ಎಂಡಿಎಂಎ ಸಹಿತ ಯುವಕ ಸೆರೆ: ಕಾರು ವಶ

ಕಾಸರಗೋಡು: ಚೆರ್ಕಳ ಮಾರ್ತೋಮಾ ಶಾಲೆ  ಪರಿಸರದಲ್ಲಿ ವಿದ್ಯಾನಗರ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 4.33 ಗ್ರಾಂ ಮಾದಕದ್ರವ್ಯವಾದ ಎಂಡಿಎಂಎ ಸಹಿತ ಯುವಕನನ್ನು ಬಂಧಿಸಿದ್ದಾರೆ. ಆಲಂಪಾಡಿ ಎರಿ ಯಪ್ಪಾಡಿಯ ಕೆ.ಎಂ. ಜಾಬೀರ್ 32) ಬಂಧಿತ ಯುವಕ. ಈತ ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ನಿನ್ನೆ ಸಂಜೆ ಈ ಕಾರ್ಯಾಚರಣೆ ನಡೆದಿದೆ. ವಿದ್ಯಾನಗರ ಎಸ್‌ಐ ವಿ.ವಿ. ಅಜೀಶ್. ಎಎಸ್‌ಐ ಪ್ರಸಾದ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ರತೀಶ್, ಬೈಜು ಎಂಬವರನ್ನೊಳ ಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

RELATED NEWS

You cannot copy contents of this page