ರೈಲು ಹಳಿಯಲ್ಲಿ ಯುವಕನ ಮೃತದೇಹ ಪತ್ತೆ

ಉಪ್ಪಳ: ರೈಲು ಹಳಿಯಲ್ಲಿ ಅನ್ಯ ರಾಜ್ಯ ಕಾರ್ಮಿಕನ ಮೃತದೇಹ ಕಂಡುಬಂದಿದೆ. ನಿನ್ನೆ ಬೆಳಿಗ್ಗೆ ೮ ಗಂಟೆ ವೇಳೆ ಮಣಿ ಮುಂಡ ಬಳಿ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ.  ಉತ್ತರಪ್ರದೇಶ ಫಣಿಕಾಪುರ್ ನಿವಾಸಿ ಅಜಯ್ ಕುಮಾರ್ (36) ಮೃತಪಟ್ಟವರು. ನಿನ್ನೆ ಸೆಂಟ್ರಿಂಗ್ ಕೆಲಸಕ್ಕೆಂದು ಮಣಿ ಮುಂಡದಲ್ಲಿ ವಾಸಿಸುತ್ತಿದ್ದ ಕ್ವಾರ್ಟರ್ಸ್‌ನಿಂದ ತೆರಳಿದ್ದರು. ಬಳಿಕ ಸ್ಥಳೀಯರು ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಂಗಳೂರಿನಿಂದ ಕಾಸರಗೋಡಿನತ್ತ ತೆರಳುತ್ತಿದ್ದ ರೈಲು ಢಿಕ್ಕಿಹೊಡೆದಿರಬೇಕೆಂದು ಶಂಕಿಸಲಾಗಿದೆ. ಇವರ ಚಿಕ್ಕಪ್ಪನ  ಪುತ್ರ ಸೋಮನಾಥ ಈಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಮೃತದೇಹದ ಮಹಜರು ಮಂಗಲ್ಪಾಡಿ ತಾಲೂ ಕು ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ಊರಿಗೆ ಕೊಂಡೊಯ್ಯಲಾಗಿದೆ.

RELATED NEWS

You cannot copy contents of this page