ಕಾರುಗಳ ಮಧ್ಯೆ ಅಪಘಾತ: ಓರ್ವ ಮೃತ್ಯು; ಮೂವರಿಗೆ ಗಾಯ

ವರ್ಕಾಡಿ: ಎರಡು ಕಾರುಗಳ ಮಧ್ಯೆ ಉಂಟಾದ ಅಪಘಾತದಲ್ಲಿ ಓರ್ವ ಮೃತಪಟ್ಟು ಮೂರು ಮಂದಿ ಗಂಭೀರ ಗಾಯಗೊಂಡ ಘಟನೆ ನಿನ್ನೆ ರಾತ್ರಿ 11 ಗಂಟೆಗೆ ಮೊರತ್ತಣೆ ಜಂಕ್ಷನ್‌ನಲ್ಲಿ ಸಂಭವಿಸಿದೆ. ತಲೇಕಳ ಕುದ್ರೆಪ್ಪಾಡಿ ನಿವಾಸಿ ಅಬೂಬಕರ್ ಮುಸ್ಲಿಯಾರ್ (65) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರ ಪತ್ನಿ ಆಮಿನ, ಪುತ್ರಿ ಸುಮಯ್ಯ, ಸೊಸೆ ಸಾಬಿರ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸಾಬಿರ ಚಲಾಯಿಸುತ್ತಿದ್ದ ಆಲ್ಟೋ ಕಾರು ಮೊರತ್ತಣೆಯಲ್ಲಿ ಹೊಸಂಗಡಿ- ಸುಂಕದಕಟ್ಟೆ ರಸ್ತೆಯನ್ನು ದಾಟಿ ತಲೇಕಳ ಭಾಗಕ್ಕೆ ತೆರಳುತ್ತಿದ್ದಾಗ ಮಜೀರ್‌ಪಳ್ಳ ಭಾಗದಿಂದ ಹೊಸಂಗಡಿಯತ್ತ ತೆರಳುತ್ತಿದ್ದ ಪೊಸೋಟು ನಿವಾಸಿಯ ಇನ್ನೋವ ಕಾರು ಢಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರುಗಳೆರಡಕ್ಕೂ ಹಾನಿಯಾಗಿದೆ. ಇದೇ ವೇಳೆ ಆಲ್ಟೋದಲ್ಲಿದ್ದ ನಾಲ್ಕು ಮಂದಿಯಲ್ಲಿ ಅಬೂಬಕರ್ ಮುಸ್ಲಿಯಾರ್‌ರನ್ನು ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆದರೆ ಅವರು ನಿಧನ ಹೊಂದಿದರು. ಮೃತರು ಎಸ್‌ವೈಎಸ್ ತಲೇಕಳ ಶಾಖೆಯ ಕಾರ್ಯದರ್ಶಿ ಹಾಗೂ ಮುಸ್ಲಿಂ ಲೀಗ್ ತಲೇಕಳ ಶಾಖೆಯ ಕೋಶಾಧಿಕಾರಿಯಾಗಿದ್ದರು.

ಮೃತರು ಪತ್ನಿ ಹೊರತು ಇತರ ಮಕ್ಕಳಾದ ಸೌದ, ಹಾರೀಸ್, ಆಶಿಕ್, ಅನ್ಸಾರ್, ಇನ್ನಿಬ್ಬರು ಸೊಸೆಯಂದಿರಾದ ಫರ್ಜಾನ, ಇಸ್ಮತ್, ಅಳಿಯ ಸತ್ತಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಂಜೇಶ್ವರ

ಪೊಲೀಸರು ಪ್ರಕರಣ ದಾಖಲಿ ಸಿಕೊಂಡಿದ್ದಾರೆ.

RELATED NEWS

You cannot copy contents of this page