ಬಾಡೂರು ನವಚೇತನ ಯೂತ್ ಕ್ಲಬ್ ಪದಾಧಿಕಾರಿಗಳು

ಬಾಡೂರು: ನವಚೇತನ ಯೂತ್ ಕ್ಲಬ್ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನವಚೇತನ ಇಂಡೋರ್ ಮೈದಾನದಲ್ಲಿ ಜರಗಿತು. ಕ್ಲಬ್‌ನ ಅಧ್ಯಕ್ಷ ಸುಬೈರ್ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸಚಿನ್‌ರಾಜ್ ಎಂ. ಸ್ವಾಗತಿಸಿ, ವರದಿ ಮಂಡಿಸಿದರು. ಪುತ್ತಿಗೆ ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಸದಸ್ಯೆ ಅನಿತಾ ಎಂ., ಪ್ರೇಮ ಎಸ್. ಶುಭ ಕೋರಿದರು. ಸದಸ್ಯರಾದ ಎಂ.ಕೆ. ಆನಂದ, ಶಿವಪ್ಪ ರೈ, ಚನಿಯ ಪಾಡಿ, ಪಿ.ಬಿ. ಮೊಹಮ್ಮದ್, ಪ್ರಭಾಕರನ್ ಡಿ. ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಚಿನ್‌ರಾಜ್ ಎಂ., ಕಾರ್ಯದರ್ಶಿಯಾಗಿ ಕೃಪರಾಜ್ ಕೆ.ಎಸ್, ಕೋಶಾಧಿಕಾರಿಯಾಗಿ ಸಂತೋಷ್ ರೈ ಬಿ.ಪಿ, ಉಪಾಧ್ಯಕ್ಷರಾಗಿ ಪ್ರಶಾಂತ್ ಶೆಟ್ಟಿ, ಪೂರ್ಣಚಂದ್ರ, ಜೊತೆ ಕಾರ್ಯದರ್ಶಿಗಳಾಗಿ ಮಹೇಶ್ ಕೆ.ಎಸ್, ವಿಖ್ಯಾತ್ ರೈ ಆಯ್ಕೆಯಾದರು. ಕೃಪರಾಜ್ ಕೆ.ಎಸ್. ವಂದಿಸಿದರು.

You cannot copy contents of this page