ಚಾತುರ್ಮಾಸ್ಯ: ಪೂರ್ವಭಾವಿಯಾಗಿ ಶ್ರೀಗಳಿಂದ ಕ್ಷೇತ್ರ ಸಂದರ್ಶನ

ಮಂಜೇಶ್ವರ: ಚಾತುರ್ಮಾಸ್ಯ ವ್ರತ ಸಂಕಲ್ಪದ ಪೂರ್ವಭಾವಿಯಾಗಿ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗುರುಗಳ ಪಾದಪೂಜೆ ನೆರವೇರಿಸ ಲಾಯಿತು. ಚಾತುರ್ಮಾಸ್ಯದ ಆಮಂ ತ್ರಣ ಪತ್ರಿಕೆಯನ್ನು ದೇವಸ್ಥಾನದ ಅಧ್ಯಕ್ಷ ಬಿ.ಎಂ. ಯದುನಂದನ ಆಚಾರ್ಯ ಮತ್ತು ಪದಾಧಿಕಾರಿಗಳಿಗೆ ಹಾಗೂ ಮೊಕ್ತೇಸರ ರಿಗೆ ಚಾತುರ್ಮಾಸ್ಯ ಸಮಿತಿ ಕೋಶಾ ಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು, ಕಾರ್ಯದರ್ಶಿ ಲೋಲಾಕ್ಷ ಶರ್ಮಾ ಪಡುಕುತ್ಯಾರು ಹಸ್ತಾಂತರಿಸಿದರು. ನಂತರ ಸ್ವಾಮೀಜಿ ಆಶೀರ್ವಚನ ನೀಡಿದರು.

RELATED NEWS

You cannot copy contents of this page