ರೈಲಿನಲ್ಲಿ ಸಿಕ್ಕಿದ ಚಿನ್ನದ ಸರ ವಾರಿಸುದಾರರಿಗೆ ಹಸ್ತಾಂತರಿಸಿ ಮಾದರಿಯಾದ ಬ್ಲೋಕ್ ಪಂಚಾಯತ್ ಸಿಬ್ಬಂದಿ

ಕಾಸರಗೋಡು: ರೈಲಿನಲ್ಲಿ ಸಿಕ್ಕಿದ ಚಿನ್ನದ ಸರವನ್ನು ಬ್ಲೋಕ್ ಪಂಚಾಯತ್ ಸಿಬ್ಬಂದಿ ಅದರ ವಾರೀಸುದಾರ ಳಾದ ಮಹಿಳೆಗೆ ಹಸ್ತಾಂತರಿಸಿ ಎಲ್ಲರಿಗೂ ಮಾದರಿಯಾಗಿ ದ್ದಾರೆ. ಕಾರಡ್ಕ ಬ್ಲೋಕ್ ಪಂಚಾಯತ್ ಕಚೇರಿ ಸಿಬ್ಬಂದಿ ಪಾಪಿನ್‌ಶ್ಶೇರಿ ನಿವಾಸಿ ಪಿ. ಶಾನವಾಸ್ ಈ ರೀತಿ ಮಾದರಿಯಾದ ವ್ಯಕ್ತಿ. ಮಂಜೇಶ್ವರ ಎಇಒ ಕಚೇರಿಯ ಸಿಬ್ಬಂದಿ ಚೆರುವತ್ತೂರಿನ ಪ್ರೀತ ಎಂಬಿವರು ಕಳೆದ ಶುಕ್ರವಾರದಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ನಷ್ಟಗೊಂಡಿತ್ತು. ಆ ಬಗ್ಗೆ ಅವರು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು. ನಷ್ಟಗೊಂಡ ಈ ಸರ ಶಾನವಾಸ್‌ರಿಗೆ ಸಿಕ್ಕಿದ್ದು, ಅದನ್ನು ಅವರು ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಂತರ ರೈಲ್ವೇ ಠಾಣೆಯ ಎಸ್‌ಐ ಎಂ.ವಿ. ಪ್ರಕಾಶನ್ ಮತ್ತು ಸಿಪಿಒ ಪಿ. ಅಜೆಯನ್‌ರ ಸಾನ್ನಿಧ್ಯದಲ್ಲಿ ಶಾನವಾಸ್ ಅವರು ಪ್ರೀತಾರಿಗೆ ಸರ ಹಸ್ತಾಂತರಿಸಿದರು.

RELATED NEWS

You cannot copy contents of this page