಾರಕ್ಕೆ ಆತಂಕ: ಒಂದೆಡೆ ರಸ್ತೆಯಲ್ಲಿ ಹೊಂಡ ಸೃಷ್ಟಿ ಇನ್ನೊಂದೆಡೆ ಮಾನವ ನಿರ್ಮಿತ ಹೊಂಡ

ಕುಂಬಳೆ: ಕುಂಬಳೆಯಿಂದ ಕೊಡ್ಯಮ್ಮೆ ಭಾಗಕ್ಕೆ ತೆರಳುವ ರಸ್ತೆ ಮಧ್ಯೆ ಕಂಚಿಕಟ್ಟೆಯಲ್ಲಿ ಆಳದ ಗುಹೆ ಪ್ರತ್ಯಕ್ಷಗೊಂಡಿದೆ. ಡಾಮರು ರಸ್ತೆಯ ಮಧ್ಯೆ ಹೊಂಡ ಸೃಷ್ಟಿಯಾಗಿದ್ದು, ಅದು ಒಳಗೆ ಆಳವಾಗಿ ಕಾಣಿಸುತ್ತಿದೆ. ಇದರಿಂದ ಇಕ್ಕಟ್ಟಾದ ಈ ರಸ್ತೆಯಲ್ಲಿ ಹೊಂಡ ಸೃಷ್ಟಿಯಾಗಿರುವುದು  ಅಪಾಯ ಭೀತಿಯೊಡ್ಡುತ್ತಿದೆ. ಇದರಿಂದ ಸ್ಥಳೀ ಯರು ಅಲ್ಲಿ ಕಲ್ಲುಗಳನ್ನಿರಿಸಿ ಮುನ್ಸೂ ಚನೆ ನೀಡದ್ದಾರೆ. ಈ ಹೊಂಡವನ್ನು ಶೀಘ್ರ ಮುಚ್ಚದಿದ್ದಲ್ಲಿ ರಸ್ತೆ ಪೂರ್ಣ ಹೊಂಡವಾಗಿ ಮಾರ್ಪಾಡುಗೊಳ್ಳಲಿ ವೆಯೆಂದು ಸ್ಥಳೀಯರು ಹೇಳುತ್ತಿದ್ದಾರೆ.

ಇದೇ ರಸ್ತೆಯಲ್ಲಿ ಇನ್ನೊಂದೆಡೆ ಮಾನವನ ಕೆಲಸದಿಂದ ರಸ್ತೆ ಹಾನಿಗೀ ಡಾಗಿದ್ದು, ಸಂಚಾರಕ್ಕೆ ಸಮಸ್ಯೆ ಎದುರಾ ಗಿದೆ. ಕುಂಬಳೆ ಹೋಲಿ ಫ್ಯಾಮಿಲಿ ಶಾಲೆ ಬಳಿಯ ಕೆಎಸ್‌ಟಿಪಿ ರಸ್ತೆಯಿಂದ ಕಂಚಿಕಟ್ಟೆ ಭಾಗಕ್ಕೆ ತೆರಳುವಲ್ಲಿ ಚರಂಡಿ ನಿರ್ಮಾಣಕ್ಕೆಂದು ರಸ್ತೆಯನ್ನು ಅಗೆಯಲಾಗಿತ್ತು. ಚರಂಡಿ ನಿರ್ಮಿಸಿ ಅದಕ್ಕೆ ಸ್ಲ್ಯಾಬ್ ಅಳವಡಿಸಲಾಗಿದೆ. ಆದರೆ ಅದರ ಸಮೀಪದಲ್ಲಿ ಹೊಂಡ ಹಾಗೆಯೇ ಉಳಿದುಕೊಂಡಿದೆ.

ಇಂಟರ್ ಲಾಕ್ ಅಳವಡಿಸಿದ್ದ ರಸ್ತೆಯನ್ನು ಚರಂಡಿಗಾಗಿ ಅಗೆದು ಅದನ್ನು ಸರಿಯಾಗಿ ಮುಚ್ಚದಿರುವುದು ಇದೀಗ ಸಮಸ್ಯೆಯಾಗಿ ಪರಿಣಮಿಸಿದೆ. ಇತ್ತೀಚೆಗೆ ಈ ಹೊಂಡಕ್ಕೆ ಪಂಚಾಯತ್ ಸದಸ್ಯ ರಮೇಶ್ ಭಟ್ ಮಣ್ಣು ಹಾಕಿ ಹೊಂಡ ಮುಚ್ಚಿದ್ದರು. ಆದರೆ ಅನಂತರ ಸುರಿದ ಮಳೆಗೆ  ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರಿಂದ ಇಲ್ಲಿ ಮತ್ತೆ ಸಮಸ್ಯೆ ಎದುರಾಗಿದೆ.

You cannot copy contents of this page