ಕೊಚ್ಚಿ: ಬೈಕ್ ಖರೀದಿಗೆಂದು ತಲುಪಿದ ಯುವಕ ಸೆಕೆಂಡ್ ಸೇಲ್ ಶೋರೂಂನಿಂದ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬೈಕ್‌ನೊಂದಿಗೆ ಪರಾರಿಯಾಗಿದ್ದಾನೆ. ಆಲುವಾ ಅಸೀಸ್ ಜಂಕ್ಷನ್‌ನ ಫೋರ್ ವ್ಹೀಲ್ ಡ್ರೈವ್ ಎಂಬ ಸಂಸ್ಥೆಯಿಂದ ಕಳವು ನಡೆಸಲಾಗಿದೆ. ಟೆಸ್ಟ್‌ರೈಡ್‌ಗೆಂದು ನೀಡಿದ ಬೈಕ್‌ನೊಂದಿಗೆ ಯುವಕ ವೇಗದಲ್ಲಿ ಸಂಚರಿಸಿ ಪರಾರಿಯಾಗಿ ದ್ದನೆನ್ನ ಲಾಗಿದೆ. ಗಂಟೆಗಳು ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಈತ ಕಳ್ಳನಾಗಿರಬೇಕೆಂದು ಶೋರೂಂ ನೌಕರರು ತಿಳಿದುಕೊಂಡರು. ಮಾರುಕಟ್ಟೆಯಲ್ಲಿ ಒಂದೂವರೆ ಲಕ್ಷ ರೂ.ಗೂ ಹೆಚ್ಚು ಬೆಲೆಬಾಳುವ ಬಜಾಜ್ ಕಂಪೆನಿಯ ಡೋಮಿ ನಾರ್ ಬೈಕ್ ಈತ ಅಪಹರಿಸಿದ್ದಾನೆ.
ಆರೋಪಿಯ ದೃಶ್ಯಗಳು ಅಂಗಡಿ ಯ ಸಿಸಿ ಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದೆ ಯಾದರೂ ಈತನ ಬಗ್ಗೆ ಸರಿಯಾದ ಮಾಹಿತಿಗಳು ಇದುವರೆಗೂ ಲಭ್ಯವಾಗಿಲ್ಲ. ನಿನ್ನೆ ಮಧ್ಯಾಹ್ನ 1.45ರ ವೇಳೆ ಘಟನೆ ನಡೆದಿದೆ. ಸಂಸ್ಥೆಯ ನೌಕರರೆಲ್ಲ ಮಧ್ಯಾಹ್ನ ಊಟ ಮಾಡುತ್ತಿರುವಾಗ ೩೦ರ ಹರೆಯದ ಓರ್ವ ವ್ಯಕ್ತಿ ಶೋರೂಂಗೆ ತಲುಪಿದ್ದಾನೆ. ಈ ವೇಳೆ ಸಂಸ್ಥೆಯಲ್ಲಿದ್ದ ಪಾಲುದಾರ ಅಶೋಕಪುರಂ ನಿವಾಸಿ ಫೈಸಲ್ ಯುವಕನೊಂದಿಗೆ ಮಾತನಾಡಿದ್ದಾರೆ.
ಬೈಕ್ ಖರೀದಿಸಲು ತಲುಪಿರುವು ದಾಗಿ ಹೇಳಿದ ಹಿನ್ನೆಲೆಯಲ್ಲಿ ಫೈಸಲ್ ಯುವಕನಿಗೆ ಬೈಕ್‌ಗಳ ಮಾದರಿಯನ್ನು ತೋರಿಸಿದ್ದಾರೆ. ಹಲವು ಬೈಕ್ ಗಳನ್ನು ಪರಿಶೀಲಿಸಿದ ಬಳಿಕ ಟೆಸ್ಟ್ ರೈಡ್‌ಗೆ ಎಂಬ ಹೆಸರಲ್ಲಿ ಈ ಬೈಕ್‌ನ್ನು ಯುವಕ ಪಡೆದಿದ್ದಾನೆ. ಸಾಮಾನ್ಯವಾಗಿ ಶೋರೂಂನ ಪಾರ್ಕಿಂಗ್ ಮಿತಿಯೊಳಗೆ ಮಾತ್ರವೇ ವಾಹನಗಳಿಗೆ ಟೆಸ್ಟ್ ಡ್ರೈವ್ ನೀಡುತ್ತಿರುವುದು. ಆದರೆ ಬೈಕ್ ಸ್ಟಾರ್ಟ್ ಮಾಡಿದ ಕೂಡಲೇ ಯುವಕ ಅಪರಿಮಿತ ವೇಗದಿಂದ ಪ್ರಧಾನ ರಸ್ತೆಗೆ ಚಲಾಯಿಸಿ ತೆರಳಿದ್ದಾನೆ. ಅರ್ಧ ಗಂಟೆ ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಬೈಕ್ ನಂಬ್ರ ಸಹಿತ ಆಲುವಾ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಕೇಂದ್ರೀ ಕರಿಸಿ ತನಿಖೆ ತೀವ್ರಗೊಳಿಸಿದ್ದಾರೆ.






